ಮೋದಿ ಕಾರ್ಯಕ್ರಮಕ್ಕೆ ಕಾಗೇರಿ ಬಸ್‌ ಅನುಮತಿ ಪಡೆಯದ ಹಿನ್ನೆಲೆ ಬಿ.ಜೆ.ಪಿ.ಯ ೧೫ ಜನರ ಮೇಲೆ ಪ್ರಕರಣ ದಾಖಲು

ಚುನಾವಣೆಗೆ ಮುನ್ನ ಮೇ೩ರಂದು ಅಂಕೋಲಾಕ್ಕೆ ಆಗಮಿಸಿದ್ದಪ್ರಧಾನಿ ಮೋದಿ ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರನ್ನು ಸಾಗಿಸಲು ಸಿದ್ಧಾಪುರದಿಂದ ೪೬ ಬಸ್‌ ಗಳನ್ನು ಕಾರವಾರಕ್ಕೆ ಚುನಾವಣಾ ಆಯೋಗದ ಅನುಮತಿಇಲ್ಲದೆ ಬಳಸಿದ ಹಿನ್ನೆಲೆಯಲ್ಲಿ ಬಿ.ಜೆ.ಪಿ.ಯ ೧೫ ಕಾರ್ಯಕರ್ತರ ವಿರುದ್ಧ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮೇಶ್‌ ನಾರಾಯಣ ನಾಯ್ಕ ಶಿರಳಗಿ, ಗಣಪತಿ ನಾರಾಯಣ ಭಂಡಾರಿ ಶಿರಳಗಿ ತಿಮ್ಮಯ್ಯ ಮರಿಯಾ ಕೆಳಗಿನಮನೆ, ತಿಮ್ಮಪ್ಪ ರಾಮಾ ಮಡಿವಾಳ, ಆದರ್ಶ ನಾಗೇಶ್‌ ಪೈ, ಶಿವಾನಂದ ಮಾಸ್ತ್ಯಾ ಮಡಿವಾಳ, ರಮಾನಂದ ಪರಶುರಾಮ ಮಡಿವಾಳ,ರಾಜಾರಾಮ ಆರ್.‌ ಹೆಗಡೆ ಬಿಳೇಕೈ, ಮಹಾಬಲೇಶ್ವರ ಹೆಗಡೆ ಅರಶಿಣಗೋಡು, ಪ್ರಸನ್ನ ಹೆಗಡೆ ನೀರಗಾನ, ವಿನಾಯಕ ಹೆಗಡೆ ಗೋಳಗೋಡು ಚಂದ್ರಶೇಖರ್‌ ಗೌಡ ಹುಲಕುತ್ರಿ, ಗಿರೀಶ್‌ ಶೇಟ್‌ ಆಲ್ಮನೆ, ದೇವೇಂದ್ರ ನಾಯ್ಕ ಹಕ್ಕಲಕೇರಿ, ಪ್ರದೀಪ ಹೆಗಡೆ ಕೆಳಗಿನ ಕರ್ಜಗಿ ಆರೋಪಿತರಾಗಿದ್ದು ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಈ ಬಸ್‌ ಗಳಿಗೆ ಅನುಮತಿ ಪಡೆಯದಿದ್ದರೂ ಈ ಎಲ್ಲಾ ಕಾರ್ಯಕರ್ತರು ಬಸ್‌ ಬಳಸಿರುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಎಂದು ಪ್ಲಾಯಿಂಗ್‌ ಸ್ಕ್ವಾಡ್‌ ಹರೀಶ್‌ ರ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *