local-news-ರಾಮಚಂದ್ರ ಭಾಗವತರಿಗೆ ನುಡಿನಮನ

ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ೨೦೨೨-೨೩ನೇ ಸಾಲಿನಲ್ಲಿ ೬ಲಕ್ಷದ ೮೧ಸಾವಿರದ ೪೮೦ರೂಗಳಷ್ಟು ಲಾಭಹೊಂದಿದೆ. ಸಂಘದ ಸದಸ್ಯರ ಮನೆ-ಮನ ಭೇಟಿ ಕಾರ್ಯಕ್ರಮ ಮುಂದುವರೆಸಿ ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಸದಸ್ಯರು ಹೆಚ್ಚು ವ್ಯವಹಾರ ಮಾಡುವಂತೆ ಮನವರಿಕೆ ಮಾಡಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಹೇಳಿದರು.
ಸಂಘದ ನಿವೇಶನದ ಗೋದಾಮು ಪ್ರಾಂಗಣದಲ್ಲಿ ನಡೆದ ೮೦ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಸೋಮವಾರ ಮಾತನಾಡಿದರು. ಸಂಘದ ಹಾಗೂ ಅಡಕೆ ಬೆಳೆಗಾರರ ಹಿತದೃಷ್ಠಿಯಿಂದ ಅಡಕೆ ಎಲೆ ಚುಕ್ಕೆ ರೋಗದ ಕುರಿತು ತೋಟಗಾರಿಕಾ ಇಲಾಖೆಯವರಿಂದ ಹಾಗೂ ತಜ್ಞರಿಂದ ರೈತರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗುವುದಲ್ಲದೇ ಕಾಡುಪ್ರಾಣಿಗಳಿಂದಾಗುತ್ತಿರುವ ಬೆಳೆ ಹಾನಿಯ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.


ವರ್ಷದಿಂದ ವರ್ಷಕ್ಕೆ ಸಂಘ ಪ್ರಗತಿಸಾಧಿಸುವುದರೊಂದಿಗೆ ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನದಲ್ಲಿ ಹೈನುಗಾರಿಕೆ, ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡಿ ಅರ್ಹರಿಗೆ ಸಾಲವನ್ನು ನೀಡಬೇಕೆಂದು ಸದಸ್ಯರು ಆಗ್ರಹಿಸಿದರು.
ಸಂಘದ ಹಿರಿಯ ಸದಸ್ಯರಾದ ಸೂರಪ್ಪ ಹೆಗಡೆ ಅರಶಿನಗೋಡ, ತಿಮ್ಮ ನಾಯ್ಕ ಹಲಸಗಾರ, ರಾಮಚಂದ್ರ ಭಟ್ಟ ಅಬ್ಬಿಗದ್ದೆ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಮೂಲಕ ಹೆಚ್ಚು ಮಹಸೂಲು ವಿಕ್ರಿಮಾಡಿದ ಭಾಸ್ಕರ ಹೆಗಡೆ ಅರಶಿನಗೋಡು, ಮಹೇಶ ಭಟ್ಟ ಹುತ್ಗಾರ ಹಾಗೂ ಮಹೇಶ ಹೆಗಡೆ ಹೊಸ್ಮನೆ ಅವರನ್ನು ಸನ್ಮಾನಿಸಲಾಯಿತು.


ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಕೃಷ್ಣ ಹೆಗಡೆ ಚಳ್ಳೆಹದ್ದ ಹಾಗೂ ಅಕೌಂಟೆಂಟ್ ಮಹ್ಮದ್ ಗುಲ್ಜಾರ್ ವಾರ್ಷಿಕ ವರದಿ ವಾಚಿಸಿದರು.
ಉಪಾಧ್ಯಕ್ಷೆ ಇಂದಿರಾ ಜಿ.ಹೆಗಡೆ, ಸುಮಾ ಹೆಗಡೆ ಹೊನ್ನೆಹದ್ದ, ಅಶೋಕ ಹೆಗಡೆ ಹಿರೇಕೈ, ನಾಗರಾಜ ಹೆಗಡೆ ಹುಲಿಮನೆ, ಮಂಜುನಾಥ ನಾಯ್ಕ ತೆಂಗಿನಮನೆ, ನಾಗರಾಜ ಹೆಗಡೆ ಹೊಲಗದ್ದೆ, ಸುಧಾಕರ ಹರಿಜನ ಹೊನ್ನೆಹದ್ದ ಉಪಸ್ಥಿತರಿದ್ದರು. ನಿರ್ದೇಶಕರಾದ ಅನಂತ ಹೆಗಡೆ ಗೊಂಟನಾಳ, ಅಶೋಕ ಹೆಗಡೆ ಹೀನಗಾರ, ಅನಂತ ಹೆಗಡೆ ಹೊಸಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

ಸಿದ್ದಾಪುರ
ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಅವರಿಗೆ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಅವರ ಅಭಿಮಾನಿಗಳಿಂದ ನುಡಿನಮನ ಕಾರ್ಯಕ್ರಮ ಸೋಮವಾರ ಜರುಗಿತು.
ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್, ಕಲಾವಿದ ವೆಂಕಟಗಿರಿ ಹೆಗಡೆ ಹಾರ್ಸಿಮನೆ, ತಾಳಮದ್ದಳೆ ಅರ್ಥದಾರಿ ಪಿ.ವಿ.ಹೆಗಡೆ ಹೊಸಗದ್ದೆ, ಮಹಾಬಲೇಶ್ವರ ಭಟ್ಟ ಅಗ್ಗೇರೆ, ನಾಟಿ ವೈದ್ಯ ಕೆ.ಟಿ.ಗೌಡ ಮಾದಲಮನೆ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಸಂಘಟಕ ಅನಂತ ಶಾನಭಾಗ ಹಾರ್ಸಿಕಟ್ಟಾ ಅವರು ರಾಮಚಂದ್ರ ನಾಯ್ಕ ಅವರ ಕುರಿತು ನುಡಿನಮನ ಸಲ್ಲಿಸಿದರು.ಎ.ಜಿ.ಹೆಗಡೆ ಹಿರೇಕೈ, ಅನಂತ ಹೆಗಡೆ ಹೊಸಗದ್ದೆ, ಡಿ.ಕೆ.ನಾಯ್ಕ ತೆಂಗಿನಮನೆ, ಅಶೋಕ ಹೆಗಡೆ ಹೀನಗಾರ, ನಾರಾಯಣ ನಾಯ್ಕ ದೇವಾಸ, ಪರಮೇಶ್ವರ ನಾಯ್ಕ ದೇವಾಸ, ಮಂಜುನಾಥ ನಾಯ್ಕ ತೆಂಗಿನಮನೆ, ಶ್ರೀಕಾಂತ ಶಾನಭಾಗ ಹಾರ್ಸಿಕಟ್ಟಾ, ಸಿ.ಎನ್.ಹೆಗಡೆ ಹೊನ್ನೆಹದ್ದ ಇತರರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಒಂದು ನಿಮಿಷದ ಮೌನಾಚರಣೆ ನಡೆಸಲಾಯಿತು.

ಸಿದ್ದಾಪುರ: ತಾಲೂಕಿನ ಕೋಡ್ಸರ(ಮುಠ್ಠಳ್ಳಿ)ಯ ಸಿದ್ಧಿವಿನಾಯಕ ರೈತಯುವಕ ಸಂಘ ಅನಂತಚತುರ್ದಶೀ ಪ್ರಯುಕ್ತ ಕೋಡ್ಸರ ಮುಠ್ಠಳ್ಳಿ ಶಾಲಾ ಆವಾರದಲ್ಲಿ ಸೆ.೨೮ರಂದು ಮಧ್ಯಾಹ್ನ ೩.೩೦ರಿಂದ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ಆಯೋಜಿಸಿದೆ.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಶಂಕರ ಭಾಗವತ ಯಲ್ಲಾಪುರ, ಗಜಾನನ ಕತಗಾಲ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ, ವಾಸುದೇವ ರಂಗಾ ಭಟ್ಟ ಮಧೂರು, ಗೊರಮನೆ ಮಂಜುನಾಥ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *