ಔಷಧೀಯ ಸಸ್ಯಗಳ ಸ್ವರ್ಗ ‘ಕಪ್ಪತಗುಡ್ಡ’ ಅಭಯಾರಣ್ಯ ಈಗ 18 ಪ್ರಾಣಿಗಳ ಆವಾಸ ಸ್ಥಾನ!
ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ತೋಳಗಳು, ಹೈನಾಗಳು ಮತ್ತು ಹುಲ್ಲೆಗಳು ಸೇರಿದಂತೆ 18 ರೀತಿಯ ಪ್ರಾಣಿಗಳಿಗೆ ನೆಲೆಯಾಗಿದೆ. ಗಣಿಗಾರಿಕೆಗಾಗಿ ನೋಟಿಫಿಕೇಶನ್ ಮತ್ತು ಡಿ-ನೋಟಿಫಿಕೇಶನ್‌ಗಳಿಗೆ ಸಾಕ್ಷಿಯಾಗಿತ್ತು
ಕಪ್ಪತಗುಡ್ಡದಲ್ಲಿ ಕಂಡು ಬಂದ ಕಾಡುಬೆಕ್ಕು
ಗದಗ: ಔಷಧೀಯ ಸಸ್ಯಗಳ ಸ್ವರ್ಗವಾಗಿರುವ ಕಪ್ಪತಗುಡ್ಡದ 18 ಪ್ರಾಣಿಗಳ ಆವಾಸಸ್ಥಾನವಾಗಿದೆ ಎಂಬುದನ್ನು ಕೊಯಮತ್ತೂರು ಮೂಲದ ಸಲೀಂ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ ಅಂಡ್ ನ್ಯಾಚುರಲ್ ಹಿಸ್ಟರಿ ನಡೆಸಿದ ಅಧ್ಯಯನ ಬಹಿರಂಗ ಪಡಿಸಿದೆ.
ಇಂತಹ ಕಪ್ಪತಗುಡ್ಡದಲ್ಲಿ ಕೆಲವು ಸಂಸ್ಥೆಗಳು ಈಗ ಗುತ್ತಿಗೆ ಪಡೆದು ಗಣಿಗಾರಿಕೆ ನಡೆಸಲು ಉತ್ಸುಕವಾಗಿವೆ. ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ತೋಳಗಳು, ಹೈನಾಗಳು ಮತ್ತು ಹುಲ್ಲೆಗಳು ಸೇರಿದಂತೆ 18 ರೀತಿಯ ಪ್ರಾಣಿಗಳಿಗೆ ನೆಲೆಯಾಗಿದೆ. ಗಣಿಗಾರಿಕೆಗೆ ಅಧಿಸೂಚನೆಗಳು ಮತ್ತು ಡಿ-ನೋಟಿಫಿಕೇಶನ್‌ಗಳಿಗೆ ಸಾಕ್ಷಿಯಾಗಿತ್ತು. ಸ್ಥಳೀಯ ಜನರ ಚಳವಳಿಯಿಂದಾಗಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ಸದ್ಯ ತಡೆ ನೀಡಿದೆ. ಜೀವವೈವಿಧ್ಯತೆ ಮತ್ತು ಅದರ ಪರಿಣಾಮದ ಬಗ್ಗೆ ನಿರ್ಧರಿಸದೆ ಪ್ರಾಣಿಗಳ ಆವಾಸ ಸ್ಥಾನವನ್ನ ಗಣಿಗಾರಿಕೆಗೆ ಬದಲಾಯಿಸುವುದರಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ. 1,000 ದಿನಗಳಿಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ಅಧ್ಯಯನ ನಡೆಸಿದ ತಂಡವು ಈ ಪ್ರದೇಶದಲ್ಲಿ ಮೂರು ಪ್ರಮುಖ ಜಾತಿಯ ಹುಲ್ಲೆಗಳಿವೆ ಎಂದು ಹೇಳಿದೆ.
ಡೆಕ್ಕನ್ ಪ್ರಸ್ಥಭೂಮಿಯ ಅನೇಕ ಭೂದೃಶ್ಯಗಳನ್ನು ಸಂಶೋಧನೆಗಾಗಿ ನಿರ್ಲಕ್ಷಿಸಲಾಗಿದೆ. ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯವು (WLS) ಅವುಗಳಲ್ಲಿ ಒಂದಾಗಿದೆ . ಅದರ ಜೀವವೈವಿಧ್ಯದ ಬಗ್ಗೆ ಮಾಹಿತಿಯ ಕೊರತೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಅರಿವಿನ ಕೊರತೆಯಿಂದಾಗಿ ಇದನ್ನು ನಿರ್ಲಕ್ಷಿಸಲಾಗಿದೆ. 1,035 ರಾತ್ರಿಗಳಲ್ಲಿ 20 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ, ನಾವು 18 ಜಾತಿಯ ಸಸ್ತನಿಗಳನ್ನು ಪತ್ತೆ ಮಾಡಿದ್ದೇವೆ. ಅವುಗಳಲ್ಲಿ ಹುಲ್ಲೆಗಳು, ನಾಲ್ಕು ಕೊಂಬಿನ ಹುಲ್ಲೆಗಳು, ಚಿಂಕಾರಗಳು ಮತ್ತು ಬ್ಲ್ಯಾಕ್‌ಬಕ್ಸ್ (ಕಡವೆ ) ಸೇರಿವೆ. ಮೂರು ಜಾತಿಯ ಹುಲ್ಲೆಗಳು ಒಂದೇ ಪ್ರದೇಶದಲ್ಲಿರುವ ಏಕೈಕ ಸ್ಥಳ ಇದಾಗಿದೆ ”ಎಂದು ಅಧ್ಯಯನದ ನೇತೃತ್ವ ವಹಿಸಿದ್ದ SACON ನ ಸಂರಕ್ಷಣಾ ಜೀವಶಾಸ್ತ್ರದ ಪ್ರಧಾನ ವಿಜ್ಞಾನಿ ಎಚ್‌ಎನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. (kp.c)