

ಹಿಂದುತ್ವವೆಂದರೆ ಬರೀ ಹವ್ಯಕರಲ್ಲ, ಹಿಂದುತ್ವದ ಹೆಸರಿನಲ್ಲಿ ಬಿ.ಜೆ.ಪಿ.ಯಿಂದ ಹವ್ಯಕರು ಬೆಳೆದರೆ ಹೊರತು, ಹವ್ಯಕರಿಂದ ಬಿ.ಜೆ.ಪಿ. ಬೆಳೆದಿಲ್ಲ ಎಂದು ಪರೋಕ್ಷವಾಗಿ ಹೇಳಿದೆ.
ಸಂಸದ ಅನಂತಕುಮಾರ ಹೆಗಡೆ ವಿರುದ್ಧ ತಿರುಗಿ ಬಿದ್ದಿರುವ ಬಿ.ಜೆ.ಪಿ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಹೊಸ ಹೊಸ ಹೆಸರುಗಳನ್ನುತೇಲಿಬಿಡುತ್ತಿದೆ. ಮೊದಮೊದಲು ಮಾಜಿ ಸಚಿವ ಅನಂತಕುಮಾರ ವಿರುದ್ಧ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ತೇಲಿ ಬಿಟ್ಟ ಬಿ.ಜೆ.ಪಿ. ಹವ್ಯಕರ ನಡುವೆ ಮೇಲಾಟಕ್ಕೆ ಅವಕಾಶ ಮಾಡಿಕೊಂಡಿತು.
ಅನಂತ, ಕಾಗೇರಿ ನಡುವೆ ನಡೆಯುತಿದ್ದ ಅಂತರ್ ಯುದ್ಧ ಬಣಗಳಾಗಿ ವಿಂಗಡಣೆಯಾಗುತ್ತಲೇ ತಾನು ಉತ್ತರ ಕನ್ನಡ ಮೂಲದವನು ಎಂದು ತನ್ನ ಐಡೆಂಟಿಟಿ ಹೇಳಿಕೊಳ್ಳುತ್ತಿರುವ ಮಿಥುನ್ ಶೇಟ್ ಚಕ್ರವರ್ತಿ ಅಲಿಯಾಸ್ ಸೂಲಿಬೆಲೆ ಚಕ್ರವರ್ತಿ ತಾನು ಓಬಿಸಿ ಕೋಟಾಕ್ಕೂ ಸಲ್ಲುತ್ತೇನೆ ಎಂದು ಪ್ರವೇಶ ಪಡೆದಿದ್ದಾರೆ.!
ಈ ಬೆಳವಣಿಗೆಯ ಹಿಂದೆ ಬಿ.ಜೆ.ಪಿ.ಯ ಕೇಂದ್ರ ನಾಯಕತ್ವ ಸಚಿವ ಜೈಶಂಕರ್ ಉತ್ತರ ಕನ್ನಡ ಬಿ.ಜೆ.ಪಿ. ಲೋಕಸಭೆಯ ಅಭ್ಯರ್ಥಿಯಾಗಲಿದ್ದಾರೆ ಎಂದು ಹೆಸರು ತೇಲಿಬಿಟ್ಟಿದೆ.
ಹೀಗೆ ವಾರಕ್ಕೊಂದು ಹೆಸರು ತೇಲಿಬಿಡುತ್ತಿರುವ ಬಿ.ಜೆ.ಪಿ. ಹಿಂದುತ್ವವೆಂದರೆ ಬರೀ ಹವ್ಯಕರಲ್ಲ, ಹಿಂದುತ್ವದ ಹೆಸರಿನಲ್ಲಿ ಬಿ.ಜೆ.ಪಿ.ಯಿಂದ ಹವ್ಯಕರು ಬೆಳೆದರೆ ಹೊರತು, ಹವ್ಯಕರಿಂದ ಬಿ.ಜೆ.ಪಿ. ಬೆಳೆದಿಲ್ಲ ಎಂದು ಪರೋಕ್ಷವಾಗಿ ಹೇಳಿದೆ.
ಈ ಧಾರ್ಮಿಕ ನಾಟಕದ ಬಿ.ಜೆ.ಪಿ. ರಾಷ್ಟ್ರೀಯವಾದಿ ರಾಜಕಾರಣ ಅರಿತಿರುವ ಕಾಂಗ್ರೆಸ್ ಕಾಂಗ್ರೆಸ್ ನಿಂದ ಹವ್ಯಕರಿಗೆ ಟಿಕೇಟ್ ನೀಡಿದರೆ ಹೇಗೆ ಎಂದು ಯೋಚಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಪಕ್ಷದಿಂದಲಾದರೂ ಚುನಾವಣೆಗೆ ನಿಲ್ಲಲು ಸಿದ್ಧರಿರುವ ಶಿವರಾಮ ಹೆಬ್ಬಾರ್ ಕುಟುಂಬ ಈಗ ಕಾಂಗ್ರೆಸ್ ಟಾರ್ಗೆಟ್ ಎನ್ನಲಾಗುತ್ತಿದೆ.
