ಟ್ರಾಮಾ ಸೆಂಟರ್ ಅನಂತ್ಮೂರ್ತಿ ಹೆಗಡೆ ಹೊಸ ಬೇಡಿಕೆ

ಜ.15 ರೊಳಗೆ ಸಚಿವ ಮಂಕಾಳ ವೈದ್ಯ ಜಿಲ್ಲೆಗೆ ಟ್ರಾಮಾ ಸೆಂಟರ್ ಘೋಷಿಸಲಿ; ಅನಂತಮೂರ್ತಿ ಹೆಗಡೆ ಸವಾಲು

ಜನರ ಜೀವ ಮುಖ್ಯವೆ, ರೂ.840 ಕೋಟಿಯಲ್ಲಿ ಸಮುದ್ರ ಗುಡಿಸುವುದು ಮುಖ್ಯವೆ?

ಶಿರಸಿ: ಜಿಲ್ಲಾ ಉಸ್ತುವಾರಿ ಹಾಗು ಮೀನುಗಾರಿಕಾ ಸಚಿವರಾಗಿರುವ ಮಂಕಾಳು ವೈದ್ಯ ಸಮುದ್ರದ ಕಸ ಗುಡಿಸಲು 3 ತಿಂಗಳಲ್ಲಿ ರೂ.840 ಕೋಟಿ ಹಣವನ್ನು ವಿನಿಯೋಗಿಸಲು ಹೊರಟಿದ್ದಾರೆ. ಆದರೆ ಪ್ರತಿನಿತ್ಯ ಅಪಘಾತದಿಂದ ಸಾಯುವ ಜಿಲ್ಲೆಯ ಜನರಿಗೆ ಸುಸಜ್ಜಿತ ಆಸ್ಪತ್ರೆ ಘೋಷಿಸಲು ಇವರ ಬಳಿ ಸಮಯ, ಹಣವಿಲ್ಲವಿರುವುದು ಜಿಲ್ಲೆಯ ದುರ್ದೈವದ ಸಂಗತಿಯಲ್ಲದೇ ಮತ್ತಿನ್ನೇನು ಎಂದು ಬಿಜೆಪಿ ಸದಸ್ಯ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಗರದ ಕಸ ತೆಗೆಯಲು ರೂ.840 ಕೋಟಿ ಹಣವನ್ನು ಅನುದಾನ ಇಟ್ಟಿದ್ದೀರಿ ಎಂಬುದನ್ನು ಮಾಧ್ಯಮದ ಮೂಲಕ ತಿಳಿದಿದ್ದೇನೆ. ಅದೂ ಸಹ ಮೂರು ತಿಂಗಳೊಳಗೆ ಎಂಬುದಾಗಿ ಗಡುವನ್ನು ಸಹ ಘೋಷಿಸಿದ್ದೀರಿ. ಆದರೆ ಸುಸಜ್ಜಿತ ಆಸ್ಪತ್ರೆ ವಿಷಯದಲ್ಲಿ ಯಾಕೋ ಮೌನ ತಾಳಿರುವುದು ನಿಮ್ಮಂತ ಹಿರಿಯ ನಾಯಕರಿಗೆ ಔಚಿತ್ಯವಲ್ಲ. ರೂ. 840 ಕೋಟಿಗಳಷ್ಟರಲ್ಲಿ ದಾಂಡೇಲಿ, ಶಿರಸಿ, ಕುಮಟಾ ಹೀಗೆ ಮೂರು ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಬಹುದಲ್ಲವೇ ? ಜಿಲ್ಲೆಯ
ಜನರ ಪ್ರಾಣಕ್ಕಿಂತ ತಮಗೆ ಸಮುದ್ರದ ಕಸ ಗುಡಿಸುವ ಕೆಲಸ ಹೆಚ್ಚಾಯಿತೇ? ಎಂದು ಕೇಳಿದ್ದಾರೆ.

ಆಸ್ಪತ್ರೆ ಯಾವಾಗ ಎಂದರೆ ಮಾತ್ರ ಮಾತಿಲ್ಲ:

ಸಾಗರದ ಜೀವ ಸಂಕುಲದ ಬಗ್ಗೆ ನನಗೂ ಕಳಕಳಿಯಿದೆ. ಜೊತೆಗೆ ಮೀನುಗಾರರ ಸಮಸ್ಯೆಯನ್ನೂ ತಿಳಿದಿದ್ದೇನೆ. ಸಮುದ್ರದಲ್ಲಿ ಕಸ ಗುಡಿಸಿ 840 ಕೋಟಿ ಖರ್ಚು ಮಾಡಲು ತಮಗೆ ಬಹಳ ಆಸಕ್ತಿಯಿದೆ, ಆದರೆ ಸಾವಿರಾರು ಜನರ ಜೀವ ಉಳಿಸುವ ಅಸ್ಪತ್ರೆ ಯಾವಾಗ ಮಾಡುತ್ತೀರಿ ಎಂಬುದರ ಬಗ್ಗೆ ಮಾತೇ ಇಲ್ಲ. ಇದರ ಮರ್ಮ ಏನು? 840 ಕೋಟಿ ರೂಪಾಯಿ ಕಸ ಗುಡಿಸುವ ಕೆಲಸ ಅಷ್ಟೊಂದು ಲಾಭದಾಯಕವೇ ? ಚುನಾವಣೆಯಲ್ಲಿ ಗೆದ್ದರೆ ಸ್ವಂತ ಖರ್ಚಿನಿಂದ ಅಸ್ಪತ್ರೆ ಮಾಡುತ್ತೇನೆ ಎಂದ ನಿಮ್ಮ ಒಳ್ಳೆಯತನ ಉಸ್ತುವಾರಿ ಸಚಿವರಾದ ಮೇಲೆ ಎಲ್ಲಿ ಹೋಯಿತು ? ತಮ್ಮಲ್ಲಿ ಅಧಿಕಾರ ಇದೆಯೆಂದು ಬೀಗಬೇಡಿ, ಅಧಿಕಾರ ಯಾರಿಗೂ ಶಾಶ್ವತವಲ್ಲಾ ನೆನಪಿಡಿ ಎಂದು ಅವರು ಮಾರ್ಮಿಕವಾಗಿ ಸಚಿವ ವೈದ್ಯರಿಗೆ ಮಾತಿನ ಛಾಟಿ ಬೀಸಿದ್ದಾರೆ.

ಸುಸಜ್ಜಿತ ಆಸ್ಪತ್ರೆಯಿಲ್ಲದಿರುವುದು ನಾಚಿಗೇಡಿನ ಸಂಗತಿ:

ಮಂಗಳೂರು ಭಾಗದಲ್ಲಿ ಎಂಟು ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಕೂಡ ಇಲ್ಲ. ಈ ವಿಷಯ ನಮಗೆ ನಾಚಿಕೆ ಆಗಬೇಕಲ್ಲವೆ ? ನಮಗೂ ನೆಮ್ಮದಿಯಿಂದ ಬದುಕುವ ಹಕ್ಕಿಲ್ಲವೇ ? ನಾವೇನು ಪಾಪ ಮಾಡಿದ್ದೇವೆ ? ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದಕ್ಕೆ ಯಾರು ಹೊಣೆ ? ಎಂದರು. ಕಾರವಾರದಲ್ಲಿ ಆಸ್ಪತ್ರೆಯಾದರೆ ಸಂತಸವೇ. ಆದರೆ ಕಾರವಾರದಲ್ಲಿ ಅಸ್ಪತ್ರೆಯಾದರೆ ಹೊನ್ನಾವರ, ಕುಮಟ- ಶಿರಸಿ ಭಾಗಕ್ಕೆ ಪ್ರಯೋಜನವಿಲ್ಲ. ಕಾರವಾರಕ್ಕೆ ಮಾತ್ರ ಸೀಮಿತವಾಗುತ್ತದೆ. ಹೊನ್ನಾವರ, ಶಿರಸಿ – ಕುಮಟಾ ಭಾಗಕ್ಕೆ ಒಂದು ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡಿ ಎಂದು ಅವರು ಕೇಳಿದ್ದಾರೆ.

ಜ.15 ರೊಳಗೆ ಟ್ರಾಮಾ ಸೆಂಟರ್ ಘೋಷಿಸಲಿ: ಇಲ್ಲವಾದಲ್ಲಿ ಜನರೊಡಗೂಡಿ ಉಗ್ರ ಹೋರಾಟದ ಎಚ್ಚರಿಕೆ

ಉತ್ತರ ಕನ್ನಡದಲ್ಲಿ ಟ್ರಾಮಾ ಸೆಂಟರ್ ಸಹ ಇಲ್ಲದಿರುವುದಕ್ಕೆ ಸದನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸಹ ಆಶ್ಚರ್ಯ ಪಟ್ಟಿದ್ದಾರೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ, ದಯವಿಟ್ಟು ಒಂದು ಕಟ್ಟಡವನ್ನು ಬಾಡಿಗೆಗೆ ಪಡೆದರೂ ಪರವಾಗಿಲ್ಲ, ಒಂದು ಟ್ರಾಮಾ ಸೆಂಟರ್ ತಕ್ಷಣ ಪ್ರಾರಂಭ ಮಾಡಿ, ಜ.15, 2024ರ ಒಳಗೆ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಮೆಡಿಕಲ್ ಕಾಲೇಜು – ಅಸ್ಪತ್ರೆಗೆ ಸಮಿತಿ ರಚನೆ ಮಾಡಿ, ಖಾಸಗಿ ಸಹಯೋಗ ಬೇಕೆಂದರೆ ಮೆಡಿಕಲ್ ಕಾಲೇಜು ನಡೆಸುವ ಖಾಸಗಿ ಸಂಸ್ಥೆಯವರಿಗೆ ಪತ್ರವನ್ನಾದರೂ ಬರೆಯಿರಿ. ದಯವಿಟ್ಟು ಅಸ್ಪತ್ರೆ ಕೊಡಿಸಿ ಜನರ ಜೀವ ಉಳಿಸಿ. ಇಲ್ಲದಿದ್ದರೆ ನಾವು ಜಿಲ್ಲೆಯ ಜನರನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

ಸಚಿವ ಮಂಕಾಳರ ಬಗ್ಗೆ ಬಗ್ಗೆ ನನಗೆ ಅಪಾರ ಗೌರವ ಇದೆ. ತಮಗೆ ಬಡವರ ಕುರಿತಾಗಿ ಮಾನವೀಯ ಅಂತಃಕರಣ ಇದೆ ಎಂಬುದು ನನಗೆ ತಿಳಿದಿದೆ. ಆದರೆ ರಾಜಕೀಯ ಒತ್ತಡಕ್ಕೆ ಸಿಲುಕಿ ತಾವು ಬದಲಾಗಬೇಡಿ ಎಂದು ನಿಮ್ಮ ಅಭಿಮಾನಿಯಾಗಿ ಕೇಳಿ ಬೇಡಿಕೊಳ್ಳುತ್ತಿದ್ದೇನೆ. ಆಸ್ಪತ್ರೆ ಘೋಷಣೆ ಮಾಡಿ, ನಂತರದಲ್ಲಿ ನೀವು ಯಾವ ಸಮುದ್ರದ ಕಸವನ್ನಾದರೂ ತೆಗಿಯಿರಿ. ಸಾಗರದ ಕಸ ತೆಗೆಯುವುದು ಒಳ್ಳೆಯ ಕಾರ್ಯವೇ. ಅದಕ್ಕೂ ಮುನ್ನ ಜನರ ಪ್ರಾಣ ಕಾಪಾಡುವುದು ಜನಪ್ರತಿನಿಧಿಯ ಆದ್ಯತೆಯಾಗಬೇಕು. ಜಿಲ್ಲೆಯ ಮೀನುಗಾರರಿಗೆ , ಬಡವರಿಗೆ, ಕೂಲಿಕಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ನಿಮ್ಮ ಮೊದಲ ಆಯ್ಕೆಯಾಗಿರಲಿ. ಅದು ನೀವು ನಿಮ್ಮ ಜಿಲ್ಲೆಗೆ ನೀಡುವ ಸೇವೆಯಾಗಿದೆ ಎಂದರು.

ಮಾನ್ಯ ಮೀನುಗಾರಿಕಾ ಸಚಿವರೇ, ಏನು ಸ್ವಾಮಿ ಇದು ? ನಮ್ಮ ತೆರಿಗೆ ಹಣ ಈ ರೀತಿ ವ್ಯಯ ಆಗುತ್ತಿದೆಯೇ? ಸಮುದ್ರ ದಂಡೆಯ ಕಸ ಗುಡಿಸಲು 840 ಕೋಟಿ ರೂಪಾಯಿ ? ಇದನ್ನ ಗಮನಿಸಿದರೆ ಯಾವುದೋ ಬಹುದೊಡ್ಡ ”ಡೀಲ್’ ವಾಸನೆ ಬರುತ್ತಿದೆ. ಈ ವರದಿ ಸತ್ಯವೇ ಆಗಿದ್ದರೆ ಇದರ ಬಗ್ಗೆ ಮುಂದಿನ ದಿನ ಪರಿಶೀಲಿಸಬೇಕು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ಹಾಗೆ ನಾವು ಇಂದು ಅಸ್ಪತ್ರೆ ಮಾಡಿ ಎಂದರೆ ನಿಮ್ಮಲ್ಲಿ,ನಿಮ್ಮ ಸರಕಾರದಲ್ಲಿ ಹಣವಿಲ್ಲ, ಆದರೆ ಈ ರೀತಿಯ ಯೋಜನೆಗೆ ಹಣವಿದೆ ಅಂದರೆ ಏನು ಅರ್ಥ ? ಜಿಲ್ಲೆಯ ಜನ ದಡ್ಡರಲ್ಲ. ಎಲ್ಲವನ್ನೂ ನೋಡುತ್ತಿದ್ದಾರೆ. ಸಮಯ ಬಂದಾಗ ತಕ್ಕ ಉತ್ತರ ನೀಡುತ್ತಾರೆ.

  • ಅನಂತಮೂರ್ತಿ ಹೆಗಡೆ
    ಸಾಮಾಜಿಕ ಹೋರಾಟಗಾರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *