ಮೊದಲ ಸಭೆಗೆಬಂದ ಅಭಿಮಾನಿಗಳ ನಡುವೆ ಭೀಮಣ್ಣರಿಗೆ ನೆರವಾದ ದೇವರಾಜ್!

ಕನಕದಾಸ ಗಲ್ಲಿ, ಅಮೀನಾ ಸರ್ಕಲ್‌ ಗಳಲ್ಲಿ ರಸ್ತೆ ಬಂದ್‌ ಮಾಡಲಾಗಿದೆ….

ಹಾಳದಕಟ್ಟಾದಲ್ಲಿ ಕುಡಿಯುವ ನೀರಿಲ್ಲ ಪ.ಪಂ. ನನಗೆ ಒಂದು ಕೊಡ ನೀರೂ ಕೊಟ್ಟಿಲ್ಲ.

ಹೆಸ್ಕಾಂ ಲೈನ್‌ ಗೆ ತಾಕುವ ಗಿಡ ಕತ್ತರಿಸಿಲ್ಲ, ಬಹಳಷ್ಟು ಪಂಚಾಯತ್‌ ಗಳ ವ್ಯಾಪ್ತಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ.

ತಾಲೂಕಾ ಪಂಚಾಯತ್‌ ಇ.ಓ.ಕಾರ್ಯನಿರ್ವಹಣೆ ಸರಿ ಇಲ್ಲ……

ಹೀಗೆ ಸಭಿಕರಿಂದ ಅಹವಾಲುಗಳ ಸರಪಳಿ ಹರಿದು ಬಂದಿದ್ದು ಯಾವುದೇ ಜನಸ್ಫಂದನ ಕಾರ್ಯಕ್ರಮದಲ್ಲಲ್ಲ ಬದಲಾಗಿ ನೂತನ ಶಾಸಕ ಭೀಮಣ್ಣ ನಾಯ್ಕರ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆಯ ಮೊದಲ ಸಭೆಯಲ್ಲಿ.!

ಸಿದ್ದಾಪುರ ತಹಸಿಲ್ಧಾರ ಕಛೇರಿಯ ಸಭಾಭವನದಲ್ಲಿ ನೂತನ ಶಾಸಕ ಭೀಮಣ್ಣ ನಾಯ್ಕರ ಅಧ್ಯಕ್ಷತೆಯಲ್ಲಿ ಮೊಟ್ಟ ಮೊದಲ ಪ್ರಗತಿಪರಿಶೀಲನಾ ಸಭೆ ನಡೆಯಿತು.

ನಿಯಮ, ರಿವಾಜುಗಳಂತೆ ತಾಲೂಕಿನ ಬಹುತೇಕ ಎಲ್ಲಾ ಹಿರಿಯ ಅಧಿಕಾರಿಗಳು ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದರು.

ನೂತನ ಶಾಸಕ ಭೀಮಣ್ಣ ನಾಯ್ಕರನ್ನು ಅಭಿನಂದಿಸಲು ಬಂದಿದ್ದ ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತರ ದಂಡು ಶಾಸಕರೊಟ್ಟಿಗೆ ಪ್ರಗತಿಪರಿಶೀಲನಾ ಸಭೆಗೂ ದಾಂಗುಡಿ ಇಟ್ಟಿತ್ತು. ತಮ್ಮ ನೆಚ್ಚಿನ ಶಾಸಕರು ಹೇಗೆ ಸಭೆ ನಡೆಸುತ್ತಾರೆ ಎನ್ನುವ ಕುತೂಹಲದಿಂದ ಬಂದಿದ್ದರೋ!?

ಅಥವಾ ಕಾಂಗ್ರೆಸ್‌ ಪಕ್ಷದ ಲಾಗಾಯ್ತಿನ ನಡವಳಿಕೆಯಂತೆ ನೂತನ ಶಾಸಕರ ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಸಭೆಗೆ ಆಗಮಿಸಿತ್ತೋ? ಒಟ್ಟೂ ಈ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗಿನ ಶಾಸಕರ ಚರ್ಚೆ ಬದಲಾಗಿ ಕಾರ್ಯಕರ್ತರ ಅಹವಾಲು ಸ್ವೀಕಾರ ಸಭೆಯಂತೆ ಈ ಸಂದರ್ಭ ಭಾಸವಾಯಿತು.

ಶಾಸಕರ ಸಭೆ ಸಮನ್ವಯ ಮಾಡುತಿದ್ದ ಸಹಾಯಕ ಕಮೀಷನರ್‌ ದೇವರಾಜ್‌ ಆರ್.ವಿವಿಧ ಇಲಾಖೆಗಳ ಅಧಿಕಾರಿಗಳಿಂದ ವರದಿ ಕೇಳುತಿದ್ದರೆ… ಕಾರ್ಯಕರ್ತರು, ಮುಖಂಡರು ತಮ್ಮ ಕುಂದು-ಕೊರತೆ, ಸಮಸ್ಯೆಗಳನ್ನು ಕೇಳಲು ಶುರು ಹಚ್ಚಿಕೊಂಡರು.

ಈ ಸಂದರ್ಭವನ್ನು ಜಾಣತನದಿಂದ ನಿಭಾಯಿಸಿದ ಎ.ಸಿ. ದೇವರಾಜ್‌ ಶಾಸಕರ ಅಭಿಮಾನಿ ದೇವರುಗಳನ್ನು ನಿಯಂತ್ರಿಸಿ ಪ್ರಗತಿಪರಿಶೀಲನೆಯ ಸಮನ್ವಯ ನಡೆಸಿದರು.

ಪ.ಪಂ. ಸೇರಿದಂತೆ ತಾಲೂಕಿನ ನೀರಿನ ಸಮಸ್ಯೆಯ ಬಗ್ಗೆ ಎರಡು ದಿವಸದೊಳಗೆ ಸಂಪೂರ್ಣ ಮಾಹಿತಿ ನೀಡಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಸೇರಿದಂತೆ ವಿವಿಧ ಇಲಾಖೆಗಳಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಪೂರೈಸುವಂತೆ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *