

ಚುನಾವಣೆಗೆ ಮುನ್ನ ಮೇ೩ರಂದು ಅಂಕೋಲಾಕ್ಕೆ ಆಗಮಿಸಿದ್ದಪ್ರಧಾನಿ ಮೋದಿ ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರನ್ನು ಸಾಗಿಸಲು ಸಿದ್ಧಾಪುರದಿಂದ ೪೬ ಬಸ್ ಗಳನ್ನು ಕಾರವಾರಕ್ಕೆ ಚುನಾವಣಾ ಆಯೋಗದ ಅನುಮತಿಇಲ್ಲದೆ ಬಳಸಿದ ಹಿನ್ನೆಲೆಯಲ್ಲಿ ಬಿ.ಜೆ.ಪಿ.ಯ ೧೫ ಕಾರ್ಯಕರ್ತರ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮೇಶ್ ನಾರಾಯಣ ನಾಯ್ಕ ಶಿರಳಗಿ, ಗಣಪತಿ ನಾರಾಯಣ ಭಂಡಾರಿ ಶಿರಳಗಿ ತಿಮ್ಮಯ್ಯ ಮರಿಯಾ ಕೆಳಗಿನಮನೆ, ತಿಮ್ಮಪ್ಪ ರಾಮಾ ಮಡಿವಾಳ, ಆದರ್ಶ ನಾಗೇಶ್ ಪೈ, ಶಿವಾನಂದ ಮಾಸ್ತ್ಯಾ ಮಡಿವಾಳ, ರಮಾನಂದ ಪರಶುರಾಮ ಮಡಿವಾಳ,ರಾಜಾರಾಮ ಆರ್. ಹೆಗಡೆ ಬಿಳೇಕೈ, ಮಹಾಬಲೇಶ್ವರ ಹೆಗಡೆ ಅರಶಿಣಗೋಡು, ಪ್ರಸನ್ನ ಹೆಗಡೆ ನೀರಗಾನ, ವಿನಾಯಕ ಹೆಗಡೆ ಗೋಳಗೋಡು ಚಂದ್ರಶೇಖರ್ ಗೌಡ ಹುಲಕುತ್ರಿ, ಗಿರೀಶ್ ಶೇಟ್ ಆಲ್ಮನೆ, ದೇವೇಂದ್ರ ನಾಯ್ಕ ಹಕ್ಕಲಕೇರಿ, ಪ್ರದೀಪ ಹೆಗಡೆ ಕೆಳಗಿನ ಕರ್ಜಗಿ ಆರೋಪಿತರಾಗಿದ್ದು ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಈ ಬಸ್ ಗಳಿಗೆ ಅನುಮತಿ ಪಡೆಯದಿದ್ದರೂ ಈ ಎಲ್ಲಾ ಕಾರ್ಯಕರ್ತರು ಬಸ್ ಬಳಸಿರುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಎಂದು ಪ್ಲಾಯಿಂಗ್ ಸ್ಕ್ವಾಡ್ ಹರೀಶ್ ರ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
