

ಭಾರತೀಯರು ವೈದಿಕ ಸಂಸ್ಕೃತಿ,ಸಂಸ್ಕಾರಗಳಿಗೆ ದಾಸರಾಗುತ್ತ ಬೆಳೆದವರು. ದ್ರಾವಿಡರಲ್ಲಿ ದೈವಾರಾಧನೆ ವಿಭಿನ್ನ ಸ್ವರೂಪದಲ್ಲಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ದ್ರಾವಿಡರಲ್ಲಿ ಕೂಡಾ ವೈದಿಕ ಆಚಾರ, ವಿಚಾರಗಳನ್ನು ತುರುಕಿ ಅವರ ಸಾಂಸ್ಕೃತಿಕ ಅನನ್ಯತೆಯನ್ನು ಮೃಧುಗೊಳಿಸಲಾಗುತ್ತಿದೆ.
ದ್ರಾವಿಡ ಮೂಲದ ಜನಾಂಗೀಯ ಮೂಲದವರನ್ನು ಹೊಂದಿರುವ ಮಲೆನಾಡಿನಲ್ಲಿ ಪ್ರತಿಗ್ರಾಮದಲ್ಲಿ ಗಾಮ ಅಥವಾ ಗ್ರಾಮ ದೇವರ ಆರಾಧನೆ ಇದೆ. ಗ್ರಾಮ, ಮತ್ತು ಗಾಮ ದೇವರ ದೇವಾಲಯಗಳನ್ನು ಹೊಂದಿರುವ ಬಹುತೇಕ ಗ್ರಾಮಗಳಲ್ಲಿ ಗಾಮನ ಆರಾಧನೆ ಇದೆ. ಈ ಗಾಮ ಯಾರು? ಗ್ರಾಮ ದೇವಾಲಯದಲ್ಲಿ ಇರುವ ಗಾಮ ದೇವರು ಅಥವಾ ಗ್ರಾಮ ದೇವರ ನಿಜಸ್ವರೂಪವೇನು ಎನ್ನುವ ಸತ್ಯ ಬಹುತೇಕರಿಗೆ ಗೊತ್ತೇ? ಇಲ್ಲ.
ಮಲೆನಾಡು, ಬಯಲುಸೀಮೆಗಳಲ್ಲಿ ಗಾಮ, ಗ್ರಾಮ ದೇವರು ಎಂದು ಕರೆಯಲಾಗುವ ದೇವರು ಮೂಲದಲ್ಲಿ ರಾಮ! ಆದರೆ ಸನಾತನಿಗಳು ಆರಾಧಿಸುವ ರಾಮಾಯಣದ ಕಾಲ್ಫನಿಕ ರಾಮ ಈ ರಾಮನಲ್ಲ. ಅವೈದಿಕರು ಆರಾಧಿಸುವ ರಾಮ ಚರಿತ್ರೆಯ ಕುಮಾರ ರಾಮ. ಕುಮಾರ ರಾಮ ಒಬ್ಬ ರಾಜಪುತ್ರ ಆತ ತನ್ನ ತ್ಯಾಗ, ಶೌರ್ಯ, ವೀರತ್ವಗಳಿಂದಲೇ ಅಮರನಾದವನು.
ಭಾರತೀಯ ಪರಂಪರೆಯಲ್ಲಿ ವೀರರು, ಧೀರರು, ಪರಾಕ್ರಮಿಗಳಿಗೆ ಪ್ರಮುಖ ಸ್ಥಾನ. ಕುಮಾರ ರಾಮ ತನ್ನ ತಂದೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ವೀರ, ಐತಿಹಾಸಿಕ ದಾಖಲೆಗಳ ಪ್ರಕಾರ ಮೊಗಲರು, ಬ್ರೀಟೀಷರ ವಿರುದ್ಧ ಹೋರಾಡಿದ ವೀರಪರಾಕ್ರಮಿ ಈ ರಾಮ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕೊಪ್ಪಳ-ಗಂಗಾವತಿ, ಚಿತ್ರದುರ್ಗ ಸೇರಿದಂತೆ ಕೆಲವು ಕಡೆ ಅತಿ ವಿರಳವಾಗಿ ಈ ಕುಮಾರ ರಾಮನದೇವಾಲಯಗಳಿವೆ.
ಈ ಕುಮಾರರಾಮನನ್ನು ರಾಮ ಎಂದು ಆರಾಧಿಸುತ್ತ ಇದೇ ರಾಮ ಗಾಮ ಎಂದು ಅಪಭ್ರಂಶವಾಗಿ ನಂತರ ಗ್ರಾಮ ದೇವರು ಎಂದು ರೂಢಿಯಾಯಿತು ಎನ್ನುವ ಐತಿಹಾಸಿಕ ದಾಖಲೆಗಳಿವೆ. ಹಾಗಾಗಿ ಮಲೆನಾಡಿನ ಕುಮಾರ ರಾಮ ರಾಮಾಯಣದ ರಾಮನಲ್ಲ, ಮಳೆಗಾಲದ ಆರಿದ್ರ ಹಬ್ಬ ಅಥವಾ ಆರಿದ್ರಮಳೆಯ ಹನಿಹಬ್ಬದಲ್ಲಿ ಕೆಳವರ್ಗಗಳು ಆರಾಧಿಸುವ ಗಾಮನ ಮುಖ, ರಾಮ, ಗ್ರಾಮ ದೇವರುಗಳೆಲ್ಲಾ ಮೂಲದಲ್ಲಿ ರಾಮ ದೇವರುಗಳೇ ಆದರೂ ಅವರು ವೈದಿಕ ರಾಮರಲ್ಲ ಬದಲಾಗಿ ಅವೈದಿಕ ಕುಮಾರ ರಾಮರು ಇವರನ್ನೇ ಗಾಮ ದೇವರು, ಗ್ರಾಮ ದೇವರು ಎಂದು ಆರಾಧಿಸಲಾಗುತ್ತಿದೆ.
