

ಸಿದ್ಧಾಪುರ ತಾಲೂಕಿನ ದೊಡ್ಮನೆ ಮತ್ತು ಕ್ಯಾದಗಿ ಗ್ರಾಮ ಪಂಚಾಯತ್ ಗಳಲ್ಲಿ ನಡೆದ ಪ್ರತ್ಯೇಕ ಎರಡು ದುರ್ಘಟನೆಗಳಲ್ಲಿ ಇಬ್ಬರು ಮೃತರಾಗಿದ್ದಾರೆ. ವಿಪರೀತ ಮಳೆಯಿಂದಾಗಿ ಕ್ಯಾದಗಿ ಪದ್ಮಾವತಿ ನಾರಾಯಣ ಹರಿಜನರ ವಾಸ್ತವ್ಯದ ಮನೆ ಕುಸಿದು ಬದ್ದಿದೆ. ಇದರ ಪರಿಣಾಮ ಮನೆಯಲ್ಲಿ ಮಲಗಿದ್ದ ಇವರ ೨೩ ವರ್ಷದ ಪುತ್ರ ಚಂದ್ರಶೇಖರ್ ನಾರಾಯಣ ಹರಿಜನ ತೀವೃವಾಗಿ ಗಾಯಗೊಂಡಿದ್ದು ಸಿದ್ಧಾಪುರ ತಾಲೂಕಾ ಆಸ್ಫತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತೆರಳುತಿದ್ದಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ. ತಾಲೂಕಾಡಳಿತ ಘಟನೆಯ ಸ್ಥಳಕ್ಕೆ ಭೇಟಿ ನೀಡಿದೆ. ಈ ಬಗ್ಗೆ ಸ್ಥಳಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗಣಪತಿ ತಂದೆ ಗಿಡ್ಡಾ ಗೌಡ , 56 ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾಗಿದ್ದಾನೆ
ಕೃಷಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿವನು ತಮ್ಮ ಮನೆ ಇರುವ ಜಾಗಾಕ್ಕೆ ತಾಗಿ ಮೃತನ ಅಣ್ಣ ಜಾಗಯಿದ್ದು , ಊರಿನಲ್ಲಿ ಸಂಬಂಧಿಕರು ಹಾಗೂ ಹಿರಿಯರು ಸೇರಿ ಬಗೆಹರಿಸಿಕೊಳ್ಳಲು ರಾಜಿ ಪಂಚಾಯಿತಿ ಮಾಡಿದ್ದರು . ಅಲ್ಲದೇ ತಕರಾರು ಇದ್ದ ಬಗ್ಗೆ ಮೃತನ ಅಣ್ಣನು ಠಾಣೆಯಲ್ಲಿ ದೂರು ನೀಡಿದ್ದನು . ಹೀಗಿರುವಲ್ಲಿ ರವಿವಾರ ಮನೆಯಿಂದ ಸೊಪ್ಪು ತರಲೆಂದು ಬೆಟ್ಟಕ್ಕ ಹೋಗುವುದಾಗಿ ಹೇಳಿ ಹೊದವನು ಮನೆಯಿಂದ ಸ್ವಲ್ಪ ದೂರದಲ್ಲಿನ ಬೆಟ್ಟದಲ್ಲಿರುವ ಕಾಡುಜಾತಿಯ ಮರದ ಅಡ್ಡಟೊಂಗೆಗೆ ನೈಲಾನ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ . ಘಟನೆ ಕುರಿತು ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ
