

ಸಿದ್ದಾಪುರ : ಪಟ್ಟಣದ ಬಾಲ ಭವನದಲ್ಲಿ ಫೆ 14 ರಂದು ಮಧ್ಯಾಹ್ನ 2 ರಿಂದ 5 ರವರೆಗೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರಿಂದ ಎಲುಬು ಮತ್ತು ಕೀಲು ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ತಾಲೂಕ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ್ ತಿಳಿಸಿದರು
ಅವರು ಪಟ್ಟಣದ ಬಾಲ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕೆ ಎಸ್ ಹೆಗ್ಡೆ ಆಸ್ಪತ್ರೆ ಯ ನುರಿತ ತಜ್ಞ ವೈದ್ಯರುಗಳಾದ ಡಾ ವಿಕ್ರಮ್ ಶೆಟ್ಟಿ, ಡಾ ಸಿದ್ದಾರ್ಥ್ ಶೆಟ್ಟಿ ಡಾ ವಿನಯ್ ಕುಮಾರ್, ಡಾ ಪೃಥ್ವಿ ಕೆ ಪಿ ರವರು ಶಿಬಿರ ದಲ್ಲಿ ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ
ಕಾರಣ ಹೊಸ ಮತ್ತು ಹಳೆಯ ರೋಗಿಗಳು ಈ ಶಿಬಿರದ ಹೆಚ್ಚಿನ ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು ಹೆಚ್ಚಿನ ಮಾಹಿತಿ ಗಾಗಿ
ಸಿ ಎಸ್ ಗೌಡರ್ 9448738131, ರಾಜೇಶ್ ಮಳವಳ್ಳಿ 9353904882 ರನ್ನು ಸಂಪರ್ಕಿಸಲು ತಿಳಿಸಿದ್ದಾರೆ.
