



ತಾಯಿ, ಪಾಲಕರು ಮತ್ತು ಶಿಕ್ಷಕರ ಋಣ ತೀರಿಸಲು ಒಂದು ಜನ್ಮ ಸಾಲದು ಎಂದಿರುವ ನಿವೃತ್ತ ಸೈನಿಕ ಗೋವಿಂದ ಹರ್ಗಿ ಶಿಕ್ಷಕರು ಮಾದರಿಯಾಗುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದಶನ ಮಾಡಬೇಕು ಎಂದು ಸಲಹೆ ನೀಡಿದರು. ಹಲಗೇರಿ ಸರ್ಕಾರಿ ಪ. ಪೂ. ಕಾಲೇಜ್ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲಾ ಕಾಲದಲ್ಲೂ ತಾಯಿ, ಶಿಕ್ಷಕರೇ ಮಾನ್ಯರು ಎಂದರು.

ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚ ಟುವಟಿಕೆ ಉದ್ಘಾಟಿಸಿದ ಪತ್ರಕರ್ತ ಕನ್ನೇಶ್ ಕೋಲಶಿರಸಿ ಮಾತನಾಡಿ ದೇಶ ಪ್ರೇಮ ವೆಂದರೆ ವ್ಯಕ್ತಿ ಯಿಂದ ಶಕ್ತಿಯಾಗಿ ಬಿಂದುವಿಂದ ಸಿಂಧುವಾಗಿ ಲೋಕಪ್ರೇಮಿ ಯಾಗುವ ಮೂಲಕ ವಿಶ್ವ ಮಾನವನಾಗುವ ಸುಧೀರ್ಘ ಪ್ರಕ್ರೀಯೆ ಎಂದು ವಿವರಿಸಿದರು. ಪ್ರಾಚಾರ್ಯ ದಿನೇಶ್ ಕೆ. ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಲೋಕೇಶ್ ನಾಯ್ಕ ಮಾತನಾಡಿದರು. ವಿದ್ಯಾರ್ಥಿನಿಯರೇ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಸಿಡಿ ಸಿ ಉಪಾಧ್ಯಕ್ಷ ಲಕ್ಷ್ಮಣ ಚೆನ್ನಯ್ಯ, ಕನ್ನೇಶ್ & ಗೋವಿಂದ್ ನಾಯ್ಕ ಹರಗಿ ಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

