ತರಳಿ ಆಧಾರಿತ ದೀವರ ಚರಿತ್ರೆ…. ಭಾಗ- 1 samajamukhi.net exclusive-

(ವಿ.ಸೂ.- ಈ ಸಂಶೋಧನಾ ಲೇಖನವನ್ನು ಪೂರ್ತಿ ಅಥವಾ ಭಾಗಶ: ಪ್ರಕಟಿಸುವುದು, ಮುದ್ರಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಕೃತಿಚೌರ್ಯ, ಕಾನೂನು ಬಾಹೀರ, ಆಸಕ್ತರು ಶೇರ್‌, like ಮಾಡಬಹುದು)

ಸಾವಿರ ವರ್ಷಗಳ ಈಚೆಗೆ ಲಿಂಗಾಯತ ಧರ್ಮ ಪ್ರಚಾರಕ್ಕೆ ಬರುವ ಮೊದಲು ಮತ್ತು ನಂತರ ಲಿಂಗಾಯತರಲ್ಲದ ಹಿಂದೂಗಳಲ್ಲಿ ಶೈವ ಮತ್ತು ವೈಶ್ಣವ ಪಂಥಗಳ ಆಚರಣೆಗೆ ಮಹತ್ವವಿದೆ.

ಅದ್ವೈತವನ್ನು ಪಾಲಿಸುವವರು ಶೈವರು ದ್ವೈತವನ್ನು ಅನುಕರಿಸುವವರು ವೈಷ್ಣವರು ಎಂಬ ಪಂಗಡಗಳಾದವು. ವಾಸ್ತವದಲ್ಲಿ ಮತಗಳಾದ ಈ ಗುಂಪುಗಳು ತಮ್ಮ ಅಸ್ಥಿತ್ವ, ಪಾರಮ್ಯಕ್ಕಾಗಿ ಸ್ಫರ್ಧೆಗೆ ಬಿದ್ದಾಗ ಹಿಂದೂಗಳಲ್ಲೇ ಈ ಆಚಾರ, ವಿಚಾರಗಳಿಂದ ದೂರವಿದ್ದ ಇತರರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಾ ವಿಸ್ತರಿಸುವ ಅನಿವಾರ್ಯತೆಯಲ್ಲಿ ಭಾರತದಲ್ಲಿ ಶೈವ ಮತ್ತು ವೈಷ್ಣವ ಪಂಥಗಳು ಇತರರನ್ನು ಒಳಗೊಳ್ಳತೊಡಗಿದವು.

ಇತರರನ್ನು ಒಳಗೊಳ್ಳುವ ಈ ಕಾಲದ ಹಿಂದುತ್ವದ ಅಧಿಕಾರಶಾಹಿ ರಾಜಕಾರಣಕ್ಕಿಂತ ಅಷ್ಟೇನೂ ಭಿನ್ನವಲ್ಲದ ಅದ್ವೈತ, ದ್ವೈತ ಗುಂಪುಗಳ ಮೇಲಾಟದಲ್ಲಿ ವೈಷ್ಣವರೊಂದಿಗೆ ವ್ಯಾವಹಾರಿಕವಾಗಿ ಸೇರಿಹೋದವರು ಇತರರು ಇದೇ ಇತರರನ್ನು ನಾವು ಇತರ ಹಿಂದುಳಿದ ವರ್ಗಗಳು ಎಂದು ಕರೆಯಬಹುದು!

ಕರ್ನಾಟಕದ ಈ ಇತರ ಹಿಂದುಳಿದ ವರ್ಗಗಳಲ್ಲಿ ಬಹುಸಂಖ್ಯಾತರಾಗಿದ್ದ ಈಡಿಗರೆನ್ನುವ ದೀವರು, ನಾಮಧಾರಿ, ಬಿಲ್ಲವ ಹಳೆಪೈಕರನ್ನು ವೈಷ್ಣವರು ಓಲೈಸಿದರಾದರೂ ಶೈವರಿಗೆ ಇವರನ್ನು ಒಲೈಸಲು ಅವರ ಪ್ರತಿಸ್ಫರ್ಧಿತ್ವ ಅಡ್ಡಿ ಯಾಗಿರಬಹುದು!

ಮಲೆನಾಡಿನ ವೀರ ಯೋಧರಾದ ಹಳೆಪೈಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ಪೈಪೋಟಿಯಲ್ಲಿ ಶೈವ ಅದೈತಿಗಳಿಗೆ ಹಿನ್ನಡೆಯಾಗಿ ವೈಷ್ಣವ ದೈತಿಗಳು ಯಶಸ್ವಿಯಾಗಲು ಆಗಿನ ಪರ್ಯಾಯ ಹುಡುಕಾಟವೂ ಕಾರಣ.

ಇಂಥ ಪರ್ಯಾಯ ಸಾಧ್ಯತೆಯಾಗಿ ವೈಷ್ಣವರಿಗೆ ಸಿಕ್ಕವರು ಹಳೆಪೈಕ ನಾಮಧಾರಿಗಳು ಅಥವಾ ದೀವರು. ಈ ದೀವರಿಗೆ ನೇತೃತ್ವ ವಹಿಸುವ ವಿಚಾರದಲ್ಲಿ ಸಮಕಾಲೀನ ಶೈವರಿಗೆ ಹಿನ್ನಡೆಯಾಗಲು ಕಾರಣ ಅಂದಿನ ಸಾಮಾಜಿಕ ಪದ್ಧತಿ. ಹೀಗೆ ವೈಷ್ಣವರೊಂದಿಗೆ ಅನಿವಾರ್ಯವಾಗಿ ಸೇರ್ಪಡೆಯಾದ ದೀವರಿಗೆ ನಂತರ ತಿರುಪತಿ ತಿಮ್ಮಪ್ಪ, ಮೇಲುಕೋಟೆ ನಾರಾಯಣ ದೇವರಾಗಿದ್ದು ಹೀಗೇ.

ಇಂಥ ವನವಾಸಿ ದೀವರು, ಹಳೆಪೈಕರನ್ನು ದ್ವೈತದೆಡೆಗೆ ಎಳೆದುಕೊಂಡ ವೈಷ್ಣವರು ಅವರೇ ಗುರುಗಳಾದರು. ಯಥಿಗಳಾದರು. ತಮ್ಮ ಮತ-ಪಂಥ ಆಚರಣೆಯ ಸಂಗಾತಿಗಳಾಗಲು ದೀವರನ್ನು ಕರೆದ ವೈಷ್ಣವರು ಅಸಂಘಟಿತ ದೀವರಿಗೆ ನಾಯಕತ್ವ ನೀಡಿದರು.

ಇದು ದೀವರಿಗೆ ವೈಷ್ಣವ ಬ್ರಾಹ್ಮಣ ಸ್ವಾಮಿಗಳಾಗಲು ಹೇತುವಾಯಿತು. ಹೀಗೆ ವೈಷ್ಣವರ ಸಂಘ ಸೇರ್ಪಡೆಯಾದ ಶ್ರಮಜೀವಿ ದೀವರು ದ್ವೈ ತದ ವೈಷ್ಣವರ ನೇತೃತ್ವದಲ್ಲಿ ತಮ್ಮ ಅಸ್ಮಿತೆಯ ಹುಡುಕಾಟ ನಡೆಸಿದರು.ಇದರ ಹಿಂದಿನ ಕಾರಣ ಮೇಲ್ವರ್ಗದ ಸ್ಥಳೀಯರು ಶೈವರಾಗಿದ್ದ ಅಂಶ!

ಹೀಗೆ ತಮ್ಮ ಲಾಗಾಯ್ತಿನ ಬಂಡಾಯ ಗುಣಗಳಿಂದ ತಮ್ಮ ಪ್ರತ್ಯೇಕ ಅಸ್ಮಿತೆಗೆ ವೈಷ್ಣವರ ದ್ವೈ ತದೆಡೆ ಸಾಗಿದ ಈ ಸಮೂದಾಯ ಇತ್ತೀಚಿನ ವರ್ಷಗಳ ವರೆಗೂ ವೈಷ್ಣವ ಬ್ರಾಹ್ಮಣರ ಅಡಿ ತಮ್ಮ ಧಾರ್ಮಿಕತೆ ಹುಡುಕಿದ್ದು ವಿಶೇಶ. ಈ ಕಾರಣದಿಂದ ದೀವರೆಡೆಗೆ ಬಂದ ವೈಷ್ಣವರ ಜಾತಿ ಪ್ರತಿನಿಧಿ ಬಾಲಕೃಷ್ಣ ಸ್ವಾಮೀಜಿ.

ಈ ಬಾಲಕೃಷ್ಣ ಸ್ವಾಮೀಜಿಯಯವರ ಕಾಲದ ಮೊದಲು ಇದೇ ವೈಷ್ಣವ ಪಂಥದವರು ದೀವರ ಬಾಹುಳ್ಯವುಳ್ಳ ಯಲ್ಲಾಪುರ, ಸಿದ್ಧಾಪುರ, ಶಿರಸಿ,ಸಾಗರ,ಸೊರಬಾ, ಹೊಸನಗರ ಭಾಗಗಳಲ್ಲಿ ದೀವರಿಗೆ ಸ್ವಾಮೀಜಿ, ಪೂಜಾರಿಗಳಾಗಿ ನೇತೃತ್ವ ನೀಡಿ ನಂತರ ದೀವರಿಗೂ ಅವರಿಗೂ ಸರಿ ಬಾರದೆ ಮಠದ ವ್ಯವಸ್ಥೆ ಕುಸಿದು ಬಿದ್ದ ಬಗ್ಗೆ ಮಾಹಿತಿಗಳಿವೆ. ( ಈ ಬಗ್ಗೆ ಪ್ರಾರಂಭವಾಗುವ ಇತಿಹಾಸಕ್ಕೆಸಾಕ್ಷಿಗಳು ಬಾಳೆಹೊನ್ನೂರು, ಹೊಸನಗರಗಳಲ್ಲಿ ಲಭ್ಯವಿವೆ.)

ದೀವರು ವೈಷ್ಣವರ ಅನುಯಾಯಿಗಳಾದ ಒಂದು ಧಾರೆಯ ಚರಿತ್ರೆ ಬಾಳೆಹೊನ್ನೂರು, ಹೊಸನಗರ ಸಾಗರ,ಯಲ್ಲಾಪುರದೆಡೆ ಸಾಗಿದರೆ. ಇನ್ನೊಂದು ಧಾರೆ ಮಂಡ್ಯ ಮೇಲುಕೋಟೆಯಿಂದ ಪ್ರಾರಂಭವಾಗಿ ಭಟ್ಕಳ, ಯಲ್ಲಾಪುರ, ಬಿಳಗಿ, ಸಿದ್ಧಾಪುರ ಸುತ್ತಿ ತರಳಿಯಲ್ಲಿ ಕೊನೆಗೊಳ್ಳುತ್ತದೆ.

ಹೀಗೆ ತರಳಿಗೆ ವೈಷ್ಣವರ ಪ್ರವೇಶವಾಗುವ ಮೊದಲು ಸಿದ್ಧಾಪುರದ ಹೆಗ್ಗೇರಿಯಿಂದ ಹೊಸನಗರ, ಬಾಳೆಹೊನ್ನೂರು ಸುತ್ತುವ ಸುರುಳಿ ಕೆಲವು ಹಂತಗಳಲ್ಲಿ ಸುಪ್ತವಾಗಿದ್ದು, ಶಿಥಿಲವಾಗಿ ನಂತರ ಮತ್ತೆ ವೈಭವಕ್ಕೆ ಮರಳುವುದು ದೀವರ ಚರಿತ್ರೆಯ ವೈಶಿಷ್ಟ್ಯ ಇಂಥ ಏಳುಬೀಳುಗಳಸರಪಳಿ ಸುತ್ತಿಕೊಂಡಿರುವದೀವರ ವೈಷ್ಣವ ಸಾಂಗತ್ಯ ಈಗ ಕೊನೆಗೊಳ್ಳುತ್ತಿರುವುದೂ ಕಾಲದ ಮಹಿಮೆ.

ಇಂಥ ಸರಿಸುಮಾರು ಸಾವಿರ ವರ್ಷಗಳ ಹಿನ್ನೆಲೆಯ ದೀವರ ದಾರ್ಮಿಕ ಚರಿತ್ರೆಗೆ ಮೂರ್ತ ರೂಪ ಬಂದಿದ್ದು ಸಿದ್ಧಾಪುರದ ತರಳಿಯಿಂದ ಎನ್ನುವುದು ತರಳಿಯ ವಿಶೇಷತೆ….

ಈ ತರಳಿಯಲ್ಲಿ ಬಿಳಗಿ ಅರಸರ ಕಾಲದಲ್ಲಿ ಅವಧೂತ ಸ್ವರೂಪಿ ವ್ಯಕ್ತಿಯೊಬ್ಬನಿದ್ದ ಆತನಿಗೆ ಯಕ್ಷಿಣಿ ವಿದ್ಯೆ ಸಿದ್ಧಿಯಾಗಿ ಆತನ ಚಟುವಟಿಕೆ ನಿಯಂತ್ರಿಸುವುದು ಸವಾಲಾದಾಗ ಆತನಿಗೆ ಬಿಳಗಿ ಅರಸರು ಉಪಾಯದಿಂದ ಹಿಡಿದು ಅವರ ಅಗೋಚರ ಶಕ್ತಿ ಪರೀಕ್ಷೆ ಮಾಡಿ ಅವಕ್ಕಾಗಿರುವ ಅಂಶ ಜಾನಪದದಲ್ಲಿದೆ.

ಇದೇ ವ್ಯಕ್ತಿ ಆ ಕಾಲದಲ್ಲಿ ಸಿದ್ಧಾಪುರ ಪ್ರದೇಶದಿಂದ ತಿರುಪತಿಗೆ ಬರಿಕಾಲಲ್ಲಿ ತೆರಳಿ ಮರಳಿ ಊರಿಗೆ ಬಂದು ಪವಾಡ ನಡೆಸುತಿದ್ದ ಕಾರಣಕ್ಕೆ ತಿರುಪತಿ ದೇವರ ಹೆಸರಿನಲ್ಲಿ ತರಳಿ ತಿಮ್ಮಪ್ಪ ಎಂದು ಪ್ರಸಿದ್ಧನಾಗಿದ್ದ ಎನ್ನಲಾಗುತ್ತದೆ. ಅವಧೂತ ಸ್ವರೂಪಿ ಇದೇ ತಿಮ್ಮಪ್ಪ ಉಳ್ಳವರ ಬಳಿ ಬೇಡಿ ಇಲ್ಲದವರಿಗೆ ಹಂಚುತ್ತಾ ಶ್ರೀಮಂತರು ದಾನ-ಧರ್ಮಗಳಿಗೆ ಮೂಗು ಮುರಿದಾಗ ಅವರಿಗೆ ಚಾಲೆಂಜ್‌ ಮಾಡಿ ಉಳ್ಳವರ ಮನೆಯ ಕಳ್ಳತನ ಮಾಡಿ ಬಡವರಿಗೆ ಹಂಚುವ ಧಾರಾಳಿಯಾಗಿದ್ದ ಎನ್ನುವ ಜಾನಪದರ ಮಾಹಿತಿಗಳೂ ಹಾಡು ಲಾವಣಿಗಳಲ್ಲಿದೆ.

ಇಂಥ ತರಳಿಯಲ್ಲಿ ಸಿಕ್ಕ ಕೆಲವು ದಾಖಲೆಗಳು ಅದಕ್ಕೆ ಪೂರಕವಾಗಿ ಸಿಗುವ ಜಾನಪದ ಆಕರಗಳು ದೀವರ ಧಾರ್ಮಿಕ ಹುಡುಕಾಟದ ಇತಿಹಾಸದ ಕತೆ ಸಾರುತ್ತವೆ. ಈ ಪಯಣ ಮುಂದುವರಿದು ಹೆಗ್ಗೇರಿಯಲ್ಲಿ ವೆಂಕಟ್ರಮಣ ದೇವಾಲಯ ಸ್ಥಾಪನೆ, ಸ್ಥಳೀಯ ಶೈವ ಮೇಲ್ವರ್ಗದ ಯಜಮಾನಿಕೆ,ಮೇಲರಿಮೆಗಳಿಗೆ ಸವಾಲು ಹಾಕಿ ದೇವಾಲಯ ಸ್ಥಾಪನೆ ಮಾಡುವುದು, ತರಳಿಯಲ್ಲಿ ದೇವಸ್ಥಾನ ಸ್ಥಾಪನೆ ಇದೇ ಪ್ರಕ್ರಿಯೆಯಲ್ಲಿ ಸ್ಥಳೀಯ ಮೂಲನಿವಾಸಿಗಳಾದ ಖರೆ, ಕೊಟ್ಟೆ ಒಕ್ಕಲಿಗರು, ಬಿಲ್‌ ಛತ್ರಿಯರು ಎನ್ನುವ ಇತರ ಸಮೂದಾಯಗಳನ್ನು ಜೊತೆಗೆ ಸೇರಿಸಿಕೊಂಡು ಸಾಗುವುದು ಅವರಿಗೆ ತರಳಿಯಲ್ಲಿ ಗಣಪತಿ, ಬೀರ ದೇವರುಗಳ ಸ್ಥಾನ ನೀಡುವುದು ಇವೆಲ್ಲಾ ಈ ನೆಲದ ಚರಿತ್ರೆ, ಅಸ್ಮಿತೆಗಳೊಂದಿಗೆ ಸಾಗುವ ಸಾಂದರ್ಭಿಕ ಬಂಡಾಯಗಳು, ಮುಖ್ಯವಾಹಿನಿಗೆ ಸೆಡ್ಡು ಹೊಡೆದು ಸೇರುವ ಸಾಮಾಜಿಕ ಚಳವಳಿಗಳು! (ಸಶೇಶ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *