


ದ್ವೀಪದ ನನ್ನ ಇಬ್ಬರು ಶಿಕ್ಷಕ ಮಿತ್ರರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಶಿವಮೊಗ್ಗದಲ್ಲೀ ನಡೆದ ಸಮಾರಂಭದಲ್ಲೀ ಗೌರವ ಸ್ವೀಕರಿಸಿರುವ ಚಂದ್ರಪ್ಪ ಮತ್ತು ಮೂಕಪ್ಪ ಶಿಕ್ಷಕರು ಮೂಲತಃ ಶರಾವತಿ ನದಿ ದಂಡೆಯ ಸ್ಥಳೀಯರೆ ಆಗಿದ್ದಾರೆ. ಇಬ್ಬರೂ ಕುದುರೂರು ಪಂಚಾಯ್ತಿ ವ್ಯಾಪ್ತಿಯಲ್ಲೆ ಪಿಯುಸಿ ತನಕ ಓದಿ ಡಿಗ್ರಿ ಮುಗಿಸಿದ ಮೊದಲ ತಲೆಮಾರಿನರಾಗಿ ತಮ್ಮ ಕುಟುಂಬದ ಕಷ್ಟ ನಷ್ಟ ನಡುವೆಯು ಶಿಕ್ಷಕರಾಗಿ ದಶಕ ಹೆಚ್ಚು ಕಾಲದಿಂದ ಸೇವೆಯಲ್ಲಿ ಇದ್ದಾರೆ.
ಈಗ ಮೇಷ್ಟ್ರುಗಳಿಗೆ ಹೆಚ್ಚು ಕೆಲಸ ಇರುವ ಕಾಲ. ಸುತ್ತಲು ಹಲವು ತರದ ನಿರ್ವಾತ ಮತ್ತು ಶುಷ್ಕತೆ ಸುತ್ತಿದೆ. ಈ ನಡುವೆ ಶಿಕ್ಷಣ ಇಲಾಖೆ ಹಿರಿಯ ಶಿಕ್ಷಕರನ್ನ ಪಾಠ ಮಾಡಲು ಬಿಡದೇ ಇಲಾಖೆ ಬೇರೇ ಬೇರೆ ಹುದ್ದೆಯಲ್ಲಿ ಅಲೆಮಾರಿ ಆಗಿಸಿದೆ. ಶಾಲೆಯಲ್ಲಿ ಇರುವ ಶಿಕ್ಷಕರು ಗುಮಾಸ್ತ ಕೆಲಸವನ್ನ ಬಳವಳಿ ನೀಡಲಾಗಿದೆ. ಕೆಲಸ ಒತ್ತಡ ನಡುವೆ ಮೇಸ್ಟ್ರುಗಳು ಹುಟ್ಟಲು ಕಷ್ಟ ಇರುವ ರೀತೀ ಇಲಾಖೆ ಒಳ ರಚನೆ ಇದೆ. ಈ ನಡುವೆ ತಮ್ಮೊಳಗಿನ ಬಹುಮುಖ ಪ್ರತಿಭೆ ಕಾಯ್ದುಕೊಂಡು ಅದನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಾ, ಅವರನ್ನ ಕಟ್ಟುತ್ತಲೆ ಸಮಾಜ ಮುಖಿ ಆಗಿ ಹಲವು ಶಿಕ್ಷಕರು ತೊಡಗಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಈ ಅವಳಿ ಶಿಕ್ಷಕರು ಸಾಕಷ್ಟು ಹಾದಿ ಸವೆಸಿದ್ದಾರೆ. ಚಂದ್ರಪ್ಪ ಮತ್ತು ಮೂಕಪ್ಪ ಶಿಕ್ಷಕರು ಬಹುಮುಖಿ ಪ್ರತಿಭೆಗಳು. ಚಂದ್ರಪ್ಪನವರು ಯಕ್ಷಗಾನ ಕಲಾವಿದರು, ಕವಿತೆ ಬರೆಯುತ್ತ, ಆಗಾಗ ಅವುಗಳಿಗೆ ರಾಗ ಜೋಡಿಸುವ ಕಲಾವಿದರ ಜತೆ ಹಾಡಿಸುತ್ತ, ಮೊಗದೊಮ್ಮೆ ಕ್ರೀಡಾ ಪಟುವಾಗೀ ಇನ್ನೊಮ್ಮೆ ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಆಯೋಜಕ ಆಗಿ ಕಾಣಿಸಿಕೊಳ್ಳುವವರು.
ಅವರೊಳಗೆ ಒಂದು ಒಳಿತಿನ ತುಡಿತ ಇದೆ. ಈ ಕಾರಣಕ್ಕೆ ವಳುರು ಎನ್ನುವ ದುರ್ಗಮ ಹಳ್ಳಿಗೆ ಕಿಚ್ಚ ಸುದೀಪ್ ತಂಡ ಕರೆದುಕೊಂಡು ಹೋಗಿ ಆ ಶಾಲೆ ಯು ಸೇರಿ ಕೆಲ ಶಾಲೆಗಳನ್ನ ದತ್ತು ತೆಗೆದುಕೊಳ್ಳುವ ಹಾಗೆ ಮಾಡಬಲ್ಲರು. ಸಿಗಂದೂರು ದೇವಾಲಯದ ಚಿತ್ತ ಸರ್ಕಾರಿ ಶಾಲೆಯತ್ತ ಯೋಜನೆ ಅಡಿ ಸ್ವತಃ ತಾವೇ ಶಿಕ್ಷಕರ ತಂಡ ರಚಿಸಿ ರಜೆ ದಿನದಲ್ಲಿ ಶಾಲೆಗೆ ಬಣ್ಣ ಬಳಿದವರು.
ಮೂಕಪ್ಪನವರು ಓದುತ್ತಾ ಬರೆಯುತ್ತಾ ತನ್ನ ಶಾಲೆಯ ಬಹುಮುಖಿ ಅಭಿವೃದ್ದಿಗೆ ಯೊಜನೆ ರೂಪಿಸುತ್ತಾ ಕ್ರಿಯಾಶೀಲರಾಗಿರುವರು. ಸರ್ಕಾರಿ ಶಾಲೆಗಳು ಸುಣ್ಣ ಬಣ್ಣ ಇಲ್ಲದೇ ಮಾಸಲು ಆಗುತ್ತಾ ಇರುವಾಗ ಕನ್ನಡ ಮನಸುಗಳ ಜತೆ ಸೇರಿ ಹೊಸ ಬಣ್ಣ ತಂದವರು. ಅವರು ಭೋಧನೆ ಮಾಡುತಾ ಇರುವ ಬ್ಯಾಕೊಡು ಹಿರಿಯ ಪ್ರಾಥಮಿಕ ಶಾಲೆ ಎದುರು ಹೋದರೆ ಒಮ್ಮೆ ನಿಂತು ನೋಡಬೇಕು ಹಾಗೆ ಗಮನ ಸೆಳೆಯುತ್ತದೆ. ಇಲಾಖೆ ಅಮೃತ ಯೊಜನೆ ಅಡಿಯಲ್ಲಿ ಡಿಜಿಟಲೀ ಕರಣ ಆಗುತ್ತಾ ಇದ್ದರೆ ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆದು ಸಮುದಾಯ ಸಹಭಾಗಿತ್ವ ಮಾಡುತ್ತ ಶಾಲೆಗೆ ಹೊಸ ಆಕಾರ ಕೊಡುತ್ತಾ ಸಾಗಿದ್ದಾರೆ.
ಈ ಇಬ್ಬರೂ ಶಿಕ್ಷಕರು ಉತ್ತಮ ವಾಗ್ಮಿಗಳು ವಿದ್ಯಾರ್ಥಿ ಪ್ರೇಮಿ ಮೇಸ್ಟ್ರುಗಳಾಗಿ ನವಚೇತನ ಚಾರಿಟೇಬಲ್ ಟ್ರಸ್ಟ್, ಸಿಗಂದೂರು ಚೌಡೇಶ್ವರಿ ಟ್ರಸ್ಟ, ಟೆಕ್ಸಾಸ್ ಇನ್ಸ್ಟ್ರುಮೆಂಟ್, ಕನ್ನಡ ಮನಸುಗಳು, ಮರ ಸಂಸ್ತೆ ಇತ್ಯಾದಿ ಸಂಸ್ಥೆಯ ಮೂಲಕ ಶಾಲಾ ಮಕ್ಕಳಿಗೆ ವರ್ಷ ವರ್ಷ ಶೈಕ್ಷಣಿಕ ಪರಿಕರ ಬ್ಯಾಗು, ಪುಸ್ತಕ, ಪೆನ್ನು ಇತ್ಯಾದಿ ಪಡೆಯುವ ಮೂಲಕ ಪೋಷಕರ ಹೊರೆ ಕಡಿಮೆ ಮಾಡುತ್ತಾ ಸರ್ಕಾರಿ ಶಾಲೆಗಳ ಕಡೆ ಪೋಷಕರು ಭರವಸೆ ಮೂಡುವಂತೆ ಮಾಡಿದ್ದಾರೆ. ಸರ್ಕಾರಿ ಶಾಲೆ ಉಳಿಸುವುದು ಅಂದರೆ ಇದೆ ತಾನೇ.
ಈ ಎಲ್ಲ ಇವರ ಹೆಜ್ಜೆಗಳು ಪ್ರಶಸ್ತಿಗೆ ಕಾರಣ ಆಗಿವೆ ಎನ್ನುವುದು ನನ್ನ ಭಾವನೆ.
ಇಬ್ಬರೂ ಸ್ನೇಹಿತರಿಗೆ ಮತ್ತೊಮ್ಮೆ ಶುಭಾಶಯಗಳು. ನಮ್ಮ ನಿಮ್ಮೆಲ್ಲರ ಪರವಾಗಿ.
ಪ್ರಶಸ್ತಿಗಳು ಜವಬ್ದಾರಿ ಹೆಚ್ಚಿಸುತ್ತವೆ. ಇನ್ನಷ್ಟು ಪರಿಪಕ್ವತೆ ಕಡೆ ಅವು ನಮ್ಮನ್ನು ಕೊಂಡೊಯ್ಯಬೇಕು. ಈ ಭರವಸೆಯಿಂದಲೆ ನಾನು ಈ ಬರಹಕ್ಕೆ ವಿಮರ್ಷೆಯನ್ನ ಸೇರಿಸಿಲ್ಲ. ಇನ್ನಷ್ಟು ಸ್ಪಷ್ಟವಾಗಿ, ಮಿತಿಗಳನ್ನು ದಾಟಿ ಇನ್ನಷ್ಟು ಕ್ರಿಯಾಶೀಲರಾಗಿ ಎನ್ನುವ ಸಲಹೆ ಇದ್ದೇ ಇದೆ. ಶಿಕ್ಷಕರ ಬೆನ್ನು ಬಾಗಬಾರದು ಯಾವತ್ತಿಗೂ ಎನ್ನುವ ವಾದ ನನ್ನದು. ಇಂತಾ ವಿಚಾರಗಳನ್ನ ಎದುರು ಕೂತು ಹೀಗಲ್ಲ ಹೀಗೆ ಎಂದು ವಿಮರ್ಶೆ ಮಾಡಿದರೆ ಕೇಳುವಷ್ಟು ಸಹನೆ ಮತ್ತು ವಿನಯವಂತಿಕೆ ಇಟ್ಟುಕೊಂಡಿರುವ, ಒಳಿತಿನ ಆಶಯಕ್ಕೆ ಸದಾ ಕಾಲ ಜತೆ ಆಗುವ ಇಬ್ಬರು ಸ್ನೇಹಿತರು ವಯಕ್ತಿಕವಾಗಿ ನನ್ನ ಗೌರವಿಸಿ ಪ್ರೀತಿಸುವ ಕಾರಣ ಸ್ವಲ್ಪ ಸಮಯ ತೆಗೆದುಕೊಂಡೇ ಈ ಮಾತು ದಾಖಲಿಸಿರುವೆ.
ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿವೆ.
ಶುಭಾಶಯಗಳು ಇಬ್ಬರಿಗೂ… ಪ್ರಶಸ್ತಿ ಪಡೆದ ಎಲ್ಲರಿಗೂ….
ಜಿ. ಟಿ. ತುಮರಿ
06-09-202
