

ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆ ಅರಣ್ಯ ಭೂಮಿ ಹಕ್ಕು ಹೋರಾಟವನ್ನು ಕಳೆದ ನಾಲ್ವತ್ತು ವರ್ಷಗಳಿಂದ ಜೀವಂತವಿಟ್ಟಿರುವ ಎ.ರವೀಂದ್ರ ಅಲಿಯಾಸ್ ರವೀಂದ್ರನಾಥ ನಾಯ್ಕ ಇತ್ತೀಚಿಗೆ ಹಿಂಗ್ಯಾಕಾಡ್ತಾರೆ ಎನ್ನುವ ಅನುಮಾನ ಬರತೊಡಗಿದೆ.
ನಿರಂತರ ಜನಪ್ರತಿನಿಧಿಯಾಗುತ್ತಿರುವ ಮಾಜಿ ಸ್ಫೀಕರ್ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಿಗೆ ಮನವಿ ನೀಡಿ ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಅವಶ್ಯವಿರುವ ಅರಣ್ಯ ಹಕ್ಕು ಕಾನೂನು ತಿದ್ದುಪಡಿ ಮಾಡಿ ಅರಣ್ಯ ಸಾಗುವಳಿದಾರರಿಗೆ ನ್ಯಾಯ ಒದಗಿಸಿ ಎಂದು ಕೇಳಿದರು.
ಇದಾದ ಒಂದು ದಿನದೊಳಗೆ ಮಾಧ್ಯಮ ಹೇಳಿಕೆ ನೀಡಿದ ಎ. ರವೀಂದ್ರ ಅರಣ್ಯ ವಾಸಿಗಳಿಗೆ ನ್ಯಾಯ ನೀಡಲು ಕಾಯಿದೆ ಬದಲಾವಣೆ ಅಗತ್ಯವಿಲ್ಲ ಎಂದು ಬಿಟ್ಟರು.
ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ಅಗತ್ಯವಿಲ್ಲದಿರುವುದನ್ನು ಗ್ರಹಿಸದಷ್ಟು ಹಿರಿಯ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಪ್ರಬುದ್ಧರೆ? ಅಥವಾ ಸಂಸದರ ಕಾಳಜಿ ಅರಿಯದಷ್ಟು ಎ. ರವೀಂದ್ರ ಅಪ್ರಬುದ್ಧರೆ?
ಒಬ್ಬರು ನ್ಯಾಯವಾದಿ, ಇನ್ನೊಬ್ಬರು ವೃತ್ತಿಪರ ರಾಜಕಾರಣಿ ಇವರಿಬ್ಬರಲ್ಲಿ ಯಾರು ಸರಿ?
ರಾಜ್ಯದ ಅರಣ್ಯ ಸಚಿವರು ಅರಣ್ಯದಲ್ಲಿರುವ ಅನಧೀಕೃತ ವಾಣಿಜ್ಯ ವ್ಯವಹಾರ ಸಂರಚನೆಗಳನ್ನು ತಕ್ಷಣ ಖುಲ್ಲಾ ಪಡಿಸಿ ಎಂದು ಆದೇಶ ಮಾಡುತ್ತಲೇ ಅರಣ್ಯ ಹಕ್ಕು ಹೋರಾಟಗಾರರು ಈಗಾಗಲೇ ಅರ್ಜಿ ಸಲ್ಲಿಸಿ ಅರಣ್ಯ ಹಕ್ಕು ಮಾನ್ಯತೆ ಕೇಳಿರುವ ಅತಿಕ್ರಮಣದಾರರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದರು. ಇವುಗಳಲ್ಲಿ ಯಾವುದು ಸರಿ, ಯಾವದು ತಪ್ಪು. ಈ ಬಗ್ಗೆ ಸ್ಫಷ್ಟತೆ ಇರುವ ಎ. ರವೀಂದ್ರ ಇತ್ತೀಚೆಗೆ ರಾಜ್ಯ ಅರಣ್ಯ ಸಚಿವರಿಗೆ ಮನವಿ ನೀಡಿ ಮನವರಿಕೆ ಮಾಡಿದ್ದೇನು? ಸಚಿವರ ಆದೇಶ ಅರಣ್ಯಾತಿಕ್ರಮಣ ಭೂಮಿ ಸಾಗುವಳಿದಾರರಿಗೆ ಅನ್ವಯಿಸದಿದ್ದರೆ ಮತ್ತೆ ಸಚಿವರಿಗೆ ಮನವಿ ನೀಡುವ ಅಗತ್ಯವಿತ್ತಾ?
