

ಕುಗ್ರಾಮಗಳ ಒಕ್ಕೂಟದ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾದ ಎಲ್ಲಾ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ೨೫ ಕೋಟಿ ದುಡಿಯುವ ಬಂಡವಾಳದೊಂದಿಗೆ ೫೦ ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಈ ಸಹಕಾರಿಯ ಸುವ್ಯವಸ್ಥಿತ ಕಟ್ಟಡ ಶುಕ್ರವಾರ ಲೋಕಾರ್ಪಣೆಯಾಗಲಿದೆ.
೨೦೧೫ ರಲ್ಲಿ ಈ ಕಟ್ಟಡ ಭಾಗಶ: ಉದ್ಘಾಟನೆಯಾಗಿತ್ತಾದರೂ ಸುಸಜ್ಜಿತ ಸಭಾ ಭವನ,ಮಹಾಧ್ವಾರ ಸೇರಿದ ಸಂಪೂರ್ಣ ವ್ಯವಸ್ಥಿತ ನಿರ್ಮಾಣ ಈಗ ಪುರ್ಣಗೊಂಡಿದೆ. ಇಂಥ ಗ್ರಾಮೀಣ ಪ್ರದೇಶದಲ್ಲಿ ಒಂದು ಕೋಟಿಗೂ ಹೆಚ್ಚು ವೆಚ್ಚದ ಕಟ್ಟಡ ಕಾಮಗಾರಿ ನಿರ್ವಹಿಸಿರುವ ಸಂಘ ತನ್ನ ಸದಸ್ಯರಿಗೆ ಅನುಕೂಲವಾಗುವ ಎಲ್ಲಾ ಸೇವೆಗಳನ್ನು ನೀಡಲು ಅವಶ್ಯ ಸಂರಚನೆಯನ್ನು ಮಾಡಿ ಗಮನ ಸೆಳೆದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಈ ವಿ.ಎಸ್.ಎಸ್. ನಿ. ಕ್ಯಾದಗಿಯ ನಿರ್ಧೇಶಕ ಮಂಡಳಿ ಅಭಿಮಾನದಿಂದ ತಮ್ಮ ಸಂಘದ ಪ್ರಗತಿಯಸೂಚ್ಯಾಂಕವನ್ನು ವಿವರಿಸಿತು.
ಶುಕ್ರವಾರ ನಡೆಯಲಿರುವ ಸಮಾರಂಭದಲ್ಲಿ ಸಚಿವರು, ಶಾಸಕರೆಲ್ಲಾ ಪಾಲ್ಗೊಳ್ಳಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಂಘದ ಕಟ್ಟಡದ ಮಹಾಧ್ವಾರ ಉದ್ಘಾಟಿಸುವರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ನೂತನ ಸೂಪರ್ ಮಾರ್ಕೆಟ್ ಗೆ ಚಾಲನೆ ನೀಡಲಿದ್ದಾರೆ. ಸುಸಜ್ಜಿತ ಸಭಾಂಗಣವನ್ನು ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ.
ಮೊದಲ ದಾಸ್ತಾನು ಕೊಠಡಿಯನ್ನು ಶಾಸಕ ಶಿವರಾಮ ಹೆಬ್ಬಾರ್, ಎರಡನೇ ದಾಸ್ತಾನು ಕೊಠಡಿಯನ್ನು ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದ ವಿ.ಎಸ್.ಎಸ್.ಅಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಆಮಂತ್ರಿಸಿದರು.
ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವವರಿಗೆಲ್ಲಾ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲದ ವೇಳೆಗೆ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘದ ನಿರ್ಧೆಶಕ ಮಂಡಳಿ ತಿಳಿಸಿದೆ.
