


ಸಿದ್ದಾಪುರ ತಾಲೂಕಿನ ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ೧ಲಕ್ಷದ ೫೦ಸಾವಿರ ರೂಗಳ ಚೆಕ್‌ನ್ನು ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎ.ಬಾಬು ನಾಯ್ಕ ಅವರು ಸಂಘದ ಅಧ್ಯಕ್ಷ ನಾಗಪತಿ ಡಿ.ನಾಯ್ಕ ಅವರಿಗೆ ವಿತರಿಸಿದರು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ, ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ, ಮೇಲ್ವಿಚಾರಕಿ ಪೂರ್ಣಿಮಾ, ಸೇವಾ ನಿರತೆ ಭಾರತಿ ನಾಯ್ಕ, ವಿಸ್ತರಣಾಧಿಕಾರಿ ಚಂದನ ನಾಯ್ಕ, ಕಾರ್ಯದರ್ಶಿ ಗಂಗಾಧರ ರಾಮ ನಾಯ್ಕ, ಗ್ರಾಪಂ ಸದಸ್ಯ ಗೋವಿಂದ ನಾಯ್ಕ, ವಿಷ್ಣು ನಾಯ್ಕ ಹಾಗೂ ಸಂಘದ ಸದಸ್ಯರುಗಳಿದ್ದರು.
