

ಕಳೆದ ಮೂರು ಚುನಾವಣೆಗಳಿಂದ ತಾನು ಶಿರಸಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿರುವುದು ಸತ್ಯ ಆದರೆ ಅದಕ್ಕಾಗಿ ಎಲ್ಲಿಯೂ ಲಾಭಿ ಮಾಡಿಲ್ಲ,ಕಾಂಗ್ರೆಸ್ ಪ್ರಮುಖರಿಗೆ ತನ್ನ ಬಗ್ಗೆ ಸಂಪೂರ್ಣ ಮಾಹಿತಿ ಇರುವುದರಿಂದ ಅಂಥ ಲಾಭಿ ಮಾಡುವ ಅಗತ್ಯವೂ ಇಲ್ಲ ಎಂದು ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ವಿ.ಎನ್. ನಾಯ್ಕ ಹೇಳಿದ್ದಾರೆ.
ಸಿದ್ಧಾಪುರದ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು ಕಾಂಗ್ರೆಸ್ ತಮಗೆ ಅವಕಾಶ ಕೊಟ್ಟಾಗಲೂ, ಕೊಡದಿದ್ದಾಗಲೂ ಪಕ್ಷದ ಪರವಾಗಿ ಕೆಲಸ ಮಾಡಿದ್ದೇವೆ ಈಗಲೂ ಅದಕ್ಕೆ ತಾವು ಬದ್ಧ ಎಂದು ಸ್ಪಷ್ಟೀಕರಿಸಿದರು.
ತಾಲೂಕಿನ ಸ್ವಸಹಾಯ ಸಂಘಗಳಿಗೆ ಆದ ಆನ್ಯಾಯಕ್ಕೆ ಪರಿಹಾರ ಮತ್ತು ಸಿದ್ಧಾಪುರ ತಾಲೂಕಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದ ಅವರು ರಸ್ತೆಗಳ ಅಭಿವೃದ್ಧಿ,ಸ್ವಸಹಾಯ ಸಂಘಗಳ ಅವ್ಯವಹಾರ ಸೇರಿದಂತೆ ಕೆಲವು ಪ್ರಮುಖ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯದಿದ್ದರೆ ಮುಂದಿನ ಹದಿನೈದು ದಿವಸಗಳ ವರೆಗೆ ಕಾಯ್ದು ನಂತರ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

