



ಸಿದ್ಧಾಪುರ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈ ಸಂಘದ ನೂತನ ಆಡಳಿತ ಕಟ್ಟಡ ಮತ್ತು ಕಟ್ಟಡ ಸಾಮಗ್ರಿಗಳ ಮಾರಾಟ ಮಳಿಗೆ ಉದ್ಘಾಟನೆ ಸೆ.೮ ಶುಕ್ರವಾರ ಬೆಳಿಗ್ಗೆ ನಡೆಯಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಡಳಿತ ಮಂಡಳಿ ಶುಕ್ರವಾರದ ಕಾರ್ಯಕ್ರಮ ಹಾಗೂ ಇದರ ಭಾಗವಾಗೇ ನಡೆಯುವ ನೂತನ ಶಾಸಕ ಭೀಮಣ್ಣ ನಾಯ್ಕರಿಗೆ ಗೌರವಾರ್ಪಣೆ ಗಳ ಸಮಯದಲ್ಲಿ ಸಂಘದ ಸರ್ವಸದಸ್ಯರು ಹಾಗೂ ಸಾರ್ವಜನಿಕರಿಗೆ ಈ ಮೂಲಕ ಆಮಂತ್ರಿಸಿದೆ.
ಕೃಷಿಕರ ಒಡನಾಡಿಯಾದ ಸಂಸ್ಥೆ ಈ ಭಾಗದ ಜನರ ಬೇಡಿಕೆ, ಅಗತ್ಯ ಅರಿತು ಕಟ್ಟಡ ಸಾಮಗ್ರಿಗಳ ಪೂರೈಕೆಗೆ ಮುಂದಾಗಿದ್ದು ಸಂಘದ ಸದಸ್ಯರು ಈ ಸೇವೆಯ ಪ್ರಯೋಜನ ಪಡೆಯಬೇಕೆಂದು ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ಪ್ರಶಾಂತ ನಾಯ್ಕ ಕುಂಬ್ರಿಗದ್ದೆ ಮತ್ತು ಉಪಾಧ್ಯಕ್ಷ ಬಾಬು ನಾಯ್ಕ ಕಡಕೇರಿ ಕೋರಿದ್ದಾರೆ.
