

ಸಿದ್ದಾಪುರ
ಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗ
ಪುರದಮಠ ಹಾಗೂ ಯಕ್ಷತರಂಗಿಣಿ
ಹಾರ್ಸಿಕಟ್ಟಾ ಗಳಿಂದ ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಬೆಂಗಳೂರು ಸಹಕಾರದೊಂದಿಗೆ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ
ಸಮಿತಿಯಲ್ಲಿ ಗಣೇಶೋತ್ಸವದ ಅಂಗವಾಗಿ
ಶ್ರೀಕೃಷ್ಣ ಯಕ್ಷನೃತ್ಯ, ಪುಣ್ಯಕೋಟಿ
ಯಕ್ಷಗಾನ ನೃತ್ಯರೂಪಕ ಹಾಗೂ ಜಾಂಬವತಿ
ಪರಿಣಯ ಯಕ್ಷಗಾನ ಗುರುವಾರ ನಡೆಯಿತು.
https://www.youtube.com/watch?v=nInnmMVwgqs&t=472s
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ
ನಾಯ್ಕ ಉದ್ಘಾಟಿಸಿದರು. ಯಕ್ಷಗಾನ ಕಲಾವಿದ
ಪಿ.ವಿ.ಹೆಗಡೆ ಹೊಸಗದ್ದೆ ಅಧ್ಯಕ್ಷತೆವಹಿಸಿದ್ದರು.
ಗ್ರಾಪಂ ಸದಸ್ಯರಾದ ಅನಂತ ಹೆಗಡೆ
ಹೊಸಗದ್ದೆ, ವರ್ತಕ ಅನಂತ ಶಾನಭಾಗ,
ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ,
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ
ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ
ಚಳ್ಳೆಹದ್ದ, ಗಂಗಾಧರ ನಾಯ್ಕ ಹೊಸಗದ್ದೆ,
ನಾರಾಯಣ ದೇವಾಡಿಗ,ಧನಂಜಯ ನಾಯ್ಕ
ಪುರದಮಠ, ಗಣಪತಿ ಕೆ.ನಾಯ್ಕ ಇತರರಿದ್ದರು.

https://samajamukhi.net/2022/09/02/abc-2-gts-colume/
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ
ವೆಂಕಟಗಿರಿ ಹೆಗಡೆ ಹಾರ್ಸಿಮನೆ, ನಂದನ ಬಿ.ನಾಯ್ಕ
ಅರಶೀನಗೋಡ, ಪತ್ರಕರ್ತ ದಿವಾಕರ ನಾಯ್ಕ
ಸಂಪಖಂಡ, ಯೋಧರಾದ ಅಕ್ಷಯ ನಾಯ್ಕ
ಬೇಡ್ಕಣಿ ಹಾಗೂ ವಿನಾಯಕ ನಾಯ್ಕ ಬೇಡ್ಕಣಿ
ರನ್ನು ಸಂಘಟಕರು ಸನ್ಮಾನಿಸಿ ಗೌರವಿಸಿದರು.
ಶಿಕ್ಷಕ ವೆಂಕಟೇಶ ಮಡಿವಾಳ ಹಾಗೂ ಪ್ರವೀಣ
ಡಿ.ನಾಯ್ಕ ನಿರ್ವಹಿಸಿದರು.
ನಂತರ ಯಕ್ಷತರಂಗಿಣಿ ಹಾರ್ಸಿಕಟ್ಟಾ ರಿಂದ
ನಂದನ ನಾಯ್ಕ ಅರಶಿನಗೋಡ ಅವರ
ನಿರ್ದೇಶನದಲ್ಲಿ ಶ್ರೀಕೃಷ್ಣ ಯಕ್ಷನೃತ್ಯ,
ಪುಣ್ಯಕೋಟಿ ಯಕ್ಷಗಾನ ನೃತ್ಯರೂಪಕ
ಪ್ರದರ್ಶನಗೊಂಡಿತು.
ಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗ
ಪುರದಮಠ ದಿಂದ ಪ್ರದರ್ಶನಗೊಂಡ
ಜಾಂಬವತಿ ಪರಿಣಯ ಯಕ್ಷಗಾನದ ಹಿಮ್ಮೇಳದಲ್ಲಿ
ರಾಮಚಂದ್ರ ನಾಯ್ಕ ಹೆಮ್ಮನಬೈಲ್,ನಾರಾಯಣ
ಗುಡ್ಡೆಕಣ, ಧನಂಜಯ ಪುರದಮಠ
ಸಹಕರಿಸಿದರು. ಮುಮ್ಮೇಳದಲ್ಲಿ ವೆಂಕಟಗಿರಿ
ಹಾರ್ಸಿಮನೆ, ಮಂಜುನಾಥ ಶೆಟ್ಟಿ ಕಾಳೇನಳ್ಳಿ, ಬಾಬಣ್ಣ
ಕಾಳೇನಳ್ಳಿ, ನಂದನ್ ನಾಯ್ಕ ಅರಶೀನಗೋಡ
ಪಾತ್ರನಿರ್ವಹಿಸಿದರು.

ಉಚಿತ ಚೆಸ್ ಕೋಚಿಂಗ್ ಕ್ಲಾಸ್
ಸಿದ್ದಾಪುರ: ಸಿದ್ದಾಪುರದ ಬಾಲಕ-ಬಾಲಕಿಯರಿಗಾಗಿ
ಸೆಪ್ಟಂಬರ 5 ರಂದು ಸೋಮವಾರ ಉಚಿತ ಚೆಸ್ ಕೋಚಿಂಗ್ ಕ್ಲಾಸ್ ಆಯೋಜಿಸಲಾಗಿದೆ.
ಮಾರ್ಗದರ್ಶಕರಾಗಿ ಅಂತರಾಷ್ಟ್ರೀ ಚೆಸ್ ತರಬೇತುದಾರ ಶಿರಸಿಯ ರಾಮಚಂದ್ರ ಭಟ್
ಪಾಲ್ಗೊಳ್ಳುವರು. ಆಸಕ್ತರು ಇದರು ಪ್ರಯೋಜನ ಪಡೆದು ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೊಫೆಸರ್ ಎನ್.ಟಿ.ನಾಯ್ಕ ರನ್ನು ಸಂಪರ್ಕಿಸಲು ಕೋರಲಾಗಿದೆ. 9481053765/9483842543 ಈ ನಂಬರಿಗೆ ಸಂಪರ್ಕಿಸಬಹುದಾಗಿದೆ.
