

ನಿರಂತರ ಆರು ಬಾರಿ ಗೆದ್ದು ಪ್ರಬಲರಾಗಿ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಪರಾಭವಗೊಳಿಸುವುದು ಅಷ್ಟು ಸುಲಭವಿರಲಿಲ್ಲ ಅತಿ ಕಷ್ಟದ ಪರಿಶ್ರಮದ ಮೂಲಕ ಕಾಗೇರಿಯವರನ್ನು ಸೋಲಿಸಿದ ಭೀಮಣ್ಣ ನಾಯ್ಕರನ್ನು ರಾಜ್ಯ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಬೇಕು ಎಂದು ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಇಂದು ಸಿದ್ಧಾಪುರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತನಾಯ್ಕ ಮಳಲವಳ್ಳಿ ೩೦ ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದ ಶಿರಸಿ-ಸಿದ್ಧಾಪುರದಲ್ಲಿ ಬಿ.ಜೆ.ಪಿ. ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿದ್ದೇವೆ. ಪ್ರಭಾವಿ ವ್ಯಕ್ತಿಯನ್ನು ಸೋಲಿಸಿ ಶಾಸಕರಾದ ಭೀಮಣ್ಣನಾಯ್ಕರಿಗೆ ನ್ಯಾಯ ದೊರೆಯಬೇಕೆಂದರೆ ಭೀಮಣ್ಣ ನಾಯ್ಕ ಸಚಿವರಾಗಬೇಕು ಎಂದರು.
