

ಸಿದ್ದಾಪುರ: ಕನ್ನಡ ತಾಯಿ ಭುವನೇಶ್ವರಿ ವೇದಿಕೆ, ಅಮರ ಪುನೀತ ರಾಜಕುಮಾರ ಕಲಾಬಳಗ ಸಿದ್ದಾಪುರ ಹಾಗೂ ಗಂಗಾಂಬಿಕಾ ಭಕ್ತಮಂಡಳಿ ವತಿಯಿಂದ ನವೆಂಬರ 26 ರಂದು ಸಿದ್ದಾಪುರದ ನೆಹರು ಮೈದಾನದಲ್ಲಿ ಕನ್ನಡ ಹಬ್ಬ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರಧಾನ ಹಾಗೂ ಆಯ್ದ ಪ್ರತಿಭಾವಂತ ಕಲಾವಿದರ ಕೂಡುವಿಕೆಯಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಈ ಕುರಿತು ಪಟ್ಟಣದಲ್ಲಿ ಅಮರ ಪುನೀತ ರಾಜಕುಮಾರ ಕಲಾಬಳಗದ ಅಧ್ಯಕ್ಷ ವಿನಾಯಕ ನಾಯ್ಕ ಹಾಗೂ ಭುವನೇಶ್ವರಿ ವೇದಿಕೆ ಅಧ್ಯಕ್ಷ ಆಕಾಶ ಕೊಂಡ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ನವೆಂಬರ 26 ರಂದು ಸಂಜೆ ಕನ್ನಡ ಹಬ್ಬ ನಡೆಯಲಿದ್ದು, ಕನ್ನಡ ತಾಯಿ ಭುವನೇಶ್ವರಿ ಪ್ರಶಸ್ತಿಯನ್ನು ಪುನೀತ ರಾಜಕುಮಾರ ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಅವರಿಗೆ ನೀಡಿ ಗೌರವಿಸಲಾಗುವುದು. ಅದೇ ರೀತಿ ಸಿದ್ದಾಪುರ ಸಿಪಿಐ ಕುಮಾರ ಕೆ., ನಿವೃತ್ತ ಯೋಧ ಮನೋಹರ ನಾಯ್ಕ ಹಾಗೂ ನಾಟಕ ಕೃತಿ ಬರಹಗಾರ ವಿನಾಯಕ ನಾಯ್ಕ ಕೊಂಡ್ಲಿ ಇವರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ಜೈ ಅಂಜನೇಯ ಡ್ರಾಮಾ ಸಿನ್ಸ್ ಕೊರಕೋಡ ಸೊರಬಾ ದ ಲೋಕಾರ್ಪಣೆ ಹಾಗೂ ಸೀನ್ಸ್ ಉದ್ಘಾಟನೆ ನಡೆಯಲಿದೆ ಎಂದರು.
ಕೊಂಡ್ಲಿಯ ವಿನಾಯಕ ನಾಯ್ಕ ಬರೆದ ಪ್ರಥಮ ಕಲಾಕುಸುಮ ‘ ಧನಿಕರ ದರ್ಪಕ್ಕೆ ತೀರ್ಪುಕೊಟ್ಟ ಸೂರ್ಯ-ಚಂದ್ರ ‘ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ರಾಜ್ಯದ ವಿವಿಧ ಭಾಗದ ಪ್ರತಿಭಾವಂತ ಆಯ್ದ ಕಲಾವಿದರ ಸಂಗಮದೊಂದಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಮಧುಕರ ಶಿರಸಿ, ರಾಘು ಮುಂಡಗೋಡ, ಪ್ರವೀಣ್ ಸೊರಬಾ, ಚೆನ್ನಪ್ಪ ಹಾವೇರಿ ಸೇರಿದಂತೆ ಸಿದ್ದಾಪುರ ತಾಲೂಕಿನ ಪ್ರಮುಖ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಘನ ಉಪಸ್ಥಿತಿಯಲ್ಲಿ ಕನ್ನಡ ಹಬ್ಬದ ಸಭಾ ಕಾರ್ಯಕ್ರಮ ಜರುಗಲಿದೆ. ಉದ್ಯಮಿ ಉಪೇಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಶ್ರೇಯಸ್ ಆಸ್ಪತ್ರೆಯ ಶ್ರೀಧರ ವೈದ್ಯ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಮುಖಂಡ ಕೆ.ಜಿ.ನಾಗರಾಜ ನೂತನ ರಂಗಸಜ್ಜಿಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ ಸದಸ್ಯರಾದ ರವಿಕುಮಾರ ನಾಯ್ಕ, ಮಾರುತಿ ನಾಯ್ಕ, ಉಪನ್ಯಾಸಕ ಹಿತೇಂದ್ರ ನಾಯ್ಕ, ಉದ್ಯಮಿ ಬಸೀರ ಸಾಬ್ ಬೇಡ್ಕಣಿ, ಕಾವಂಚೂರ ಗ್ರಾಪಂ ಅಧ್ಯಕ್ಷ ಜಿ.ಟಿ.ನಾಯ್ಕ, ಆಮ್ ಆದ್ಮಿ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ, ಕಾಂಗ್ರೆಸ್ ಮುಖಂಡ ನಾಸಿರ್ ಖಾನ್, ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಭುವನೇಶ್ವರಿ ವೇದಿಕೆ ಅಧ್ಯಕ್ಷ ಆಕಾಶ್ ಕೊಂಡ್ಲಿ, ಪುನೀತ ರಾಜಕುಮಾರ ಕಲಾಬಳಗದ ಅಧ್ಯಕ್ಷ ವಿನಾಯಕ ಕೊಂಡ್ಲಿ, ಉದ್ಯಮಿ ಪೆಟ್ರಿಕ್ ಡಿಸಿಲ್ವಾ, ಕಾಂಗ್ರೆಸ್ ಮುಖಂಡ ಅಬ್ದುಲ್ ಸಾಬ್ ಹೆರೂರ, ಗಂಗಾಬಿಕಾ ದೇವಸ್ಥಾನದ ಅಧ್ಯಕ್ಷ ನಾಗರಾಜ ಅಂಬಿಗ ಹಾಗೂ ಕಾರ್ಯದರ್ಶಿ ಹೊನ್ನಪ್ಪ ಅಂಬಿಗ ಉಪಸ್ಥಿತರಿರುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘಟಕರು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುನೀತ ರಾಜಕುಮಾರ ಕಲಾಬಳಗದ ಕಾರ್ಯದರ್ಶಿ ಪ್ರವೀಣ್ ನಾಯ್ಕ, ಖಜಾಂಚಿ ವೆಂಕಟೇಶ ಕೊಂಡ್ಲಿ ಹಾಗೂ ಸದಸ್ಯ ಬಾಲಚಂದ್ರ ನಾಯ್ಕ ತ್ಯಾರ್ಸಿ ಉಪಸ್ಥಿತರಿದ್ದರು.

