


ಸಿದ್ದಾಪುರ , ಹಿರಿಯ ಸಹಕಾರಿಧುರೀಣ ಶಂಕರಗೌಡ ಪಾಟೀಲ್ ಬೈಲಹೊಂಗಲ ಸ್ಥಳೀಯ ಟಿ.ಎಂ.ಎಸ್‌ಸಿದ್ದಾಪುರಕ್ಕೆ ಭೇಟಿ ನೀಡಿ ,ಸಂಘದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.ಟಿ.ಎಂಎಸ್‌ಕಾರ್ಯಚಟುವಟಿಕೆಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಟಿ.ಎಂ.ಎಸ್‌ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ಮಾತನಾಡಿ ಶಂಕರಗೌಡ ಪಾಟೀಲ್ ಸಹಕಾರ ಮಾರಾಟ ಮಹಾಮಂಡಳ , ಕೆ.ಎಂ.ಎಫ್ , ಎಸ್.ಎಲ್.ಡಿ.ಬ್ಯಾಂಕ್‌ಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಸಹಕಾರಕ್ಷೇತ್ರಕ್ಕೆತಮ್ಮದೇಆದಕೊಡುಗೆ ನೀಡುತ್ತಿದ್ದಾರೆಎಂದು ಹೇಳಿ ಸಂಘದ ಪರವಾಗಿ ಸನ್ಮಾನಿಸಿದರು.
ಅವರಜೊತೆ ಬೈಲಹೊಂಗಲ ಎ.ಪಿ.ಎಂ.ಸಿ ಮಾಜಿ ನಿರ್ದೇಶಕರಾದ ಶಿವಜಾತಗೌಡ ಪಾಟೀಲ್ ಹಾಗೂ ಟಿ.ಎಂ.ಎಸ್ ವ್ಯವಸ್ಥಾಪಕ ಸತೀಶ್ ಹೆಗಡೆ ಹೆಗ್ಗಾರಕೈ ಉಪಸ್ಥಿತರಿದ್ದರು.
