

ಚಾಲಕನಾಗಿ ಕೆಲಸಮಾಡುತಿದ್ದ ೫೬ ವರ್ಷ ಪ್ರಾಯದ ಗುತ್ಯಾ ಸಣ್ಣಹುಡುಗ ಎಂಬುವ ವ್ಯಕ್ತಿ ಸ್ವಂತ ಪತ್ನಿ ರೇಣುಕಾ ಚೆನ್ನಯ್ಯಳ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿ ನಂತರ ತಾನೂ ವಿಷ ಕುಡಿದು ಆಸ್ಫತ್ರೆ ಸೇರಿದ ಘಟನೆ ಸಿದ್ದಾಪುರ ಕಾನಗೋಡಿನ ಗಣೇಶ ನಗರದಲ್ಲಿ ನಡೆದಿದೆ.
ಈ ಬಗ್ಗೆ ಬಾಧಿತೆ ರೇಣುಕಾ ಚೆನ್ನಯ್ಯ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆಸ್ತಿ ಹಂಚಿಕೆ ವಿಚಾರದಲ್ಲಿ ಬೇಸರಗೊಂಡಿದ್ದ ತನ್ನ ಪತಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತಿದ್ದು ಇಂದು ಅಡುಗೆ ಮಾಡುವ ವಿಚಾರದಲ್ಲಿ ಮಧ್ಯಾಹ್ನ ಒಂದು ಗಂಟೆಯ ಮೊದಲು ಜಗಳ ಮಾಡಿ ಹೋದವನು ಮತ್ತೆ ನಾಲ್ಕರ ಸುಮಾರಿಗೆ ಬಂದು ಖ್ಯಾತೆ ತೆಗೆದು ಅಡುಗೆ ಮನೆಯಲ್ಲಿದ್ದ ತನ್ನ ಮೇಲೆ ಪೆಟ್ರೋಲ್ ಸುರುವಿ, ಬೆಂಕಿ ಹಚ್ಚಿ ಹಲ್ಲೆ ಮಾಡಿರುವುದಲ್ಲದೆ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ವಿವರಿಸಿದ್ದಾರೆ.

