

ಗುರುವಾರ ಅಂದರೆ ಮೇ೪, ಕನ್ನಡದ ಎವ್ವರ್ ಗ್ರೀನ್ ಹೀರೋ ಶಿವರಾಜ್ ಕುಮಾರ ಶಿರಸಿ-ಸಿದ್ಧಾಪುರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ನೆಚ್ಚಿನ ನಟ ಶಿವಣ್ಣ ತಮ್ಮೂರಲ್ಲಿ ರೋಡ್ ಶೋ ನಡೆಸಲಿದ್ದಾರೆ ಎನ್ನುವ ವಿಚಾರ ಶಿರಸಿ-ಸಿದ್ಧಾಪುರದ ಜನತೆಯ ರೋಮಾಂಚನಕ್ಕೆ ಕಾರಣವಾಗಿದೆ.
ಆನಂದ ದಿಂದ ಪ್ರಾರಂಭವಾಗಿ ವೇದದ ವರೆಗೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಶಿವರಾಜ್ ಕುಮಾರ ಮೊದಮೊದಲು ಚಾಕಲೇಟ್ ಹಿರೋ ಎಂದು ಪರಿಚಿತರಾಗಿದ್ದರು. ಚಿತ್ರರಂಗ ಪ್ರವೇಶಿಸುತ್ತಲೇ ಹ್ಯಾಟ್ರಿಕ್ ಹೀರೋ ಎಂದು ಅಭಿದಾನ ಪಡೆದ ಶಿವಣ್ಣ ಮುತ್ತಣ್ಣ, ಓಂ, ಭೂಮಿತಾಯಿಯ ಚೊಚ್ಚಲಮಗ ನಟಸಾರ್ವಭೌಮ, ರಾಕ್ಷಸ, ಕವಚ ,ನಮ್ಮೂರ ಮಂದಾರ ಹೂವೆ, ವೇದ,ಟಗರು ಹೀಗೆ ಶಿವರಾಜ್ ನಟಿಸಿದ ಚಿತ್ರಗಳು ಅವರ ವೈವಿಧ್ಯಮಯ ಅಭಿನಯಕ್ಕೆ ಸಾಕ್ಷಿ.
ಜನುಮದ ಜೋಡಿಯಿಂದ ಹಿಡಿದು, ಜೋಡಿಹಕ್ಕಿ ರಣರಂಗ ಮೋಡದ ಮರೆಯಲ್ಲಿ ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ನೂರಾರು ಸಿನೆಮಾಗಳಲ್ಲಿ ಪಾತ್ರ ವೈವಿಧ್ಯ, ವಸ್ತ್ರವೈವಿಧ್ಯಗಳಿಂದ ಹೆಸರು ಮಾಡಿದ ಶಿವರಾಜ್ ಕುಮಾರ ಅಪ್ಪ ರಾಜ್ ಕುಮಾರರಂತೆ ಮಾನವೀಯ ವ್ಯಕ್ತಿ.
ಶಿವರಾಜ್ ಕುಮಾರ ಆಗಲಿ ಅಥವಾ ದೊಡ್ಮನೆ ಕುಟುಂಬದ ಯಾರೇ ಆಗಲಿ ರಾಜಕೀಯದ ಬಗ್ಗೆ ವಿಶೇಶ ಆಸಕ್ತಿ,ಒಲವು ಇಟ್ಟುಕೊಂಡವರೇನಲ್ಲ ಆದರೆ ಶಿವರಾಜ್ ತಮ್ಮ ಪತ್ನಿ ಗೀತಾ ಕಾರಣಕ್ಕೆ ಕಾಂಗ್ರೆಸ್ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ. ರಾಜಕೀಯ ಕುಟುಂಬದ ಕುಡಿಯಾದ ಗೀತಾ ಶಿವರಾಜ್ ಕುಮಾರ್ ಬಂಗಾರಪ್ಪ ಬದುಕಿದ್ದಾಗ ರಾಜಕೀಯದ ಬಗ್ಗೆ ಯೋಚಿಸಿದವರೂ ಅಲ್ಲ ಪತಿ, ಕುಟುಂಬದ ಹಿತ, ಕೀರ್ತಿ, ಸಾಧನೆಗಳೇ ತಮ್ಮ ವರ ಎಂದು ಭಾವಿಸಿದ್ದ ಗೀತಾ ಸ್ವಯಂ ಕಾಂಗ್ರೆಸ್ ಕೈ ಹಿಡಿದು ಪತಿ, ಕನ್ನಡದ ಕಿಂಗ್, ಬೆಸ್ಟ್ ಹ್ಯೂಮನ್ ಬೀಯಿಂಗ್ ಶಿವರಾಜ್ ರನ್ನು ಕೈ ಪರ ಪ್ರಚಾರಕ್ಕೆ ಕೈ ಹಿಡಿದು ತಂದಿದ್ದಾರೆ. ನಾಲ್ಕು ದಶಕಗಳ ಸಿನಿ ಬದುಕಿನಲ್ಲಿ ನಿರಂತರ ನಾಯಕನಾದ ಶಿವರಾಜ್ ಕುಮಾರ ೬೦ ರ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಪ್ರಯಾಣ, ನಟನೆ,ಪ್ರವಾಸ ಮಾಡುವ ಜೊತೆಗೆ ಜನರನ್ನು ಆಕರ್ಷಿಸಬಲ್ಲರು ಎಂಬುದು ವಿಶೇಶ.
