

ಜೆ.ಡಿ.ಎಸ್. ಒಕ್ಕಲಿಗರ ಪರ ಎಂದರೆ ಅದು ಒಂದು ಜಾತಿಗೆ ಸೀಮಿತವಲ್ಲ ಬದಲಾಗಿ ಅದು ರೈತರ, ಒಕ್ಕಲಿಗರ ಅಂದರೆ ವ್ಯವಸಾಯ ಮಾಡುವವರ ಪಕ್ಷ ಎಂದು ಜೆ.ಡಿ.ಎಸ್. ಮುಖಂಡ ಸೂರಜ್ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಜೆ.ಡಿ.ಎಸ್. ಗೆ ಇತರ ಪಕ್ಷಗಳ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆ.ಡಿ.ಎಸ್. ರೈತರ ಪರ ಪ್ರಣಾಳಿಕೆ ಮಾಡುವ ಪಕ್ಷ. ಜೆ.ಡಿ.ಎಸ್. ಅಧಿಕಾರಕ್ಕೆ ಬಂದರೆ ರೈತರು, ವೃದ್ಧರಿಗೆ ಮಾಸಿಕ ಹತ್ತು ಸಾವಿರ ಪಿಂಚಣಿ ನೀಡುತ್ತೇವೆ ಎಂದು ಪಕ್ಷ ಭರವಸೆ ನೀಡಿದೆ ಎಂದರು.
ದೇವೇಗೌಡರು, ಕುಮಾರಸ್ವಾಮಿ ಕೃಷಿ- ನೀರಾವರಿ, ಆಧಾರಿತ ಅಭಿವೃದ್ಧಿಪರ ಇರುವ ನಾಯಕರು ಹಾಗಾಗಿ ದಕ್ಷಿಣ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ಜೆ.ಡಿ.ಎಸ್. ಮತ್ತು ಅದರ ನಾಯಕರಿಗೆ ಮಾನ್ಯತೆ ಇದೆ. ಉತ್ತರ ಕನ್ನಡದಲ್ಲಿ ಕೂಡಾ ಜೆ.ಡಿ.ಎಸ್. ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಇದೇ ಸಂದರ್ಭದಲ್ಲಿ ಜೆ.ಡಿ.ಎಸ್. ತಾಲೂಕಾ ಘಟಕದಿಂದ ಸೂರಜ್ ನಾಯ್ಕ ಮತ್ತು ಉಪೇಂದ್ರ ಪೈ ರನ್ನು ಸನ್ಮಾನಿಸಿ ಗೌರವಿಸಲಾಯಿತು.

