

ರಾಜ್ಯ ಸರ್ಕಾರ ಡಿಸಿ ಮುಲ್ಲೈ ಮುಗಿಲನ್ ಎಂ.ಪಿ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ನೇಮಕಗೊಳಿಸಿದೆ. ಉತ್ತರಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರಿನ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಿರ್ದೇಶಕರಾಗಿದ್ದ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಕಾಂತಾರ ವಿವಾದ: ನಟ ಚೇತನ್‌ಗೆ ದಲಿತ ಸಂಘಟನೆಗಳ ಬೆಂಬಲ
ಕಾಂತಾರ ಚಿತ್ರದ ವಿರುದ್ಧ ಮಾತನಾಡಿ ವಿರೋಧಗಳನ್ನು ಎದುರಿಸುತ್ತಿರುವ ನಟ ಚೇತನ್ ಅವರಿಗೆ ದಲಿತ ಸಂಘಟನೆಗಳು ಶನಿವಾರ ಬೆಂಬಲ ವ್ಯಕ್ತಪಡಿಸಿವೆ.

ಮೈಸೂರು: ಕಾಂತಾರ ಚಿತ್ರದ ವಿರುದ್ಧ ಮಾತನಾಡಿ ವಿರೋಧಗಳನ್ನು ಎದುರಿಸುತ್ತಿರುವ ನಟ ಚೇತನ್ ಅವರಿಗೆ ದಲಿತ ಸಂಘಟನೆಗಳು ಶನಿವಾರ ಬೆಂಬಲ ವ್ಯಕ್ತಪಡಿಸಿವೆ.
ರಿಷಬ್ ಶೆಟ್ಟಿ ಮಾತು ಸುಳ್ಳು, ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ಚೇತನ್ ಅವರು ಹೇಳಿದ್ದರು. ಈಗಾಗಲೇ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಜನರಿಂದಲಷ್ಟೇ ಅಲ್ಲದೆ, ಸ್ಟಾರ್ ನಟ-ನಟಿಯರಿಂದಲು ಪ್ರಶಂಸೆ ಪಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಕುರಿತು ವಿವಾದ ಸೃಷ್ಟಿಸಿರುವ ನಟ ಚೇತನ್ ಅವರ ವಿರುದ್ಧ ಹಲವರು ಕಿಡಿಕಾರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಚೇತನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ದಲಿತ ಮುಖಂಡ ಮತ್ತು ಮಾಜಿ ಮೇಯರ್ ಪುರುಷೋತ್ತಮ ಅವರು, “ಪೂಜೆ ಮಾಡುವುದು ಹಿಂದೂ ಸಂಸ್ಕೃತಿಯಾಗಿರಲಿಲ್ಲ. ಸುಮಾರು 3,500 ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಬಂದ ಆರ್ಯರು ಇದನ್ನು ಪರಿಚಯಿಸಿದರು ಮತ್ತು ವೈದಿಕ ಸಂಸ್ಕೃತಿಯನ್ನು ಪ್ರಾರಂಭಿಸಿದರು. ದ್ರಾವಿಡರು ಮತ್ತು ಮೂಲ ವಂಶಸ್ಥರ ಸಂಸ್ಕೃತಿ ಮತ್ತು ಸಂಪ್ರದಾಯಗಳು ವೈದಿಕ ಸಂಸ್ಕೃತಿಗಿಂತ ಹಳೆಯದು, ”ಎಂದು ಅವರು ಹೇಳಿದರು.
ಆರ್ಯರು ಭಾರತಕ್ಕೆ ಬರುವ ಮೊದಲು ಯಾವುದೇ ಪೂಜೆ ಇರಲಿಲ್ಲ ಎಂದು ಕನ್ನಡ ಲೇಖಕ ಕೆ.ಎಸ್.ಭಗವಾನ್ ಹೇಳಿದ್ದಾರೆ.”ಚೇತನ್ ಅವರು ಹೇಳಿದ್ದು ಸರಿಯಿದೆ. ಮೂಲ ವಂಶಸ್ಥರು ಭೂತ ಕೋಲವನ್ನು ಅಭ್ಯಾಸ ಮಾಡಲಿಲ್ಲ, ಆದರೆ, ಇದು ವೈದಿಕ ಆಚರಣೆಗಳಿಂದ ಪ್ರಾರಂಭವಾಯಿತು ತಿಳಿಸಿದರು.
ಇದೇ ವೇಳೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ‘ಹಿಂದೂ ದೇವರುಗಳು ಮತ್ತು ಆಚಾರ ವಿಚಾರಗಳ ಬಗ್ಗೆ ವಿವಾದ ಹುಟ್ಟುಹಾಕಲು ಚೇತನ್‌ಗೆ ಮುಸ್ಲಿಮರಿಂದ ಹಣ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ. (ಕಪ್ರಡಾ)
