


ಸಿದ್ದಾಪುರ: ಇಲ್ಲಿಯ ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದ ಸಭಾಭವನದಲ್ಲಿ ಬುಧವಾರ ನಡೆದ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧರಣಾ ಸಭೆಯಲ್ಲಿ ಹಿಂದಿನ ಅಧ್ಯಕ್ಷರು ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕನ್ನ ಕನ್ನ ನಾಯ್ಕ ಬೇಡ್ಕಣಿ, ಕರಿಯಜ್ಜ ಬಿಳಿಯಾ ನಾಯ್ಕ, ಶಿವರಾಮ ಮಡಿವಾಳ, ಕನ್ನ ಗೌರ್ಯ ನಾಯ್ಕ, ದ್ಯಾವಾ ತಿಮ್ಮ ನಾಯ್ಕ, ಹನುಮಂತ ನಾಯ್ಕ ಕುಂಬ್ರಿಗದ್ದೆ, ಉಮೇಶ ನಾಯ್ಕ ಬೇಡ್ಕಣಿ, ಗೋವಿಂದ ಗಣಪತಿ ನಾಯ್ಕ ಕಡಕೇರಿ, ಮಂಜುನಾಥ ಹೆಗಡೆ, ಎನ್.ಐ.ನಾಯ್ಕ
ಇವರ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಚಂದ್ರಶೇಖರ ಕುಂಬ್ರಿಗದ್ದೆ ಮಾತನಾಡಿ, ಸಂಘ ರೈತರ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮ ಹಾಕಿಕೊಳ್ಳಬೇಕು. ಉತ್ತಮವಾಗಿ ವ್ಯವಹಾರ ನಡೆಸುತ್ತಿರುವ ಸದಸ್ಯರನ್ನು ಗೌರವಿಸಬೇಕು ಎಂದರು.
ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಸಂಘದಲ್ಲಿ 967 ಜನ ಸದಸ್ಯರಿದ್ದಾರೆ. ಅನೇಕ ಮಹನೀಯರ ಅವಿರತ ಶ್ರಮದಿಂದ 1.46 ಕೋಟಿ ಶೇರು ಹೊಂದಿದ್ದು ಪ್ರಸಕ್ತ ಆರ್ಥಿಕ ವರ್ಷದಲ್ಲಿ 18 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಕಂಪ್ಯೂಟರಿಕೃತ ಪಾಸ್ ಬುಕ್ ನೀಡಲಾಗುತ್ತಿದೆ. ಪ್ರಸಕ್ತ ವರ್ಷ 760 ರೈತರಿಗೆ 4 ಕೋಟಿ ಬೆಳೆ ಸಾಲ ನೀಡಲಾಗಿದೆ. ಸಂಘದಿಂದ ನೀಡಲಾದ ಎಲ್ಲಾ ವಿಧದ ಸಾಲ ಸಂಪೂರ್ಣ ಭರಣವಾಗಿದೆ ಎಂದರು.

ಸಂಘದ ಸದಸ್ಯ ವಿ.ಎನ್.ನಾಯ್ಕ ಮಾತನಾಡಿ, ಸಂಸ್ಥೆಯ ಸದಸ್ಯರ ಶೇರನ್ನು ಕಡಿಮೆ ಮಾಡುವುದು ಸಂಘದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇದು ಸಹಕಾರಿ ತತ್ವಕ್ಕೆ ವಿರುದ್ಧವಾಗಿದೆ ಎಂದರು.
ಉಮೇಶ ನಾಯ್ಕ ಕಡಕೇರಿ ಮಾತನಾಡಿ, ಸದಸ್ಯರಿಗೆ 9% ಡಿವಿಡೆಂಟ್ ಕೊಡಿ ಎಂದು ಒತ್ತಾಯಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಬಾಬು ನಾಯ್ಕ ಕಡಕೇರಿ, ಸದಸ್ಯರಾದ ಕೆ.ಟಿ.ನಾಯ್ಕ ಕಡಕೇರಿ, ಅನಂತ ಗೌಡ, ಅಬ್ದುಲ್ ಖಾದರ್ ಸಾಬ್, ಗಣಪತಿ ನಾಯ್ಕ ಬೇಡ್ಕಣಿ, ಮಹಾಲಕ್ಷ್ಮೀ ನಾಯ್ಕ, ಕೆ.ಟಿ.ನಾಯ್ಕ ಬೇಡ್ಕಣಿ, ಗೀತಾ ಹೆಗಡೆ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಜಿ.ಕೆ. ಸಭೆ ನಡೆಸಿಕೊಟ್ಟರು.
