ಬಾವಲಿಗುಹೆ ಬಿಡುಗಡೆ,ಸನ್ಮಾನ

ಮೊಗೆದಷ್ಟೂ ಬೆರಗು ನಿಮ್ಮನ್ನು ನೀವೇ ನೋಡಿಕೊಳ್ಳಿ…….

ಸಿದ್ದಾಪುರ:- ಸಾಮಾಜಿಕವಾಗಿ ದುಡಿಯುವ ಮನಸ್ಸು ಸಾಹಿತಿಗಳ ಬರವಣಿಗೆಯಲ್ಲಿರಬೇಕು. ಬರವಣಿಗೆಯನ್ನು ಸಾಮಾಜಿಕ ಅವ್ಯವಸ್ಥೆಯ ಮಧ್ಯ ನಿಂತು ಬರೆಯಬೇಕು ಎಂದು ಧಾರವಾಡದ ಸಾಹಿತಿ ಡಾ,ಆನಂದ ಪಾಟೀಲ್ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಬಾಲಭವನದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಭಿನವ ಪ್ರಕಾಶನ ಬೆಂಗಳೂರು, ಮಕ್ಕಳ ಸಾಹಿತ್ಯಾಸಕ್ತರ ಗೆಳೆಯರ ಬಳಗ ಧಾರವಾಡ ಇವರ ಸಹಯೋಗದಲ್ಲಿ 2022 ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ ತಮ್ಮಣ್ಣ ಬೀಗಾರ್ ಅವರಿಗೆ ಸಾಹಿತ್ಯಾಭಿನಂದನೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮಣ್ಣ ಬೀಗಾರ್ ರವರ ಬರವಣಿಗೆಯನ್ನು ಸರಿಯಾಗಿ ಮೊದಲೆ ಗುರುತಿಸಬೇಕಾಗಿತ್ತು.
ದಿನಕರ ದೇಸಾಯಿ ಯವರಂತೆ ಸ್ಪಷ್ಟವಾಗಿ ಮಕ್ಕಳ ಸಾಹಿತ್ಯ ವನ್ನು ಯಾರು ಬರೆದಿಲ್ಲಾ.
ಸಾಮಾಜಿಕ ಪ್ರಜ್ಞೆಯನ್ನು ಇಟ್ಟುಕೊಂಡು ಕೊಂಡು ಬರೆದವರು ಆರ್ ವಿ ಭಂಡಾರಿಯವರು.
ಉತ್ತರ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತಿಗಳು ಮಾಡಿದ ಸಾಧನೆಯನ್ನು ಬೆರೆಲ್ಲೂ ಯಾರು ಮಾಡಿಲ್ಲ.
ನನ್ನ ಒಳಗಿನ ಬರವಣಿಗೆ ಎಂದು ಬರೆಯಬೇಕು. ಎಲ್ಲವನ್ನೂ ಅರ್ಥ ಮಾಡಿಕೊಂಡ ತಮ್ಮಣ್ಣ ಬೀಗಾರ್ ರವರು ಮಲೆನಾಡಿನ ಮಕ್ಕಳ ಬಾಲ್ಯದ ಮನಸ್ಸನ್ನು ಚನ್ನಾಗಿ ಗ್ರಹಿಸಿತು ತುಂಬಾ ಸೊಗಸಾಗಿ ಬರೆದಿದ್ದಾರೆ ಎಂದರು.



ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯ ಬಾಲ ಸಾಹಿತ್ಯ ಪುರಸ್ಕಾರ ಪಡೆದ “ಬಾವಲಿ ಗುಹೆ” ಯ ಮೂರನೇ ಮುದ್ರಣ ಹಾಗೂ “ಕೋಲ್ಜೇನು” ಮಕ್ಕಳಿಗಾಗಿ ಬಾಲ್ಯದ ಲಹರಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಳ್ಳಾರಿಯ ಡಾ, ಶಿವಲಿಂಗಪ್ಪ ನಂದಿಹಾಳ, ಗದಗದ ಡಾ, ವಿನಾಯಕ ಕಮತದ, ಜಿ ಜಿ ಹೆಗಡೆ ಬಾಳಗೋಡ, ಕಸಾಪದ ತಾಲೂಕು ಅಧ್ಯಕ್ಷ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.
ಕುಮಾರಿ ಮಹಿಮಾ ಹೆಗಡೆ ಬಾವಲಿ ಗುಹೆ ಪುಸ್ತಕದ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು.
ಬಾಲಿಕೊಪ್ಪ ಶಾಲೆಯ ವಿದ್ಯಾರ್ಥಿಗಳು ಬಿಗಾರ್ ರವರ ಮಕ್ಕಳ ಕವನ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಂಗಳೂರು ಅಭಿನವ ಪ್ರಕಾಶನದ ನ.ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ಸುರೇಶ ಕಡಕೇರಿ ಸ್ವಾಗತಿಸಿದರು. ಎಮ್ ಆರ್ ಭಟ್ ನಿರೂಪಿಸಿದರು.

ಸಿದ್ದಾಪುರ: ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನದ ಪ್ರೀತಿ ಬೆಳೆಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನೀಡುವ ಯಕ್ಷಸಿರಿ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ಕೃಷ್ಣಾಜಿ ಬೇಡ್ಕಣಿ ಇವರನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಡ್ಕಣಿಯ ರಾಮಾಂಜನೇಯ ಕಲಾ ಬಳಗದ ವತಿಯಿಂದ ಹೃದಯಸ್ಪರ್ಷಿಯಾಗಿ ಅಭಿನಂದಿಸಲಾಯಿತು.


ಬೇಡ್ಕಣಿಯ ಕೋಟೆ ಆಂಜನೇಯ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಕೃಷ್ಣಾ ನಾಯ್ಕ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕೃಷ್ಣಾಜಿ ಬೇಡ್ಕಣಿ ಮಾತನಾಡಿ, ಯಕ್ಷಗಾನವನ್ನೆ ಉಸಿರಾಗಿಸಿಕೊಂಡ ನನಗೆ ಸಂದ ಸನ್ಮಾನ ಹಾಗೂ ಪ್ರಶಸ್ತಿಗಳು ಯಕ್ಷಗಾನ ಕಲಿಸಿದ ಗುರುವಿಗೆ ಸಲ್ಲಬೇಕು. ಅಂದು ನಾ ಪಟ್ಟ ಪರಿಶ್ರಮಕ್ಕೆ ಇವತ್ತು ಫಲ ಸಿಕ್ಕಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಜೀವ ಇರುವವರೆಗೂ ಗೆಜ್ಜೆ ಕಟ್ಟಿ ಕುಣಿಯುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಟೀಮ್ ಪರಿವರ್ತನೆಯ ಸಂಸ್ಥಾಪಕ ಹಿತೇಂದ್ರ ನಾಯ್ಕ ಮಾತನಾಡಿ, ತೆರೆಯ ಮೇಲೆ ಪ್ರೇಕ್ಷಕರನ್ನು ನಗಿಸುವ ಕಲಾವಿದರ ಜೀವನ ಶೋಚನೀಯವಾಗಿದೆ. ಸರ್ಕಾರ ಯಕ್ಷಗಾನವನ್ನು ಒಂದು ವಿಷಯವಾಗಿ ಪರಿಗಣಿಸಬೇಕು. ಯಕ್ಷಗಾನದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.


ಕೃಷ್ಣಾಜಿ ಕುರಿತು ಬನವಾಸಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಅಭಿನಂದನಾ ನುಡಿಗಳನ್ನಾಡಿ, ಬೇಡ್ಕಣಿಯ ಪರಿಸರದಲ್ಲಿ ಯಕ್ಷಗಾನದ ಪ್ರೀತಿ ಬೆಳೆಯಲು ಕೃಷ್ಣಾಜಿ ಬೇಡ್ಕಣಿ ಪಾತ್ರ ದೊಡ್ಡದಿದೆ. ಕಡಿಮೆ ವೆಚ್ಚದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನ ಪ್ರದರ್ಶಿಸಿ ಕ್ರಾಂತಿಯನ್ನುಂಟು ಮಾಡಿದರು. ಯಕ್ಷಗಾನದ ಎಲ್ಲಾ ಪಾತ್ರಗಳನ್ನು ಮಾಡಬಲ್ಲ ಕಲಾವಿದ ಕೃಷ್ಣಾಜಿ ಬೇಡ್ಕಣಿಯಾಗಿದ್ದರು‌. ಕಲಾವಿದರಿಗೆ ಕೃಷ್ಣಾಜಿ ರೋಲ್ ಮಾಡೆಲ್ ಆಗಿದ್ದವರು‌. ಅವರಿಗೆ ಇನ್ನು ಹೆಚ್ಚಿನ ಪ್ರಶಸ್ತಿಗಳು ದೊರಕಲಿ ಎಂದರು.
ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಬನವಾಸಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ, ಬೇಡ್ಕಣಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪದ್ಮಪ್ರಿಯಾ ನಾಯ್ಕ, ಗೋವಿಂದ ನಾಯ್ಕ, ಪತ್ರಕರ್ತ ಗಣೇಶ ಭಟ್, ತಾಲೂಕಾ ಪಂಚಾಯ್ತಿ ಮಾಜಿ ಸದಸ್ಯ ಬಸೀರ್ ಸಾಬ್ ಬೇಡ್ಕಣಿ, ರಾಮಾಂಜನೇಯ ಕಲಾ ಬಳಗದ ಅಧ್ಯಕ್ಷ ರಾಮಕೃಷ್ಣ ನಾಯ್ಕ ಉಪಸ್ಥಿತರಿದ್ದರು. ಕಸಾಪದ ಚಂದ್ರಶೇಖರ ಕುಂಬ್ರಿಗದ್ದೆ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು. ಕಸಾಪ ಕೋಶಾಧ್ಯಕ್ಷ ಪಿ.ಬಿ.ಹೊಸೂರ ವಂದಿಸಿದರು.

ಲೀಫ್ ಆರ್ಟಿನಲ್ಲಿ ರಾಷ್ಟ್ರಗೀತೆ ಬರೆದ ತಾಲೂಕಿನ ಹೊಸಮಂಜುವಿನ ತೃಪ್ತಿ ಮಂಜುನಾಥ ನಾಯ್ಕ ಇವರನ್ನು ಸನ್ಮಾನಿಸಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *