

ಸಿದ್ದಾಪುರ: ತಂತ್ರಜ್ಞಾನದ ಯುಗದಲ್ಲಿ ಸಂಬಂಧಗಳನ್ನು ಮರೆತು ಬದುಕುತ್ತಿದ್ದೇವೆ. ಸಂವೇದನಾಶೀಲರಾಗಬೇಕಾದ ನಾವು ಸಂವೇದನೆಗಳೆ ಇಲ್ಲದೆ ಜೀವನ ನಡೆಸುವಂತಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ, ಡಾ. ನಿರಂಜನ ವಾನಳ್ಳಿ ಹೇಳಿದರು.
ಅವರು ಭಾನುವಾರ ತಾಲ್ಲೂಕಿನ ಕಿಲಾರದಲ್ಲಿ ನಡೆದ ಗಣೇಶ ಹೆಗಡೆ ಅವರ ಸಂಸ್ಮರಣ ಗ್ರಂಥದ ಲೋಕಾರ್ಪಣೆ ಸಮಾರಂಭದ ಅತಿಥಿಗಳಾಗಿ ಮಾತನಾಡಿದರು.
140 ವರ್ಷಗಳ ಹಿಂದೆ ಹುಟ್ಟಿ, 55 ವರ್ಷಗಳ ಹಿಂದೆ ತೀರಿಕೊಂಡ ಗಣೇಶ ಹೆಗಡೆಯವರನ್ನು ನಾವು ಇಂದು ಸ್ಮರಿಸುತ್ತೇವೆ ಎಂದರೆ ಅವರ ವ್ಯಕ್ತಿತ್ವದ ಎಷ್ಟು ಉನ್ನತ ಮಟ್ಟದಲ್ಲಿತ್ತು ಎಂಬುದು ಅರಿವಾಗುತ್ತದೆ ಎಂದರು.
ಗ್ರಂಥ ಪರಿಚಯ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಖ್ಯಾತ ವಿಮರ್ಶಕ ಟಿ ಪಿ ಅಶೋಕ ಮಾತನಾಡಿ ಕುಟುಂಬ ಹೇಗೆ ತಮ್ಮ ಹಿರಿಯರನ್ನು ಸ್ಮರಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಒಳ್ಳೆಯ ನಿದರ್ಶನ. ಸಮಾಜ ಸುಧಾರಣೆಗೆ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿಗೆ ಗಣೇಶ ಹೆಗಡೆಯವರ ಕೊಡುಗೆ ಅಪಾರ. ಅವರ ಈ ಸಂಸ್ಮರಣ ಗ್ರಂಥದಲ್ಲಿ ಅವರು ಎದುರಿಸಿದ ಸವಾಲುಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿಸ್ತೃತವಾಗಿ ತೆರೆದಿಡಲಾಗಿದೆ ಎಂದರು.
https://samajamukhi.net/wp-admin/post.php?post=17674&action=edit
ಶಾಂತ ಹೆಗಡೆ ಕಿಲಾರ ಗಣೇಶ ಹೆಗಡೆಯವರ ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.
ಹೇರಂಬ ಹೆಗಡೆ ಕಿಲಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾ ಡಿಸೋಜಾ ದಂಪತಿಗಳಿಗೆ ಮತ್ತು ಎಂ ಆರ್ ಲಕ್ಷ್ಮಿನಾರಾಯಣ್ ಅಮಚಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜಯಪ್ರಕಾಶ ಹೆಗಡೆ ಬಸ್ತಿಬೈಲ್ ಪ್ರಾಸ್ತಾವಿಕ ಮಾತನಾಡಿದರು. ಗ್ರಂಥ ಸಮಿತಿಯ ಗೌರವ ಉಪಾಧ್ಯಕ್ಷ ಡಾ. ಪ್ರಭಾಶಂಕರ ಹೆಗಡೆ, ಗ್ರಂಥ ಸಮಿತಿಯ ಸಂಚಾಲಕ ರಾಜಾರಾಮ್ ಹೆಗಡೆ ವೇದಿಕೆಯಲ್ಲಿದ್ದರು.
ಖ್ಯಾತ ಬರಹಗಾರ ಶಿವಾನಂದ ಕಳವೆ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಐನಕೈ, ಶಿವಾನಂದ ಹೆಗಡೆ ಕೆರೆಮನೆ, ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಕೃಷ್ಣಮೂರ್ತಿ ಹೆಬ್ಬಾರ್, ಡಾ. ರಾಜಾರಾಮ್ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಅಮೃತ ಹೆಗಡೆ ಕಿಲಾರ ಸ್ವಾಗತಿಸಿದರು. ಕೀರ್ತಿ ಹೆಗಡೆ ಪ್ರಾರ್ಥಿಸಿದರು. ಮಹಿಮಾ ಭಟ್ ನಿರೂಪಿಸಿದರು. ಸತೀಶ ಹೆಗಡೆ ಕಿಲಾರ ವಂದಿಸಿದರು.


ಅವರು ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯದಲ್ಲಿ ನಡೆದ 2022-23 ನ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಯಲ್ಲಿ ಏರ್ಪಡಿಸುವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆಗ ನಮ್ಮಲ್ಲಿ ಯಾವ ಪ್ರತಿಭೆ ಅಡಗಿದೆ ಎನ್ನುವುದು ತಿಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ವಿ ಎನ್ ನಾಯ್ಕ ಮಾತನಾಡಿ
ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇಂತಹ ಸಮ್ಮೇಳನ ಗಳಿಂದಾಗಬೇಕು. ಹಾಗಾದಾಗ ಮಾತ್ರ ಮುಂದೆ ನಮ್ಮಲ್ಲಿ ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸು ಬರುತ್ತದೆ. ಮಕ್ಕಳು ಶಿಸ್ತು, ಸಂಯಮ, ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು.
ದಿನಕರ ದೇಸಾಯಿ ಯವರು ಈ ಶಾಲೆಯನ್ನು ಸ್ಥಾಪಿಸಲಿಲ್ಲ ಎಂದಿದ್ದರೆ ನಾವು ಶಿಕ್ಷಣದಿಂದ ಮಚಿತರಾಗುತ್ತೇದ್ದೆವೆನೋ. ನಾವು ಕಲಿತ ಶಾಲೆಗೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಹಳೆ ವಿದ್ಯಾರ್ಥಿಗಳು ಹಿಂತಿರುಗಿ ನೋಡಬೇಕು.
ಶಾಲೆಯ ಅಭಿವೃದ್ಧಿ ಗೆ ಎಲ್ಲರ ಸಹಕಾರ ಅತೀ ಮುಖ್ಯ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಣುಕಾ ಪ್ರಕಾಶ ನಾಯ್ಕ, ಸದಸ್ಯರಾದ ಪದ್ಮಪ್ರಿಯಾ ನಾಯ್ಕ, ಈರಪ್ಪ ನಾಯ್ಕ, ಬಾಬಾಜಾನ್ ಸಾಬ, ಎಡಿಎಮ್ ಸಿ ಉಪಾಧ್ಯಕ್ಷ ಸಿ ಎನ್ ಹೆಗಡೆ, ಪತ್ರಕರ್ತ ಸುರೇಶ ಮಡಿವಾಳ, ಜಯಂತ ಹೆಗಡೆ ಕಲ್ಲಾರೆಮನೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ಕಬ್ಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಶಾಲೆಯ ಲಿಖಿತ ಜಿ ನಾಯ್ಕ, ಚಕ್ರ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲೆಯ ರಘುಪತಿ ವಿ ನಾಯ್ಕ, ರವರನ್ನು ಸನ್ಮಾನಿಸಲಾಯಿತು.
ಶಾಲೆಯಲ್ಲಿ ನಡೆದ ಪಠ್ಯ, ಕ್ರೀಡಾ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋದ್ಯಾಪಕಿ ಪ್ರತಿಮಾ ಪಾಲೇಕರ್ ವರದಿ ವಾಚಿಸಿದರು.
ಶಿಕ್ಷಕ ಜಿ ಟಿ ಭಟ್ ಸ್ವಾಗತಿಸಿದರು.
ಶಿಕ್ಷಕಿಯರಾದ ಲತಾ ಕಾರೇಕರ್, ಕಾಂಚನಾ ನಾಯ್ಕ ಬಹುಮಾನ ವಿತರಣೆ ಮಾಡಿದರು.
ಶಿಕ್ಷಕ ಪಿ ಎಮ್ ನಾಯ್ಕ ನಿರೂಪಿಸಿದರು. ಶಿಕ್ಷಕ ವಿ ಟಿ ಗೌಡ ವಂದಿಸಿದರು.
