ನಾಡು-ನಾಳೆಗಾಗಿ ಕಾಡು ಉಳಿಸಿಕೊಳ್ಳಿ

ಸಿದ್ದಾಪುರ: ಯಾವ ರಂಗದಲ್ಲಿದ್ದರೂ ಅಂತರಂಗ ಶುದ್ದವಾಗಿರಬೇಕು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಹೇಳಿದರು.
ತಾಲೂಕಿನ ಕಲಗದ್ದೆಯ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಾಲಯದಲ್ಲಿ ಶ್ರೀದೇವರ ವಾರ್ಷಿಕೋತ್ಸವದಲ್ಲಿ ‘ಕಾರ್ಯದಕ್ಷ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಯಾವ ಪ್ರಶಸ್ತಿ ಸಿಕ್ಕರೂ ನಮ್ಮ ಊರಿನಲ್ಲಿ ಸಿಗೋ ಪ್ರಶಸ್ತಿ ದೊಡ್ಡದು. ನಾಟ್ಯ ವಿನಾಯಕ ಪ್ರಸಾದವಾಗಿ ಸ್ವೀಕರಿಸಿದ್ದೇನೆ ಎಂದರು.
ಹಿರಿಯ ಚಿತ್ರ ಕಲಾವಿದ ನೀರ್ನಳ್ಳಿ ರಾಮಕೃಷ್ಣ, ಮಲೆನಾಡಿನ ಕಾಡು ಉಳಿಸಿಕೊಳ್ಳಬೇಕು. ಈ ಭಾಗದ ಕಾಡು, ಜನರ ಪ್ರೀತಿ ಭಾವುಕವಾಗಿದೆ. ಕಲಾವಿದ ಭಾವನಾ ಜೀವಿಗಳು. ನನಗೆ ಲೋಕ ನೋಡುವ ಕುತೂಹಲ. ಪ್ರಪಂಚವೇ ನಂಬಿಕೆಯ ಮೇಲಿದೆ. ಭೂ ಮಂಡಲ ಸೂರ್ಯ ನಂಬಿದೆ. ನಾನು ಎಲ್ಲ ನಂಬಿಯೇ ಎಲ್ಲ ಹೆಜ್ಜೆ ಕುತೂಹಲದಿಂದ ನೋಡುತ್ತೇನೆ ಎಂದರು.


ಅಭಿನಂದನಾ ನುಡಿ ಆಡಿದ ಪ್ರಸಿದ್ಧ ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಅವರು, ವಿನಯದಿಂದ ವಿದ್ವತ್ ಪಡೆದವರು. ಕೌಶಲ, ಗಾಢವಾದ ಪ್ರಯತ್ನದಿಂದ, ಅಭ್ಯಾಸದಿಂದ ಸರ್ವ ಮಾನ್ಯರಾದವರು. ಎಳೆಯರಲ್ಲೇ ಎತ್ತರದಲ್ಲಿ ಏರಿದವರು ಎಂದು ಬಣ್ಣಿಸಿದರು.
ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಜೋತಿಷಿ ಕಮಲಾಕರ ಭಟ್ಟ, ಶಿಲೆಗೆ ಪೆಟ್ಟು ಬಿದ್ದಾಗಲೆ ಚೆಂದದ ಮೂರ್ತಿ ಆಗುತ್ತದೆ. ಎಲ್ಲಿ ತಾನು, ತಾನೇ ಅವನೇ ಆಗದರೆ ಭಗವಂತ ಕಲ್ಪವೃಕ್ಷನಾಗುತ್ತನೆ‌. ಯಕ್ಷಗಾನ ಕಲಾ ಪ್ರದರ್ಶನ ಇಲ್ಲಿ ಕೂಡ ಆಗಲಿದೆ ಎಂದರು.


ಅಧ್ಯಕ್ಷತೆವಹಿಸಿದ್ದ
ವಿದ್ವಾಂಸ ಅಡವಿತೋಟ ಕೃಷ್ಣ ಭಟ್ಟ, ಶ್ರೀ‌ಮತಿ ದೀಪಾ ಭಟ್ಟ ವೇದಿಕೆಯಲ್ಲಿ ‌ಇದ್ದರು. ದೇವಸ್ಥಾನದ ಪ್ರಧಾನ ವಿಶ್ವಸ್ಥ
ವಿನಾಯಕ ಹೆಗಡೆ ಕಲಗದ್ದೆ ಸ್ವಾಗತಿಸಿದರು. ಮಹೇಶ ಹೆಗಡೆ ಕೊಳಗಿ ಸಮ್ಮಾನ ಪತ್ರ ವಾಚಿಸಿದರು. ಆರ್.ಬಿ.ಹೆಗಡೆ ನಿರ್ವಹಿಸಿದರು.
ಚಂಡೆ ನರ್ತನದ ಝೇಂಕಾರ:
ಎರಡು‌ ದಿನಗಳ ಯಕ್ಷಗಾನೋತ್ಸವ, ನೃತ್ಯೋತ್ಸವ
ಕಲಗದ್ದೆ ಶಂಭು ಶಿಷ್ಯ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಪ್ರಥಮ ದಿನ ಲವಕುಶ ಆಖ್ಯಾನ ಪ್ರದರ್ಶನವಾಗಲಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವ ಕೇಶವ ಹೆಗಡೆ ಕೊಳಗಿ, ಮಂಜುನಾಥ ಗುಡ್ಡೆದಿಂಬ, ಭಾರ್ಗವ ಹೆಗ್ಗೋಡು ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ಮಹಾಬಲೇಶ್ವರ ಇಟಗಿ, ನಾಗೇಂದ್ರ ಭಟ್ಟ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ, ಪ್ರವೀಣ ತಟ್ಟಿಸರ ಪಾಲ್ಗೊಂಡರು.
ಎರಡನೆ ದಿನ ಮಂಗಳೂರಿನ ಪೃಥ್ವಿ ಎಸ್.ರಾವ್ ಅವರಿಂದ ನೃತ್ಯಾರ್ಪಣೆ, ಬಳಿಕ ಚಿತ್ರದುರ್ಗದ ಶ್ರೀಮತಿ ಶ್ವೇತಾ ಮಂಜುನಾಥ, ಯಶ್ವಸ್ವಿನಿ ಎಂ‌.ಜಿ., ಕು. ಶಮಾ ಭಾಗ್ವತ್, ಕು. ಸುಖಿ ತಂಡದಿಂದ ಭರತನಾಟ್ಯ ಪ್ರದರ್ಶನ, ಕೂಚುಪುಡಿ ನರ್ತನ, ಗಜಾನನ ಜನನ ನೃತ್ಯ ರೂಪಕ ಗಮನ ಸೆಳೆಯಿತು.
ಬಳಿಕ ಸುರಥಾಂಜನೇಯ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವ ಕೇಶವ ಹೆಗಡೆ ಕೊಳಗಿ, ಮಂಜುನಾಥ ಗುಡ್ಡೆದಿಂಬ, ಭಾರ್ಗವ ಹೆಗ್ಗೋಡು ಪಾಲ್ಗೊಂಡರು. ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಗಣಪತಿ ಹೆಗಡೆ ತೋಟಿಮನೆ, ಮಹಾಬಲೇಶ್ವರ ಇಟಗಿ, ನಾಗೇಂದ್ರ ಭಟ್ಟ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ, ತುಳಸಿ ಹೆಗಡೆ ಪಾಳ್ಗೊಂಡರು. ಪ್ರಸಾದನವನ್ನು ಎಂ.ಆರ್.ನಾಯ್ಕ‌ ಕರ್ಸೇಬೈಲ್ ಒದಗಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *