


ಸಿದ್ದಾಪುರ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದ ಅತ್ಯುತ್ತಮ ಹಾಜರಾತಿಯ ಪ್ರಶಸ್ತಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭಾಜನರಾಗಿದ್ದು, ಸಭಾಧ್ಯಕ್ಷರಾದ ಯು.ಟಿ.ಖಾದರ್ ಗಿಫ್ಟ್ & ಸಾಸರ್ ಕಪ್ ನ್ನು ನೀಡಿ ಗೌರವಿಸಿದರು.
ಶಾಸಕ ಭೀಮಣ್ಣ ನಾಯ್ಕ ಈ ಹಿಂದೆ ಬೆಂಗಳೂರಿನಲ್ಲೂ ನಡೆದ ಅಧಿವೇಶನದಲ್ಲೂ ಸಹ ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶಂಸಿದ್ದನ್ನು ನೆನಪಿಸಬಹುದಾಗಿದೆ.
