ಅಂಡಮಾನ್ ಲಡಾಯಿ ಕತೆ!


ಅನುಪಮಾರ ಅಂಡಮಾನ್‍ವಾಸ್ತವ ಪಯಣ ಅಮಾನುಷ್ಯತ್ವದ ಅತಿಗೆ ಉತ್ಕøಷ್ಟ ನಿದರ್ಶನ
ಆಧುನಿಕ ಆಕರ್óಣೆಗಳ ಅನ್ವೇಷಣೆಗಳಿಂದ ಲಯತಪ್ಪಿ ಮಿತಿಮೀರಿ ಬಹುದೂರ ಸಾಗಿರುವ ಆಧುನಿಕ ಮಾನವ ಈಗೀಗ ಮಾನವನಮೂಲ ಪುರುಷ ಕೋತಿಗಳ ಕಾಟಕ್ಕೆ ಬಲಿಯಾಗುತಿದ್ದಾನೆ. ವಿಶೇಶವೆಂದರೆ..
ಕೋತಿಗಳಂತೆ ಕಾಡುಬಿಟ್ಟು ನಾಡಿಗೆಬರುವ ಸ್ವಾತಂತ್ರ್ಯವೇ ಇಲ್ಲದ ಆದಿಮಾನವ ಜನಾಂಗದ ಪ್ರಸ್ತುತತೆ ವಾಸ್ತವದ ಧಾರುಣತೆಯನ್ನು ಈಗಿನ ಜನತೆ ಕಲ್ಫಿಸಿಕೊಳ್ಳಲು ಸಾಧ್ಯವೇ? ನೋ.ಚಾನ್ಸ್.
ಏಕೆಂದರೆ ನಮ್ಮ ಪ್ರಗತಿ ವಿಸ್ಮøತಿಗೆ ಕಾರಣವಾಗಿದೆ. ಕಾಂಕ್ರೀಟ್‍ಕಾಡಿನ ನಿರ್ಬಂಧಿತ ಹವಾನಿಯಂತ್ರಿತ ಕೋಣೆಯೊಳಗೆ ನಮ್ಮದೇ ಸಂಸಾರ,ಕುಟುಂಬಗಳೆಂಬ ‘ಲೋಕಸೃಷ್ಟಿಸಿಕೊಂಡಿರುವ ನಮಗೆ ಸಹಜ ಸಂವೇದನೆಗಳೇ ಸತ್ತುಹೋಗಿವೆ. ನಮ್ಮ ಸಂಬಮಧಿಗಳು ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ಅಲ್ಲಿರುವ ಸಂಬಂಧಿಗಳ ಬಗ್ಗೆ ಮಾತು ಪ್ರಾರಂಭವಾದಾಗ ನನ್ನ ತಲೆಯಲ್ಲಿ 20 ವರ್ಷಗಳ ಹಿಂದಿನ ಮಲಿಯಾಳಿ ಸಿನೆಮಾ ಕಾಲಾಪಾನಿ (ಸಜಾ ಇ-ಕಾಲಾಪಾನಿ) ನೆನಪಾಗುತಿತ್ತು. ನಮಗೆಬಾರದ ಭಾಷೆಯ ವಿಶಿಷ್ಟಚಿತ್ರ ನಮಗೆ ರವಾನಿಸಿದ ಕುತೂಹಲ ನೆನಪಿಸಿದ ಇತಿಹಾಸ ಆ ನಂತರ ಅಂಡಮಾನ್ ಬಗ್ಗೆ ನನಗೆ ಸಿಕ್ಕ ಸಾಹಿತ್ಯ ಮಾಹಿತಿಗಳು ಅಂಡಮಾನ್ ಬಗ್ಗೆ ಒಂಥರಾ ವಿಚಿತ್ರ,ವಿಶೇಶ ಕಲ್ಫನೆಗೆ ಕಾರಣವಾಗಿದ್ದವು.
ಮೊನ್ನೆ ಡಿ.ಬಿ.ಯವರು ಕೊಟ್ಟ ಡಾ. ಎಚ್.ಎಸ್. ಅನುಪಮಾರ ‘ಅಂಡಮಾನ್ ಕಂಡಹಾಗೆ’ ಪುಸ್ತಕ ನನ್ನನ್ನು ನಿಜಕ್ಕೂ ಅಲ್ಲಾಡಿಸಿಬಿಟ್ಟಿತ್ತು.
ಅಂಡಮಾನ್ ದ್ವೀಪ ಆದಿಮಾನವನ ಮುಗ್ಧತೆ ಅನಿವಾರ್ಯತೆ,ಆಧುನಿಕ ಯುದ್ಧ ಸ್ವಾತಂತ್ರ್ಯ, ಅಧಿಕಾರ-ಪ್ರಭುತ್ವ ಎಲ್ಲದಕ್ಕೂ ಸಾಕ್ಷಿಯಾಗಿ ಹ್ಯಾಗೆ ಪ್ರತ್ಯೇಕತೆಯ ಅಪಾಯವನ್ನು ಸಹಿಸಿಕೊಂಡಿದೆ ಎಂದು ಯೋಚಿಸಿದಾಗ ನೋವು,ವೇದನೆಗಳ ಜೊತೆಜೊತೆಗೇ ಆಶ್ಚರ್ಯ-ವಿಸ್ಮಯ ಆಗದೆ ಇರುವುದಿಲ್ಲ.
ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದ ಜಾಗತಿಕ ವಾಸ್ತವ, ಭಾರತದ ಹೀನ ಚಾರಿತ್ರ್ಯಕ್ಕೆ ಹಿಡಿದ ಕನ್ನಡಿ ಅಂಡಮಾನ ವಾಸ್ತವ ಮತ್ತು ಪ್ರಸ್ತುತ ವಾತಾವರಣ ಹಾಗೂ ಇತಿಹಾಸ. ಮಾನವವಿಶಿಷ್ಟ ಪ್ರಬೇಧವೊಂದು ಅಳಿವಿನ ಅಂಚಿಗೆ ಸರಿದು ಕ್ರಮೇಣ ಚೇತರಿಸಿಕೊಳ್ಳುತ್ತಾ ಪ್ರಾಣಿಸದ್ರಶ ಬದುಕು ಸಾಗಿಸುತ್ತಿರುವುದನ್ನು ವಿಶೇಷತೆ ಎನ್ನಬೇಕೋ,
ಅವನತಿ ಎನ್ನಬೇಕೋ? ಮತ್ತೇನೆನ್ನಬೇಕು?
ಆಧುನಿಕ ಸುಧಾರಿತ ನಾಗರಿಕತೆ ತನ್ನ ಮಿತಿಅರಿಯದೆ ಅನೇಕರ ವ್ಯಾಪ್ತಿ-ಮಿತಿಗಳನ್ನು ಸಹಕರಿಸಿದ ಈಗಿನ (ಪ್ರಸ್ತುತ) ಪೈಶಾಚಿಕತೆ ಅಂಡಮಾನ್ ದ್ವೀಪವನ್ನು ಹೇಗೆಲ್ಲಾ ಹಿಂಸಿಸಿದೆ ಇದಕ್ಕೆ ಪರಿಹಾರ ಮಾರ್ಗ ಯಾವುದು? ಇವುಗಳನ್ನೆಲ್ಲಾ ಯೋಚಿಸುವಂತೆ ಮಾಡುವ ಲಡಾಯಿಪ್ರಕಾಶನದ ಅಂಡಮಾನ್ ಕಂಡಹಾಗೆ ಇತ್ತೀಚಿನ ಅಮೋಘಪ್ರಕಟಣೆ.
ಈ ಪುಸ್ತಕ ಓದಿಸಲು ಕಾರಣರಾದ ಲಡಾಯಿಬಸು, ಡಾ.ಅನುಪಮಾಕೃಷ್ಣ, ವೀರಲಿಂಗನಗೌಡ್ರು, ಡಿ.ಬಿ ಮಾವ, ಎಲ್ಲರಿಗೂ ನಾನಂತೂ ಋಣಿ. ಈ ಪುಸ್ತಕದ ಒಂದು ಪುಟ್ಟ ಬರಹದ ಮೂಲಕ ಸಮಾಜಮುಖಿ ಹುತಾತ್ಮರಾದ, ಹುತಾತ್ಮರಂತೆ ಬದುಕುತ್ತಿರುವ ಹುತಾತ್ಮರಾಗಲಿರುವವರಿಗೂ ಸ್ಮರಿಸಿ ಓದುಗರಿಗೆ ಅಂಡಮಾನ್ ಪರಿಚಯಿಸುತ್ತದೆ.
-ಕನ್ನೇಶ್.

(ಅಂಡಮಾನ್ ಕಂಡಹಾಗೆ-ಡಾ. ಎಸ್.ಎಚ್. ಅನುಪಮಾ)
ಮಹುವಾಮರ ಹೂಬಿಟ್ಟಾಗ ಅಥವಾ ಜೇನು ದೊರೆತಾಗಲಷ್ಟೇ ಮದ್ಯತಯಾರಿಸಿ ಕುಡಿಯತೊಡಗಿದ್ದವರಿಗೆ ಕ್ರೇಟುಗಟ್ಟಲೇ ಮದ್ಯ ಕಣ್ಣೆದುರು ಕುಣಿಯತೊಡಗಿದರೆ? ಬೇಟೆಗಾರ ಕುಲಗಳಿಗೆ ಅಕ್ಕಿ,ಗೋಧಿ-ಸಕ್ಕರೆಗಳನ್ನು ರೇಷನ್ನಿನಲ್ಲಿ ಪೂರೈಸಿ ಆಹಾರಭದ್ರತೆ ದೊರಕಿದರೆ?
ಮೈಕೈಗೆ ಬಳಿದ ಜೇಡಿಮಣ್ಣೇ ಉಡುಪಾದ ನಗ್ನ ಅರಣ್ಯವಾಸಿಗಳಿಗೆ ಅಂದಚೆಂದದ ಉಡುಪು ಅದರಿಂದ ಉತ್ಪ್ರೇಕ್ಷೆಗೊಳ್ಳುವ ದೇಹ ಸೌಂದರ್ಯ ನೋಡಿಕೊಳ್ಳಲೊಂದು ಕನ್ನಡಿ ಸಿಕ್ಕರೆ?
ಹಗಲು ಹೊತ್ತಿನ ವಿರಾಮ ಕಳೆಯಲು ಹಾಡು,ನರ್ತನ, ವಾದನದಲ್ಲಿ ತೊಡಗುತಿದ್ದ ಸಂಗೀತಪ್ರಿಯ ಬುಡಕಟ್ಟುಗಳಿಗೆ ರಾತ್ರಿಹಗಲೆನ್ನದೆ ಕೂಗುವ ಟಿವಿ. ಒಂದು ಬಟನ್ನಿನಷ್ಟೇ ದೂರವೆಂದಾದರೆ?
ಕೈಗಾರಿಕೀಕರಣಗೊಂಡ ಜಗತ್ತಿನ ಆಮಿಷಗಳು ಬುಡಕಟ್ಟುಗಳನ್ನು ಅಯಸ್ಕಾಂತದಂತೆ ಸೆಳೆಯುತ್ತವೆ, ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಅಂಡಮಾನ್ ಬುಡಕಟ್ಟುಗಳು ಉದಾಹರಣೆಯಾಗಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *