


ಸಿದ್ದಾಪುರ ತಾಲೂಕಿನ ಹೆಗ್ಗೋಡು ಮನೆ ಬಾಳೆಕುಳಿಯಲ್ಲಿ ನ ಸುಧೀರ್ ಗೌಡರ್ ಮನೆಯಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಿಗೆ ಶ್ರೀ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆ ಸಿದ್ದಾಪುರ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಸಿದ್ದಾಪುರ ತಾಲೂಕು ಘಟಕ ಹಾಗೂ ವೀರಶೈವ ಸಮಾಜ ಬಾಂಧವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿ ಮಠ ಹಾಗೂ ಎಮ್ ಎಸ್ ಗೌಡರ್ ವಕೀಲರು ಸಾಗರ ಹಾಗೂ ಅಡಿಕೆ ವರ್ತಕ ಆರ್ ಎಂ ಪಾಟೀಲ್ ಸಿದ್ದಾಪುರ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ

ನಮ್ಮ ಕ್ಷೇತ್ರದಲ್ಲಿ ಅವಿರತ ಪ್ರಯತ್ನದಿಂದ ಪ್ರತಿಯೊಂದು ಗ್ರಾಮಗಳಿಗೂ ಅತಿ ಹೆಚ್ಚಿನ ಅನುದಾನವನ್ನು ನೀಡಿ ಜನಪರ ಕಾರ್ಯಕ್ರಮಗಳನ್ನು ಮಾಡುತಿದ್ದೇವೆ. ತಾಲೂಕಿಗೆ ಅವಶ್ಯಕತೆ ಇದ್ದ ಇಲಾಖೆಗಳ ಕಟ್ಟಡಗಳು ಹಾಗೂ ಶಾಲಾ ಕಾಲೇಜುಗಳನ್ನು ಹೆಚ್ಚಿಸಲಾಗಿದೆ. ಆದರೂ ಕೂಡ ರಸ್ತೆಗಳ ಬಗ್ಗೆ ಜನತೆಯ ಕೋರಿಕೆ ಇದೆ ಈ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು. ಹಾಗೆಯೇ ವೀರಶೈವ ಸಮಾಜದ ಕೋರಿಕೆಯಂತೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಪ್ರಯತ್ನಿಸುತ್ತೇವೆ ಎಂಬ ಆಶ್ವಾಸನೆಯನ್ನು ಕೂಡ ನೀಡಿದರು.


ಕಾರ್ಯಕ್ರಮವನ್ನು ಆಯೋಜಿಸಿದ್ದ ಸುಧೀರ್ ಗೌಡರ ಬಗ್ಗೆ ಮಾತನಾಡಿ ಸುಧೀರ್ ಗೌಡರ್ ಯಾವಾಗಲೂ ಪಾದರಸದಂತೆ ಇದ್ದು ಸದಾಕಾಲ ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಸಮಾಜಕ್ಕೆ ಅವರ ಕೊಡುಗೆ ತುಂಬಾ ಇದೆ ಅವರನ್ನು ಈ ಮೂಲಕ ಅಭಿನಂದಿಸುತ್ತೇನೆ ಎಂದರು .ಹೆಗ್ಗೋಡ್ಮನೆ ಕುಟುಂಬದವರ ಬಗ್ಗೆ ಮಾತನಾಡಿ ಇಳಿ ವಯಸ್ಸಿನವರಾದ ಗಂಗಮ್ಮ ಪುಟ್ಟಣ್ಣಯ್ಯ ಗೌಡರ್ ಹಾಗೂ ಗೌರಮ್ಮ ಬಾಲಚಂದ್ರ ಗೌಡರ್ ರಿಗೆ ಅಭಿನಂದನೆಯನ್ನು ತಿಳಿಸಿ ಕುಟುಂಬಕ್ಕೆ ಶುಭ ಹಾರೈಸಿದರು.
ಸಮಾಜದ ಅಧ್ಯಕ್ಷರಾದ ಪರಮೇಶ್ವರಿಯ ಕಾನಳಿ ಮಠ ಮಾತನಾಡಿ ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇ ರಿ ನಮ್ಮ ನಾಡಿನ ಧೀಮಂತ ನಾಯಕರಾಗಿದ್ದು ನಾಡಿಗೆ ದೊರಕಿದ ಅವರ ಸೇವೆಯನ್ನು ಕೊಂಡಾಡಿದರು. ಹಾಗೂ ಅವರು ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲೆಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ ಶ್ರೀ ಎಂ ಎಸ್ ಗೌಡ ಇವರು ಮಾತನಾಡಿ ಶ್ರೀ ವಿಶ್ವೇಶ್ವರ ಹೆಗಡೆ ನಮ್ಮ ತಾಲೂಕಿನ ಶಕ್ತಿಯಾಗಿದ್ದು ಅವರು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ರೈತರ ಪರ ಕಾಳಜಿಗೆ ನಾವು ಹೆಮ್ಮೆಪಡುತ್ತಿದ್ದೇವೆ ಹಾಗೂ ಸಭಾಧ್ಯಕ್ಷರಾಗಿ ಅವರ ಕಾರ್ಯಗಳನ್ನುಮೆಚ್ಚುಗೆ ವ್ಯಕ್ತಪಡಿಸಿದರು.
ಆರ್. ಎಂ. ಪಾಟೀಲ್ ಅವರು ಸನ್ಮಾನಿತರ ಬಗ್ಗೆ ಮಾತನಾಡಿ ವಿಶ್ವೇಶ್ವರ ಹೆಗಡೆ ಕಾಗೇ ರಿ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಸಿ.ಎಸ್. ಗೌಡರ್ ಸ್ವಾಗತಿಸಿದರು ಹಾಗೂ ಸುಧೀರ್ ಗೌಡರ್ ವಂದಿಸಿದರು ಈ ಎಲ್ಲಾ ಕಾರ್ಯಕ್ರಮವನ್ನು ಸುಧೀರ್ ಗೌಡರ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






