
ಚುನಾವಣೆ ಹಿನ್ನೆಲೆಯಲ್ಲಿ ಹಲವು ತಾಲೂಕುಗಳ ತಹಸಿಲ್ಧಾರರ ವರ್ಗಾವಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆರು ತಾಲೂಕುಗಳ ತಹಸಿಲ್ಧಾರರ ವರ್ಗಾವಣೆಯಾಗಿದ್ದು ಸಿದ್ಧಾಪುರದ ತಹಸಿಲ್ಧಾರ ಸಂತೋಷ ಭಂಡಾರಿ ವರ್ಗಾವಣೆಯಾಗಿದ್ದಾರೆ. ಸಂತೋಷ ಭಂಡಾರಿಯವರಿಗೆ ಸ್ಥಳ ನಿಗದಿಮಾಡಿಲ್ಲ ಹಾಗೆಯೇ ಸಿದ್ಧಾಪುರಕ್ಕೆ ಬರಲಿರುವ ತಹಸಿಲ್ಧಾರರ ವಿವರವೂ ಆದೇಶದಲ್ಲಿಲ್ಲ.
