

ಧರ್ಮವನ್ನು ವ್ಯಾಖ್ಯಾನಿಸುವವರು ಧರ್ಮದ ಮಹತ್ವವನ್ನು ಕಡಿಮೆಮಾಡುತಿದ್ದಾರೆ ಎಂದು ಬೇಸರಿಸಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಧರ್ಮ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ. ಸಿದ್ಧಾಪುರ ನೆಹರೂ ಮೈದಾನದಲ್ಲಿ ಸಿದ್ಧಾಪುರ ಉತ್ಸವ ೨೦೨೪ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಗಳು ಎಲ್ಲಾ ಧರ್ಮಗಳೂ ಮಾನವೀಯತೆಯನ್ನೇ ಭೋದಿಸಿವೆ ಯಾವುದಾದರೂ ಧರ್ಮ ಮನುಷ್ಯರಲ್ಲಿ ವ್ಯತ್ಯಾಸ ಕಂಡರೆ ಅದು ಧರ್ಮದ ತಪ್ಪಲ್ಲ ಹಾಗೆ ವ್ಯಾಖ್ಯಾನಿಸುವವರ ತಪ್ಪು ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶ್ವ ಭ್ರಾತ್ರತ್ವ ಸಾರುವುದಾದರೆ ಅವು ಯಾವುದೇ ಜಾತಿ-ಧರ್ಮ ಮೀರಿದ ಜಾಗತಿಕ ಮಹತ್ವದ ಕಾರ್ಯಕ್ರಮಗಳು ಇಂಥ ಸಂಘಟನೆ ಮಾಡುವ ಮೂಲಕ ಕೆ.ಜಿ. ನಾಯ್ಕರ ತಂಡ ವಿಶ್ವಶಾಂತಿಯ, ಸೌಹಾರ್ದತೆಯ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ನಾನಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಜಿ. ನಾಯ್ಕ ಹಣಜಿಬೈಲ್ ಸರ್ವರನ್ನೂ ಸ್ವಾಗತಿಸಿ, ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸುಧಾರಾಣಿ ನಾಯ್ಕ ಮತ್ತು ರತ್ನಾಕರ ನರಮುಂಡಿಗೆ ನಿರೂಪಿಸಿದರು.
