

ಸಿದ್ಧಾಪುರ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮತ್ತು ರಾಜ್ಯ ಬಿ.ಜೆ.ಪಿ. ಮುಖಂಡ ಕೆ.ಜಿ.ನಾಯ್ಕ ಹಣಜಿಬೈಲ್ ರ ಮೇಲೆ ಶನಿವಾರ ಪೊಲೀಸ್ ಪ್ರಕರಣ ದಾಖಲಾಗಿದೆ.
ರಾಜ್ಯ ಬಿ.ಎಸ್. ಎನ್.ಡಿ.ಪಿ. ತಾಲೂಕಾ ಅಧ್ಯಕ್ಷ ವಿನಾಯಕ ನಾಯ್ಕ ದೊಡಗದ್ದೆ ಕೆ.ಜಿ.ನಾಯ್ಕರ ವಿರುದ್ಧ ಪೊಲೀಸ್ ದೂರು ನೀಡಿದ್ದು ಕೆ.ಜಿ.ನಾ. ತನ್ನ ಬೆಂಬಲಿಗರೊಂದಿಗೆ ತನ್ನಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಶನಿವಾರ ಸಾಯಂಕಾಲ ತಾಲೂಕಾ ಆಸ್ಫತ್ರೆ ಬಳಿ ಇದ್ದ ತನ್ನ ಮೇಲೆ ಏರಿಬಂದ ಕೆ.ಜಿ.ನಾಯ್ಕ, ಜಗದೀಶ್ ನಾಯ್ಕ ಮತ್ತು ವಿವೇಕ ನಾಯ್ಕ ಅವಾಚ್ಛವಾಗಿ ನಿಂದಿಸಿದ್ದಲ್ಲದೆ ಕೊಲೆಗೆ ಯತ್ನಿಸಿದ ಬಗ್ಗೆ ವಿವರ ದೂರು ನೀಡಿದ್ದಾರೆ.
ಪ್ರತಿದೂರು-
ಇದೇ ಪ್ರಕರಣದ ಆರೋಪಿಗಳಾಗಿರುವ ಕೆ.ಜಿ.ನಾಯ್ಕ ಮತ್ತು ಜಗದೀಶ್ ನಾಯ್ಕ ಪರವಾಗಿ ಪೊಲೀಸ್ ದೂರು ನೀಡಿರುವ ವಿವೇಕ್ ನಾಯ್ಕ ಅವರಗುಪ್ಪಾ ನಾಮಧಾರಿ ಸಂಘದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೆ.ಜಿ.ನಾಯ್ಕರ ಬಗ್ಗೆ ನಿರಾಧಾರ ಆರೋಪ ಮಾಡಿರುವ ವಿನಾಯಕ ನಾಯ್ಕ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕೊಲೆ ಯತ್ನ ನಡೆಸಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿರುವ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒಂದೇ ಪ್ರಕರಣಕ್ಕೆ ಸಂಬಂಧಿಸಿ ಒಂದು ದೂರಿಗೆ ಪ್ರತಿದೂರು ನೀಡಿರುವ ಒಟ್ಟೂ ಎರಡು ಪ್ರಕರಣಗಳು ದಾಖಲಾಗಿವೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತಿದ್ದಾರೆ.
