




ಕಳೆದ ವಾರ ಸಾಗರ-ಶಿರಸಿ ರಸ್ತೆಯ ಸಿದ್ಧಾಪುರ ಕಾವಂಚೂರು ಬಳಿ ಕಾರುಗಳ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡಿದ್ದ ಹೊಸೂರಿನ ಸರೋಜಿನಿ ನಾರಾಯಣ ನಾಯ್ಕ ಗುರುವಾರ ಮುಂಜಾನೆ ಮೃತರಾಗಿದ್ದಾರೆ.
ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು.
ತೀವೃ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದ ೭ ಜನರಲ್ಲಿ ವಯೋಸಹಜ ಕಾಯಿಲೆಗಳ ಹಿನ್ನೆಲೆಯಲ್ಲಿ ಸರೋಜಿನಿ ಚಿಕಿತ್ಸೆಗೆ ಸ್ಫಂದಿಸಿರಲಿಲ್ಲ. ಮೃತರು ಗಾಯಾಳು ವಿನಾಯಕ ನಾಯ್ಕ ಸೇರಿ ಇಬ್ಬರು ಪುತ್ರರು, ಪತಿ,ಪುತ್ರಿಯನ್ನು ಒಳಗೊಂಡಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರಿಗೆ ೬೫ ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಹೊಸೂರಿನಲ್ಲಿ ಅವರ ಅಂತ್ಯಸಂಸ್ಕಾರ ಮುಗಿದಿದೆ. ಇತರ ಆರು ಜನ ಗಾಯಾಳುಗಳು ಚೇತರಿಸಿಕೊಳ್ಳುತಿದ್ದು ಬಾಧಿತರ ಚಿಕಿತ್ಸೆಗೆ ನೆರವು ನೀಡುವವರು ಅವರ ಹತ್ತಿರದ ಸಂಬಂಧಿಗಳ ಮೂಲಕ ನೆರವಾಗಲು ಅವರ ಆತ್ಮೀಯರು ಕೋರಿದ್ದಾರೆ.

