

ಪಂಡಿತ್ ಮೋಹನ ಹೆಗಡೆ ಹುಣಸೇಕೊಪ್ಪ ಈ ಕಾಲದ ಗುರುಪರಂಪರೆಯ ಕೊಂಡಿ. ಸಂಗೀತ ಸಾಧನೆ, ಬೋಧನೆ ಮತ್ತು ವೈದ್ಯಕೀಯಗಳನ್ನು ವೃತ್ತಿ- ಪ್ರವೃತ್ತಿಯಾಗಿಸಿಕೊಂಡ ಇವರು ಅನೇಕರಿಗೆ ಜ್ಞಾನ ದಾನ ಮಾಡುವ ಸಮಾಜಮುಖಿಯಾದವರು. ೮೦ ರ ಇಳಿಕಾಲದಲ್ಲೂ ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಮೋಹನ ಹೆಗಡೆಯವರಿಗೆ ಸನ್ಮಾನ ಮಾಡಿ ಹಮ್ಮಿಣಿ ನೀಡುವ ಅರ್ಥಪೂರ್ಣ ಕಾರ್ಯಕ್ರಮ ಇಂದು ಸಿದ್ಧಾಪುರ ಶಂಕರಮಠದಲ್ಲಿ ನಡೆಯಿತು. ಗುರುವಿಗೆ ಸಂಗೀತ ಕಾಣಿಕೆ ನೀಡಿದ ಅವರ ಶಿಷ್ಯ ಸಮೂಹ ಗುರುವಿಗೆ ಗೌರವಿಸುವ ಮೂಲಕ ಸಂಗೀತ ಪರಂಪರೆಯನ್ನು ಗೌರವಿಸಿ ತಾವೂ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ಮನಮೋಹನ ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆದವು.
