


ಪ್ಲಾಸ್ಟರ್ ಆಫ್ ಪ್ಯಾರೀಸ್ ಗುಂಗಿನಿಂದ ಹೊರಬರದ ಜನರಿಗೆ ಇಲ್ಲೊಬ್ಬ ಕಲಾವಿದ ಪರಿಸರ ಪೂರಕ ಗಣಪತಿ ಮಾಡುವ ಪರ್ಯಾಯ ವಿಧಾನ ಪರಿಚಯಿಸಿದ್ದಾರೆ.

ಪರಿಸರ ಸ್ನೇಹಿ ಗಣಪ, ಪರಿಸರ ಪೂರಕ ಗೌರಿ-ಗಣೇಶ ಹಬ್ಬ ಎನ್ನುವ ವಿಚಾರಕ್ಕೆ ಈಗ ಹೆಚ್ಚಿನ ಪ್ರಚಾರ ದೊರೆಯುತ್ತಿದೆ. ಹಬ್ಬ,ದೇವರು-ಭಕ್ತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಪರಿಸರಸ್ನೇಹಿ ಗಣೇಶ ಉತ್ಸವಕ್ಕೆ ಈಗ ಹೆಚ್ಚಿನ ಪ್ರಾಮುಖ್ಯತೆ.ಇಂಥ ಪರಿಸರ ಸ್ನೇಹಿ ಗಣಪನ ಬಗ್ಗೆ ಯೋಚಿಸುವ ಜನರಿಗೆ ಉತ್ತರ ಕನ್ನಡ ಜಿಲ್ಲೆಯ ಯುವ ಕಲಾವಿದರೊಬ್ಬರು ಸಂತೋಷದ ಸುದ್ದಿ ನೀಡಿದ್ದಾರೆ.
ಸಿದ್ಧಾಪುರದ ಕಲಾವಿದ ಶಿವಕುಮಾರ ಮೂರ್ತಿ ರಚನೆ ಮಾಡುವುದರಲ್ಲಿ ಸಿದ್ಧ ಹಸ್ತರು. ಕೃಷ್ಣ ಮೂರ್ತಿ, ಸರಸ್ವತಿ, ಲಕ್ಷ್ಮೀ, ಗೌರಿ ಗಣೇಶ್ ನ ಮಣ್ಣಿನ ಮೂರ್ತಿ ಮಾಡುವ ಕಲಾವಿದರಾದ ಇವರು ಕೆಲವು ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರೀಶ್ ಗೆ ಬದಲು ದೇಶೀ ಮಣ್ಣಿನ ಗಣಪನನ್ನು ಮಾಡುತ್ತಾ ಅಬ್ಬರವಿಲ್ಲದೆ ಪರಿಸರಸ್ನೇಹಿ ಹಬ್ಬವನ್ನು ಉತ್ತೇಜಿಸುತಿದ್ದಾರೆ.
ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನು ಬಳಸಿ, ಪರಿಸರಕ್ಕೆ ಮಾರಕವಾಗದಂತೆ ಎಚ್ಚರವಹಿಸಿ ಶಿವಕುಮಾರ ತಯಾರಿಸುವ ಪರಿಸರಸ್ನೇಹಿ ವಿಗ್ರಹಗಳು ಈಗ ಗಮನ ಸೆಳೆಯುತ್ತಿವೆ.ಕಡಿಮೆ ಪ್ರಮಾಣದ ಮಣ್ಣು, ಉಮಿ(ಜೊಳ್ಳುಭತ್ತ) ಜೊತೆಗೆ ಒಳಗಿದ ಬಿಳಿಹುಲ್ಲು ಬಳಸಿ ಶಿವಕುಮಾರ ಮಾಡಿವ ಪರಿಸರ ಸ್ನೇಹಿ ವಿಗ್ರಹಗಳು ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರೀಸ್ ಪ್ರತಿಮೆಗಳಿಗೆ ಪರ್ಯಾಯವಾಗಿ ಹೆಸರುಮಾಡುತ್ತಿವೆ.
ಸದಾ ಹೊಸತನ್ನು ಯೋಚಿಸುವ ಶಿವಕುಮಾರ್ ನಿರ್ಮಿಸುವ ಆಕರ್ಷಕ ಮಣ್ಣಿನ ಮೂರ್ತಿಗಳಿಗೆ ಸ್ಥಳೀಯವಾಗಿ ಹೆಚ್ಚು ಬೇಡಿಕೆ.
ಈಗ ಇವರು ಪರಿಚಯಿಸಿರುವ ಪಿ.ಪಿ.ಗೆ ಪರ್ಯಾಯ ಸ್ಥಳೀಯ ವಿಧಾನದ ಪರಿಸರಸ್ನೇಹಿ ಗಣಪ ಎಲ್ಲರ ಆಕರ್ಷಣೆಯ ಕೇಂದ್ರಗಳಾಗಿವೆ.ಪರಿಸರಕ್ಕೆ ಪೂರಕವಾದ ಮಣ್ಣಿನ ಗಣೇಶ್ ವಿಗ್ರಹ ರಚಿಸುವ ಶಿವಕುಮಾರ ಹಬ್ಬ,ದೇವರ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡಬಾರದೆನ್ನುವ ತಿಳುವಳಿಕೆ ಈ ಪರಿಸರ ಸ್ನೇಹಿ ಗಣಪನ ಸೃಷ್ಟಿಯ ಹಿಂದಿನ ವಿಶೇಶ ಎನ್ನುತ್ತಾರೆ.ಸರಳವಾಗಿ,ಮರುಬಳಕೆ ಮಾಡಬಹುದಾದ ಪರಿಸರಸ್ನೇಹಿ ಮೂರ್ತಿ ರಚಿಸುವ ಶಿವಕುಮಾರ ಹೊಸ ಕಲಾವಿದರಿಗೆ ಮಾದರಿಯಾಗಿದ್ದಾರೆ.
