


ಸಿದ್ದಾಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ ಭಾರತಜೋಡೋ ಯಾತ್ರೆ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರ ಹಿಡಿದಿರುವ ಭಾರತೀಯ ಜನತಾ ಪಾರ್ಟಿ ದೇಶವನ್ನು ಲೂಟಿ ಮಾಡುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಇವರನ್ನು ಅಧಿಕಾರ ದಿಂದ ಕಿತ್ತೋಗೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ರಾಹುಲಗಾಂಧಿ ದೇಶದಲ್ಲಿ ಸಮಾನತೆ ತರಲು ಹಾಗೂ ಕಾಂಗ್ರೆಸ್ ಅಧಿಕಾರ ಕ್ಕೆ ತರಲು 145 ದಿನಗಳ ಕಾಲ 3970 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡು ಇಂದು ಕೊನೆಗೊಳಿಸುತ್ತಿದ್ದಾರೆ. ಈ ಯಾತ್ರೆ ಯಿಂದ ದೇಶ ಹಾಗೂ ರಾಜ್ಯ ದಲ್ಲಿ ರಾಹುಲ್ ನೇತ್ರತ್ವದಲ್ಲಿ ಬಡವರ ಪರವಾದ ಸರಕಾರ ತರಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಕಾರ್ಯ ಕರ್ತರು ಕಾರ್ಯೋನ್ಮುಕವಾಗಬೇಕು ಎಂದರು.
ಪ್ರೊ. ಎನ್ ಟಿ ನಾಯ್ಕ ಮಾತನಾಡಿ ಐತಿಹಾಸಿಕ ಪಾದಯಾತ್ರೆ ಯನ್ನು ಮನೆ ಮನ:ಗಳಿಸುವ ಕಾರ್ಯ ವಾಗಬೇಕು, ಬಿಜೆಪಿ ದೇಶವನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿದೆ. ದೇಶದಲ್ಲಿ ಬಡತನ, ನಿರುದ್ಯೋಗ ಮುಕ್ತ ಮಾಡುವ ಅಗತ್ಯವಿದೆ. ಮತ್ತೊಮ್ಮೆ ರಾಜ್ಯ, ರಾಷ್ಟ್ರ ದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಬೇಕಾಗಿದೆ. ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾದ ವಿ ಎನ್ ನಾಯ್ಕ, ಎಸ್ ಆರ್ ಹೆಗಡೆ, ಎಸ್ ಸಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದೊಡ್ಡ ಮನಿ, ಬಿ ಆರ್ ನಾಯ್ಕ ಮಾತನಾಡಿದರು.
ಇದೆ ಸಂದರ್ಭದಲ್ಲಿ
ಭಾರತ ಜೋಡಿ ಪಾದಯಾತ್ರೆ ಯಲ್ಲಿ ಕನ್ಯಾಕುಮಾರಿಯಿಂದ ರಾಯಚೂರು ವರೆಗೆ ಪಾಲ್ಗೊಂಡಿದ್ದ ಪದ್ಮಾಕರ ನಾಯ್ಕ ಕಲ್ಕಣಿ ಯವರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಸನ್ಮಾನಿಸಲಾಯಿತು
ಮುಖಂಡರಾದ ನಾಸಿರ ಖಾನ, ರಾಮಕೃಷ್ಣ ನಾಯ್ಕ ಶಿರೂರ, ಮಾರುತಿ ಕಿಂದ್ರಿ, ಎ ಬಿ ನಾಯ್ಕ ಕಡಕೇರಿ, ಸಾವಿರ ಡಿ ಸಿಲ್ವಾ, ಕೆ ಟಿ ಹೊನ್ನೆಗುಂಡಿ, ಪ್ರಶಾಂತ ಹೊಸೂರ, ಮಾರುತಿ ನಾಯ್ಕ ಸುಂಕತ್ತಿ, ಮುನಾವರ ಗುರ್ಖಾರ, ಎಸ್ ಕೆ ನಾಯ್ಕ ಕಡಕೇರಿ, ಜಟ್ಟಪ್ಪ ಮೊಗೇರ, ಶಾಂತಲ ನಾಯ್ಕ
ಸುರೇಂದ್ರ ಗೌಡ, ಜಿ ಟಿ ನಾಯ್ಕ, ಪಾಂಡುರಂಗ ನಾಯ್ಕ, ವೆಂಕಟ್ರಮಣ, ಅಬ್ದುಲ್ ಹೆರೂರ, ಸಿ ಆರ್ ನಾಯ್ಕ, ಉಪಸ್ಥಿತರಿದ್ದರು.

