ಕಾರ್‌ ಗ್ಲಾಸ್‌ ಇಳಸಲ್ಲ ಯಾಕಂದ್ರೆ………‌ ನಾನೊಬ್ಬ ಸಮಾಜಸೇವಾ ನಿರತನಾಗಲೇಬೇಕೆಂಬ ದರ್ದು ಸದ್ಯಕ್ಕಿಲ್ಲ!

ಅಂವ ಕಾರ್‌ ಗ್ಲಾಸ್‌ ಇಳಸಲ್ಲ, ಅವರಿಗೆ ಜನ ಅಂದ್ರೆ ಅಲರ್ಜಿ, ಅವರ ಮನುಷ್ಯನ ಮುಖ ನೋಡಲ್ಲ, ಮನುಷ್ಯ ಒಳ್ಳೆಯವ ಆದ್ರೆ ಜನರ ಮುಖ ನೋಡಲ್ಲ….. ಅಂವ ಬುದ್ದಿವಂತ ಇರ್ಬೌದು ಬಟ್‌ ಜನರನ್ನ ಸೇರಲ್ಲ, ಹೀಗೆ ಪ್ರದೇಶವಾರು ಥರಾವರಿ ಆರೋಪಗಳಿಗೆ ತುತ್ತಾಗುವವರು ಸಾರ್ವಜನಿಕ ವ್ಯಕ್ತಿಗಳು, ಅವರೆಂದರೆ ವಿಶೇಶವಾಗಿ ರಾಜಕಾರಣಿಗಳು!

ನಮ್ಮೂರಲ್ಲಿ ಕೆಲವರ ಬಗ್ಗೆ ಜನಸಾಮಾನ್ಯರು ಆಡುವ ಮಾತುಗಳನ್ನು ಕೇಳಿಸಿಕೊಂಡ ಮೇಲೆ ನನಗೂ ಇಂಥ ಅನುಭವಗಳಾಗಿವೆ. ನಾವು ಜನಸಾಮಾನ್ಯರಾಗಿ ಮಾತನಾಡಿ, ಕಾರು ಏರಿ ಟೀಕೆ ಕೇಳಿ ಉಗುಳು ನುಂಗಿಕೊಂಡಿದ್ದಿದೆ. ಈ ವಿಚಾರದ ಬಗ್ಗೆ ಪ್ರತಿಯೊಬ್ಬರ ಅನುಭವ, ಅಭಿಪ್ರಾಯ ಬೇರೆಬೇರೆಯೆ ನನಗಂತೂ ಈ ಬಗ್ಗೆ ಯೋಚಿಸದಾಗಲೆಲ್ಲಾ ನೆನಪುಗಳು ನುಗ್ಗಿ ಬರುವುದಿದೆ.

ಒಂದಿಪ್ಪತೈದು ಮೂವತ್ತು ವರ್ಷಗಳ ಹಿಂದೆ ನಮ್ಮಲ್ಲಿ ಬೈಕ್‌ ಹಾಗಿರಲಿ ಸೈಕಲ್‌ ಕೂಡಾ ಇರದ ಕಾಲ.

ಸ್ನೇಹಿತ ವಿಜಯ ಆಗಲೇ ಸೈಕಲ್‌ ಇಟ್ಟುಕೊಂಡು ಊರಿಗೆ ಹೋದಾಗ ಅವರ ಜೀಪಿನಲ್ಲಿ ಓಡಾಡುತಿದ್ದ ಮಧುರಕಾಲ.

ವಿಜಯನ ಬಿ.ಎಸ್.ಎ. ಸೈಕಲ್‌ ಬಗ್ಗೆ ನನಗೊಂದು ವಿಚಿತ್ರ ಮೋಹವಿತ್ತು. ಸಣ್ಣನೆಯ ಕೆಂಪನೆಯ ಬಿ.ಎಸ್.ಎ. ಎಸ್.ಎಲ್.ಆರ್.‌ ಸೈಕಲ್‌ ಏರಿ ಏರಿಮೇಲಿಂದ್‌ ಸುಯ್ಯನೆ ಶ್ರಮವಿಲ್ಲದೆ ಇಳಿಯುವುದೆಂದರೆ… ಯಮಹಾ ಆರೆಕ್ಸ್‌ ೧೦೦ ಕೊಟ್ಟ ಖುಷಿ ಕೊಡುತಿದ್ದ ಕಾಲ! ಅದು.

ಮಿತಭಾಶಿ ವಿಜಯನಿಗೆ ಕೇಳಿದಾಗಲೆಲ್ಲಾ ಸೈಕಲ್‌ ಕೊಡಲು ಬೇಸರ. ಕೆಲವು ಸಾರಿ ಅನುಮತಿ ಪಡೆದು ಕೆಲವೊಮ್ಮೆ ಅನುಮತಿ ಇಲ್ಲದೆ ಅವನ ಸೈಕಲ್‌ ಹತ್ತಿದ ನಮ್ಮ ಸವಾರಿ ಹೊರಟರೆ ಕಾರವಾರದ ಎಲ್ಲಾ ರಸ್ತೆಗಳೂ ಬಂದು ಸೇರುವ ಟಾಗೂರ್‌ ಕಡಲ ತೀರದ ವರೆಗೂ ನಮ್ಮ ಸಾವಾರಿ ಸಾಗಿರುತಿತ್ತು. ಸೈಕಲ್‌ ಇಟ್ಟುಕೊಂಡ ಕೆಲವೇ ತ್ರಾಣಸ್ಥರಲ್ಲಿ ನಮ್ಮ ವಿಜಯ್‌ ಒಬ್ಬನಾಗಿದ್ದರಿಂದ ಅವನಿಗೂ ಅವನ ಸೈಕಲ್‌ ಗೂ ಸ್ಟಾರ್‌ ವ್ಯಾಲ್ಯು ಬಂದಿತ್ತು. ಇಂಥ ವಿಜಯ ಸೈಕಲ್‌ ಬಗ್ಗೆ ಇಟ್ಟುಕೊಂಡ ಕಾಳಜಿಯನ್ನೇ ಈಗಲೂ ವಾಹನಗಳ ಮೇಲೆ ಇರಿಸಿಕೊಂಡಿರುವ ಪಾಪದ ಮನುಷ್ಯ.

ಭಾಶಿ ದಯಾ ಎನ್ನುವ ನಮ್ಮ ಹಿರಿಯ ಮಿತ್ರನೊಬ್ಬನ ಸಹವಾಸ ಸಾಂಗತ್ಯದಿಂದ ಸ್ನೇಹಿತನಾಗಿದ್ದ ವಿಜಯ ಜೊತೆಗೆ ನಮ್ಮ ಸ್ನೇಹ ಮರೆಯದ ಅನುಬಂಧ!

ಕಡಿಮೆ ಮಾತನಾಡುವ ಕೆಲವೊಮ್ಮೆ ನಿಷ್ಠೂರವಾಗೇ ಮಾತನಾಡುವ ವಿಜಯ್‌ ನನ್ನೊಂದಿಗೆ ಕರ್ನಾಟಕ ಗೋವಾ ಓಡಾಡಿ ಸುಸ್ತಾಗದ ನಿರುಪದ್ರವಿ ಮನುಷ್ಯ. ಅಗತ್ಯವಿರುವುದಕ್ಕಿಂತ ಸ್ಫಲ್ಪ ಜುಗ್ಗನಂತಾಡುವ ಇವನ ಗುಣಸ್ವಭಾವ ಅವನ ನಡವಳಿಕೆಯಂತಲ್ಲ!

ಇಂಥನಿಡುಗಾಲದ ಸ್ನೇಹಿತನ ಮನೆಯಲ್ಲೊಂದು ಹಳೆಯ ಕಮಾಂಡರ್‌ ಜೀಪಿತ್ತು. ಆಜೀಪಿನಲ್ಲಿ ಓಡಾಡುವುದೆಂದರೆ ನಮಗೆ ಜಗತ್ತಿನ ಅತೀ ದುಬಾರಿ ಕಾರಿನಲ್ಲಿ ಓಡಾಡಿದಷ್ಟೇ ಖುಷಿ, ಸಂಬ್ರಮ,ಹೆಮ್ಮೆ.

ಚಾಲಕನಾಗಿರುತಿದ್ದ ವಿಜಯ್‌ ಪಕ್ಕದ ಸೀಟಿನಲ್ಲಿ ನನ್ನನ್ನು ಕೂರಿಸಿಕೊಂಡು ಎಲ್ಲೆಲ್ಲೋ ಓಡಾಡಿಸುತಿದ್ದ. ಹೀಗೆಲ್ಲಾ ಮಜಾ, ಪ್ರವಾಸ, ಕೆಲಸ ಎಂದೆಲ್ಲಾ ಹಳೆ ಜೀಪಿನಲ್ಲಿ ಪ್ರಯಾಣಿಸುತ್ತಿರುವ ನಮ್ಮ ಜೀಪ್‌ ಎದುರು ಅನೇಕರು ಕೈ ಮಾಡಿ ಲಿಪ್ಟ್‌ ಕೇಳುತಿದ್ದರು. ವಿಜಯ್‌ ಗಮನಿಸುವ ಮೊದಲು ಏ ದೊಸ್ತಾ ಗಾಡಿ ನಿಲ್ಸೋ ಎಂದು ಅನಾಮಿಕರಿಗೆ ಉಪಕರಿಸಿ ಸಮಾಜಸೇವೆ ಮಾಡುತಿದ್ದೆ!

ಈ ಸಮಾಜಸೇವೆ, ಲೋಕಪ್ರೀತಿಯೆಡೆಗೆ ತುಸು ತಿರಸ್ಕಾರ ಹೊಂದಿದ್ದ ವಿಜಯ್‌ ಅನಾಮಿಕ ಪ್ರಯಾಣಿಕ ತನ್ನ ಊರು, ನಿಲುಗಡೆ ಪ್ರದೇಶ ಬಂದಾಗ ಇಳಿದು ಹೊಡುತ್ತಲೇ ನನಗೆ ಬೈಯಲು ಪ್ರಾರಂಭಿಸುತಿದ್ದ. ಯಾರ್ಯಾರನೆಲ್ಲಾ ಹತ್ಸಕೋಬಾರದಲೆ… ಯಾರು ಹ್ಯಾಂಗಿರತಾರೋ? ಅವರಿಗೆ ಜೀಪ್‌ ಡೋರ್‌ ತೆಗಿಯಾಕ್‌ ಬರಲ್ಲ, ಪುಕ್ಕಟ್ಟೆ ಕೂತವರು ಬಾಗಿಲನೂ ಸರಿಯಾಗಿ ಹಾಕಲ್ಲ. ಡೋರ್‌ ಹಾಳಾದ್ರೆ ನಿಮ್ಮಪ್ಪ ಸರಿಮಾಡ್ಸಕೊಡತಾನಲೆ? ನಮ್ಮಪ್ಪ ಎರಡು ಬಿಡತಾನಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸುತಿದ್ದ.

ಆಗ ತುಸು ಶರಣಾಗುತಿದ್ದ ನನ್ನ ಸಮಾಜಸೇವಾ ಪ್ರವೃತ್ತಿ ಅನಾಮಿಕ, ಅಮಾಯಕರನ್ನು ನೋಡುತ್ತಲೇ ಮತ್ತೆ ಹೆಡೆ ಎತ್ತುತ್ತಿತ್ತು. ಯಥಾ ಪ್ರಕಾರ ಮತ್ತೆ ವಿಜಯನ ಪ್ರವಚನ, ನನ್ನ ಶರಣಾಗತಿ! ನನ್ನ ಸಮಾಜ ಸೇವಾ ಕೈಂಕರ್ಯದಿಂದಾಗಿ ವಿಜಯನಿಗೆ ಕಿರಿಕಿರಿಯಾಗುತಿತ್ತಾದರೂ ನಮ್ಮ ಸ್ನೇಹಕ್ಕೇನೂ ಕುಂದುಂಟಾಗುತ್ತಿರಲಿಲ್ಲ.

ಆಗಿನ ವಿಜಯನ ಅಸಮಾಧಾನ, ಬೇಸರಕ್ಕೆ ಈಗ ಉತ್ತರ ಸಿಗುತ್ತಿದೆ. ಬಹುತೇಕ ಹಳ್ಳಿಯವರಾಗಿರುವ ಅನಾಮಿಕ, ಅಮಾಯಕ ಪ್ರಯಾಣಿಕರಿಗೆ ವಾಹನದ ವಿಚಾರ ತಿಳಿದಿರುವುದಿಲ್ಲ. ಅವರ ಚಪ್ಪಲಿಯಿಂದ ಬರುವ ಕೆಸರು, ಹೊಲಸು ನಾವು ಗಾಡಿ ತೊಳೆಯುವಾಗ ನಮ್ಮ ಸಮಾಜಸೇವಾ ಪ್ರವೃತ್ತಿಯನ್ನು ಅಣಕಿಸುವಾಗ ಸಾಂತ್ವನಕ್ಕೆ ಅವರಿರುವುದಿಲ್ಲ. ಒಂದಾನುವೇಳೆ ಅಮಾಯಕ,ಅನಾಮಿಕರು ಹ್ಯಾಗ್ಹ್ಯಾಗೋ ಡೋರ್‌ ಎಳೆದು ಮಾಡುವ ತಪ್ಪಿನಿಂದಾಗುವ ಹಾನಿ ರಿಪೇರಿ ಮಾಡುವ ಮೆಕ್ಯಾನಿಕ್‌ ನಮ್ಮಂಥ ಸಮಾಸೇವಾನಿರತನಿರುವುದಿಲ್ಲ.!

ಅಷ್ಟಕ್ಕೂ ನಮ್ಮದೇ ರಗಳೆ, ಕೆಲಸ, ಜವಾಬ್ಧಾರಿ, ಸಮಯಗಳ ಪಿರಿಪಿರಿಯಲ್ಲಿರುವ ನಾವು ಅಮಾಯಕ ಅನಾಮಿಕರಿಗೆ ಕಿವಿಕೊಡಲು ಸಮಯವೂ ಇರುವುದಿಲ್ಲ, ಈ ನಮ್ಮ ಅನಿವಾರ್ಯತೆ,ಅಸಹಾಯಕತೆಗಳ ಅರಿವಿಲ್ಲದ ಅಮಾಯಕ ನಾವೂ ಅವನಂತಿರದ ಬಗ್ಗೆ ಇಂವ ಗ್ಲಾಸ್‌ ಇಳಿಸುವುದಿಲ್ಲ, ಜನ ಸೇರುವುದಿಲ್ಲ, ಮನುಷ್ಯರ ಮುಖ ನೋಡುವುದಿಲ್ಲ ಎಂದೆಲ್ಲಾ ಹೇಳಿಕೊಂಡು ತಿರುಗಾಡುತ್ತಿರುತ್ತಾನೆ. ಇಂಥ ಅನಾಮಿಕರಿಗೆ ಒಳ್ಳೆಯವನೆನೆಸಿಕೊಳ್ಳಬೇಕಾದ ಅನಿವಾರ್ಯತೆಗೆ ನಾವು ಸಮಾಜಸೇವಾ ನಿರತ ಸಾರ್ವಜನಿಕ ಕಾಳಜಿಯ ವ್ಯಕ್ತಯಾಗುವುದಿದೆಯಲ್ಲ ಅದು ಜಗತ್ತಿನ ಪ್ರಮುಖ ಖಯ್ಯಾಲಿ ಮತ್ತು ಹವ್ಯಾಸ ಆಗಿರದಿದ್ದರೆ ನೀವು, ನಿಮ್ಮ ಸ್ನೇಹಿತರೂ ಸೇಫ್!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *