nk crimes today- ಹಳಿಯಾಳದಲ್ಲಿ ಕೊಲೆ,ಹಾವೇರಿಯಲ್ಲಿ ಸಾವು

ಕಾರವಾರ: ಪತ್ನಿ ಕೊಂದು ಬ್ಯಾರೆಲ್ ನಲ್ಲಿ ಬಚ್ಚಿಟ್ಟಿದ್ದ ಪತಿಯ ಬಂಧನ

ಪತ್ನಿಯನ್ನು ಹತ್ಯೆ ಮಾಡಿದ ಪತಿಯೊಬ್ಬ ನಂತರ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿ ಇಟ್ಟು ಕಾಡಿಗೆ ಎಸೆದಿರವ ದಾರುಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.

file photo

ಕಾರವಾರ: ಪತ್ನಿಯನ್ನು ಹತ್ಯೆ ಮಾಡಿದ ಪತಿಯೊಬ್ಬ ನಂತರ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿ ಇಟ್ಟು ಕಾಡಿಗೆ ಎಸೆದಿರವ ದಾರುಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.

ಘಟನೆ ಸಂಬಂಧ ಹಳಿಯಾಳ-ದಾಂಡೇಲಿ ಪೊಲೀಸರು ಆರೋಪಿ ಹಾಗೂ ಶವ ವಿಲೇವಾರಿಗೆ ಸಹಕರಿಸಿದ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.

ಮೃತ ಮಹಿಳೆಯನ್ನು ಶಾಂತಕುಮಾರಿ ಎಂದು ಗುರ್ತಿಸಲಾಗಿದೆ. ತನಗಿಂತ 10 ವರ್ಷ ಕಿರಿಯವನಾದ ತುಕಾರಾಂ ಎಂಬಾತನನ್ನು ಶಾಂತಕುಮಾರಿ ವಿವಾಹವಾಗಿದ್ದರು. ತನಗೆ ದ್ರೋಹ ಬಗೆದಿರುವುದಾಗಿ ಶಾಂತಕುಮಾರಿ ಆಗಾಗ್ಗೆ ಪತಿಯೊಂದಿಗೆ ಜಗಳ ಮಾಡುತ್ತಿದ್ದಳು. ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ, ತುಕಾರಾಮ್, ಶಾಂತಕುಮಾರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪತ್ನಿಯ ಶವವನ್ನು ನೀರು ತುಂಬುವ ಬ್ಯಾರಲ್​​ನಲ್ಲಿ ಬಚ್ಚಿಟ್ಟಿದ್ದಾನೆ.

ಬಳಿಕ ಮನೆ ಖಾಲಿ ಮಾಡುವ ನೆಪದಲ್ಲಿ ಇಬ್ಬರ ಸಹಾಯದೊಂದಿಗೆ ಟಾಟಾ ಎಸ್​ ಬಾಡಿಗೆ ಪಡೆದು ಶವ ತುಂಬಿದ ಬ್ಯಾರಲ್​​’ನ್ನು ವಾಹನದಲ್ಲಿ ಇರಿಸಿದ್ದಾನೆ. ಇದನ್ನು ಗಮನಿಸಿದ ಮನೆ ಮಾಲೀಕರು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತುಕಾರಾಂ ಗೋವಾಗೆ ಹೋಗಬೇಕೆಂದು ಉತ್ತರಿಸಿದ್ದಾನೆ. ನಂತರ ಶವವನ್ನು ಕಾಡೊಂದರಲ್ಲಿ ಎಸೆದಿದ್ದಾನೆ. ಈ ನಡುವೆ ಮಾಹಿತಿ ತಿಳಿದಿದ್ದ ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.

ವಾಹನದ ಬಗ್ಗೆ ವಿವರಗಳು ನಮಗೆ ತಿಳಿದಿರಲಿಲ್ಲ. ಆದರೆ, ವಾಹನದಲ್ಲಿ ಮೂವರು ಇರುತ್ತಾರೆಂಬ ಮಾಹಿತಿ ಮಾತ್ರ ತಿಳಿದಿತ್ತು. ತೇರ್ಗಾಂವ್ ಗ್ರಾಮದ ಬಳಿ ವಾಹನವೊಂದು ಕಂಡು ಬಂದಿತ್ತು. ಆದರೆ, ವಾಹನದಲ್ಲಿ ಏನೂ ಇರಲಿಲ್ಲ. ಈ ವೇಳೆ ವಾಹನವನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆರೋಪಿಗಳು ಹತ್ಯೆ ಕುರಿತು ಬಾಯ್ಬಿಟ್ಟಿದ್ದರು. ಬಳಿಕ ಶವ ಎಸೆದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಮಹಿಳೆಗಿದು ಎರಡನೇ ವಿವಾಹವಾಗಿತ್ತು. ಬಂಧಿತರಾಗಿರುವ ಇಬ್ಬರನ್ನು ರಿಜ್ವಾನ್ ಮತ್ತು ಸಮೀರ್ ಪಂತೋಜಿ ಎಂದು ಗುರ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವೇರಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರ ಸಕ್ಕರೆ ಕಾರ್ಖಾನೆ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

sugar factory worker dies after being hit by machinery at Haveri

ಹಾವೇರಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಂತ್ರದ ಬೆಲ್ಟ್ ಗೆ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ದುಂಢಸಿ ಗ್ರಾಮದ ನವೀನ ಬಸಪ್ಪ ಚಲವಾದಿ(19 ವರ್ಷ) ಮೃತಪಟ್ಟ ಕಾರ್ಮಿಕರಾಗಿದ್ದಾರೆ. ಕಬ್ಬು ತುಂಬುವ ಯಂತ್ರದ ಬೆಲ್ಟಿಗೆ ನವೀನನ ಎರಡು ಕೈಗಳು ಸಿಲುಕಿ ತುಂಡಾಗಿ, ತೀವ್ರ ರಕ್ತಸ್ರಾವದಿಂದ ಕಾರ್ಮಿಕ ನವೀನ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತಾ ಕ್ರಮವಿರಲಿಲ್ಲ
“ಕೋಣನಕೇರಿಯ ವಿಐಪಿಎನ್ ಡಿಸ್ಟಿಲರಿ ಕಾರ್ಖಾನೆಯಲ್ಲಿ  ಯಾವುದೇ ಸುರಕ್ಷಾ ಕ್ರಮವಿಲ್ಲದೇ,  ದೊಡ್ಡ ದೊಡ್ಡ ಯಂತ್ರಗಳ ಬೆಲ್ಟ್ ಹತ್ತಿರ ಕೌಶಲರಹಿತ ಕಾರ್ಮಿಕನಿಂದ ಬುಟ್ಟಿಯಿಂದ ಕಬ್ಬಿನ ಪುಡಿಯನ್ನು ತುಂಬಿ ಹಾಕಿಸಲಾಗುತ್ತಿತ್ತು. ಸ್ಥಳದಲ್ಲಿ ಯಾವುದೇ ಜಾಲರಿ, ಸುರಕ್ಷಾ ಕ್ರಮಗಳಿಲ್ಲದ ಕಾರಣ ಈ ದುರ್ಘಟನೆ ನಡೆದಿದೆ” ಎಂದು ಮೃತನ ಸಂಬಂಧಿಗಳು ದೂರಿದ್ದಾರೆ.

ಕಾರ್ಖಾನೆ ಮಾಲೀಕ ವಿವೇಕ ಹೆಬ್ಬಾರ್, ಜನರಲ್ ಮ್ಯಾನೇಜರ್ ಮಂಜುನಾಥ, ಲೇಬರ್ ಸಪ್ಲೈರ್ಗಳಾದ ಬಸವರಾಜ, ಉಮೇಶ ಸುರವೇ, ವಿಶ್ವನಾಥ ಎ.ಎಸ್,  ಆಕಾಶ ಧರ್ಮೋಜಿ ಸೇರಿದಂತೆ 6 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕಪ್ರಡಾ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *