bheemanna birthday -ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿ.ಕೆ.ಬ್ರದರ್ಸ್ ಉಡುಪಿ ತಂಡ ಚಾಂಪಿಯನ್

ಸಿದ್ದಾಪುರ:
ಭೀಮಣ್ಣ ಟಿ ನಾಯ್ಕ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು, ಹಾಗೂ ಬ್ರೇಡ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಭೀಮಣ್ಣ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ಕಳೆದ ಒಂದು ದಶಕದಿಂದಲೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡ ಭೀಮಣ್ಣ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ
ಹೆಚ್ಚಿನ ಸ್ಥಾನ ಮಾಪನಗಳು ಸಿಗುವಂತಾಗಬೇಕು ಎಂದರು.


ಬಿ ಆರ್ ನಾಯ್ಕ ಹೆಗ್ಗಾರಕೈ ಮಾತನಾಡಿ ಬೀಮಣ್ಣ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ದೊರಕಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವಂತಾಗಲಿ ಎಂದು ಹಾ ರೈಸಿದರು.
ಗಾಂಧೀಜಿ ಹೆಗನೂರ ಮಾರುತಿ ಕೆಂದ್ರಿ, ಕೆ. ಟಿ. ಹೊನ್ನೆಗುಂಡಿ, ಪ್ರಶಾಂತ ಹೊಸೂರ, ರಾಜೇಶ ಕತ್ತಿ, ಮಂಜುನಾಥ ತ್ಯಾರ್ಸಿ, ಪಾಂಡು ಸ್ವಾಮೆ ಹೊಸೂರ, ಜಯರಾಮ ನಾಯ್ಕ, ಎನ್ ಟಿ ನಾಯ್ಕ, ಮಿಥುನ ಕಾನಗೋಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು

ಸಿದ್ದಾಪುರ: ಸಮೃದ್ಧಿ ಯುವ ಬಳಗ ತ್ಯಾರ್ಸಿ ಹಾಗೂ ಊರನಾಗರಿಕರ ಸಂಯುಕ್ತಾಶ್ರಯದಲ್ಲಿ ತ್ಯಾರ್ಸಿಯಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿ.ಕೆ.ಬ್ರದರ್ಸ್ ಉಡುಪಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಶನಿವಾರ ಹಾಗೂ ಭಾನುವಾರ ನಡೆದ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಬಿ.ಕೆ.ಬ್ರದರ್ಸ್ ಉಡುಪಿ ತಂಡ ಸಿದ್ದಾಪುರದ ಆರ್.ಸಿ.ಸಿ ಪ್ರೆಂಡ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
‘ ಸಮಾರೋಪ ಸಮಾರಂಭ ‘
ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ತ್ಯಾರ್ಸಿಯಂತ ಸಣ್ಣ ಊರಲ್ಲೂ ಸಹ ಯುವಕರು ಕ್ರೀಡೆಯನ್ನು ಆಯೋಜಿಸಿ ವ್ಯವಸ್ಥಿತವಾಗಿ ನಡೆಸಿರುವುದು ನಿಜಕ್ಕೂ ಶ್ಲಾಘನೀಯವಾದುದು. ಸಮೃದ್ಧಿ ಯುವ ಬಳಗದ ಮೂಲಕ ಊರಿನ ಯುವಕರು ಕ್ರೀಡೆ ಮಾತ್ರವಲ್ಲದೇ ಸಾಧಕರಿಗೆ ಸನ್ಮಾನ, ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಜತೆಗೆ ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ಇತರ ಯುವಕರಿಗೆ ಮಾದರಿಯಾಗಿದೆ. ಯುವ ಸಮೂಹ ಈ ರೀತಿ ಸಮಾಜಹಿತ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.


ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಈ ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗಿರುವ ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರಿಗೆ ಯಾವತ್ತೂ ಬೆಂಬಲ ನೀಡುತ್ತಿಲ್ಲ. ಸರ್ಕಾರದ ಅನುದಾನದ ಕಾಮಗಾರಿ ಉದ್ಘಾಟಿಸುವುದನ್ನು ಬಿಟ್ಟರೆ ಒಂದು ಪೈಸೆಯನ್ನು ಸಹ ಸಮಾಜಕ್ಕೆ ನೀಡುತ್ತಿಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಕಳೆದ ಅನೇಕ ವರ್ಷಗಳಿಂದ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಅರೋಗ್ಯ ಸಂಬಂಧಿ ಸಮಸ್ಯೆಗೆ ಕೈಲಾದ ಸಹಾಯ ಹಸ್ತ ಚಾಚುತ್ತಿದ್ದಾರೆ. ಯುವ ಸಮುದಾಯ ಇಂತಹ ಪ್ರೋತ್ಸಾಹಕರಿಗೆ ರಾಜಕೀಯ ಶಕ್ತಿ ನೀಡಿದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಹಾಯವಾಗಲಿದೆ ಎಂದರು.
ಈ ವೇಳೆ ಬೆಳಗಾವಿಯ ಬದಲಾವಣೆಯ ಬೆಳಕು ಪೌಂಡೇಶನ್ ನ ಶಿವಾನಂದ ಹಿರಟ್ಟಿ, ಸೋಮು ನಾಯ್ಕ, ಸ್ಥಳೀಯರಾದ ಮಂಜುನಾಥ ಎಚ್ ನಾಯ್ಕ, ಸೀತಾರಾಮ ಜಿ ನಾಯ್ಕ, ಬಾಲಚಂದ್ರ ನಾಯ್ಕ, ಲೋಕೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸಮೃದ್ಧಿ ಯುವ ಬಳಗದ ಅಶೋಕ ನಾಯ್ಕ ಹಾಗೂ ನವೀನ್ ನಾಯ್ಕ ನಿರೂಪಿಸಿದರು‌.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *