


ಸಿದ್ಧಾಪುರ ತಾಲೂಕಾ ಕ್ಯಾದಗಿ ಹಿ.ಪ್ರಾ.ಶಾಲೆಯ ಒಟ್ಟೂ ೪೮ಜನ ವಿದ್ಯಾರ್ಥಿಗಳಲ್ಲಿ ೨೭ ಜನರು ಸಿದ್ಧಾಪುರ ತಾಲೂಕಾ ಆಸ್ಫತ್ರೆಗೆ ದಾಖಲಾಗಿದ್ದು ೧೩ ಮಕ್ಕಳು ಅಸ್ವಸ್ಥರಾಗಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಕ್ಯಾದಗಿ ಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ 48 ಮಕ್ಕಳು ಓದುತ್ತಿದ್ದು ಮಕ್ಕಳು ಕ್ಯಾದಿಗೆ ಹಿರೇಕೊಡು…ಲಕ್ಕಿ ಜಡ್ಡಿ ಕಡೆಯಿಂದ ಶಾಲೆಗೆ ಬರುತ್ತಿರುವವರಾಗಿರುತ್ತಾರೆ. ಬೆಳಿಗ್ಗೆ 10.30ಕ್ಕೆ ಪ್ರತಿ ದಿವಸದಂತೆ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿಯ ಹಾಲನ್ನು ಪಾಲಕರು ಒಪ್ಪಿಗೆ ನೀಡಿದಂತಹ ಮಕ್ಕಳಿಗೆ ಪೂರೈಸಿದ್ದು ಹಾಲು ಕುಡಿದು ಅರ್ಧ ಒಂದು ಗಂಟೆಯಲ್ಲಿ ಒಬ್ಬ ಹುಡುಗ ನಂತರ ಮತ್ತೊಬ್ಬ ಹಾಗೆ ಒಟ್ಟು ನಾಲ್ಕು ಜನರು ವಾಂತಿ ಮಾಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ…. ಆ ಶಾಲೆಯ ಒಂದರಿಂದ ಮೂರನೇ ತರಗತಿಯ ಮಕ್ಕಳು ಹೊಟ್ಟೆನೋವು ಎಂದು ಹೇಳಿ ಅಸ್ವಸ್ಥರಾಗುತ್ತಿದ್ದು, ಆಗ ತಕ್ಷಣ ಸಾರ್ವಜನಿಕರ ಹಾಗೂ ಶಾಲಾ ಕಮಿಟಿಯವರ ಸಹಾಯದಿಂದ ಸಿದ್ದಾಪುರ ತಾಲೂಕ ಆಸ್ಪತ್ರೆಗೆ ಉಪಚಾರಕ್ಕೆ ಕರೆದುಕೊಂಡು ದಾಖಲಿಸಿದ್ದಾರೆ. ಈಗ ಆಸ್ಪತ್ರೆಯಲ್ಲಿ ಸುಮಾರು 27 ಮಕ್ಕಳು ಉಪಚಾರ ಪಡೆಯುತ್ತಿದ್ದಾರೆ. ಇದರಲ್ಲಿ 13 ಜನ ಅಸ್ವಸ್ಥರಾಗಿರುತ್ತಾರೆ ಈ ಬಗ್ಗೆ ಮುಖ್ಯ ಶಿಕ್ಷಕಿ ಅಶ್ವಿನಿ ಭೂಸಮ್ಮನವರ್ ಮಾಹಿತಿಯನ್ನು ನೀಡಿರುತ್ತಾರೆ ಮಕ್ಕಳು ಉಪಚಾರ ಪಡೆಯುತ್ತಿದ್ದ ಸ್ಥಳಕ್ಕೆ ಸಿದ್ದಾಪುರದ ತಹಶೀಲ್ದಾರರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿರುತ್ತಾರೆ.
