

ಭಕ್ತಿ ಭಾವವನ್ನು ಪ್ರಚುರ ಪಡಿಸುವ ಕಲೆಯಾಗಿ ಯಕ್ಷಗಾನ ತಾಳಮದ್ದಳೆಯು ನಮ್ಮ ನಡುವೆ ಬೆಳೆದು ಬಂದ ಒಂದು ಜೀವಂತ ಕಲೆ. ಮಾತಿನ ಮೂಲಕವಾಗಿಯೇ ನಾಟಕವನ್ನು ಕಟ್ಟುವ ಶಕ್ತಿ ಇದ್ದಕ್ಕಿದೆ. ಸಮಾಜದ ಕೆಡುಕುಗಳನ್ನು ತಿದ್ದುವಲ್ಲಿ ಇದರ ಪಾತ್ರ ಬಹು ದೊಡ್ಡದು. ಎಂದು ಐಸೂರು ವೀರಭದ್ರ ಸಹಿತ ಗೌರಿ ಶಂಕರ ದೇವಾಲಯದ ಮೊಕ್ತೇಸರರಾದ ರಾಮನಾಥ ಹೆಗಡೆ ತಲೆಕೇರಿ ಹೇಳಿದರು. ಶರನ್ನವರಾತ್ರಿಯ ಸಂದರ್ಭದಲ್ಲಿ ಇಟಗಿಯ ಕಲಾಭಾಸ್ಕರದವರು ಹಮ್ನಿಕೊಂಡ ತಾಳಮದ್ದಳೆ ಪಂಚಕ-2023ರ ಅಂಗವಾಗಿ ಎರಡನೇ ದಿನದ ಸಭಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಲೆಯನ್ನು ನಮ್ಮ ಬದುಕಿನ ಅಂಗವಾಗಿ ಸ್ವೀಕರಿಸಿ ಮುನ್ನಡೆಯೋಣ ಎಂದೂ ಅಭಿಪ್ರಾಯ ಒಟ್ಟರು. ವಾಜಗೋಡು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್.ಆಯ್.ನಾಯ್ಕ ಕೆಳಗಿನಸಸಿ, ಈರ ನರಸ ಗೌಡ ಕೆಸವಿನಮನೆ, ಗಜಾನನ ಭಟ್ಟ ದಾನಮಾವು ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಭಟ್ಟ ಸ್ವಾಗತಿಸಿದರು. ನಂತರ ಕವಿ ಪಾರ್ತಿಸುಬ್ಬ ವಿರಚಿತ “ವಾಲಿಮೋಕ್ಷ” ಎಂಬ ತಾಳಮದ್ದಳೆ ಪ್ರದರ್ಶನವು ನಡೆಯಿತು. ಸೃಜನ ಗಣೇಶ ಹೆಗಡೆ (ಭಾಗವತಿಕೆ), ಮಂಜುನಾಥ ಹೆಗಡೆ ಕಂಚಿಮನೆ (ಮದ್ದಳೆ), ನಾಗಭೂಷಣ ರಾವ್ ಹೆಗ್ಗೋಡು (ಚಂಡೆ) ಹಿಮ್ಮೇದಳಲ್ಲಿ ರಂಜಿಸಿದರು. ವಾಲಿಯಾಗಿ ರಾಧಾಕೃಷ್ಣ ಕಲ್ಚಾರ್, ಸುಗ್ರೀವನಾಗಿ ಸರ್ಪಂಗಳ ಈಶ್ವರ ಭಟ್ಟ, ಶ್ರೀರಾಮನಾಗಿ ಪವನ್ ಕಿರಣ್ಕೆರೆ, ತಾರೆಯಾಗಿ ಇಟಗಿ ಮಹಾಬಲೇಶ್ವರ ಭಟ್ ಪ್ರಸಂಗವನ್ನು ಕಳೆಗಟ್ಟಿದರು.
