


ಸಿದ್ದಾಪುರ,ಡಿ.೩೧- ಅಂತೂ ಇಂತೂ ಸಿದ್ಧಾಪುರದ ಪಿಗ್ಮಿ ಏಜೆಂಟ್ ಗೀತಮ್ಮ ಕೊಲೆಯ ಆರೋಪಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ವೃತ್ತಿಪರ ಅಪರಾಧಿಯಾಗಿರುವ ಅಭಿಜಿತ್ ಗಣಪತಿ ಮಡಿವಾಳ ಗೀತಮ್ಮಳ ಕೊಲೆ ಮಾಡುವ ಮೊದಲು ಸಣ್ಣ-ಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡ ಯುವಕ.



ಕೆಲವು ಕಾಲ ಬೆಂಗಳೂರಿನಲ್ಲಿ ಆಟೋ ಚಲಾಯಿಸಿ ಬದುಕುತಿದ್ದ ಈತ ಮದ್ಯವ್ಯಸನಿ, ದಿನದ ಕರ್ಚು,ಚಟಗಳಿಗಾಗಿ ಸಾರ್ವಜನಿಕರಿಂದ ಹಣ ಪೀಕುತಿದ್ದ ಈತ ಸಜ್ಜನರ ಜೇಬಿಗೂ ಕೈ ಹಾಕಿ ಹಣ ಲಪಟಾಯಿಸಿ ಜನರನ್ನು ಹೆದರಿಸುತಿದ್ದ ಈ ಚರಿತ್ರೆಯ ಈತ ಆರೋಪಿಯೆಂದು ನಿರ್ಧರಿಸಲು ಪೊಲೀಸರಿಗೆ ಸಮಯ ಬೇಕಾಗಿರಲಿಲ್ಲ. ಆದರೆ ನುರಿತ ಅಪರಾಧಿಯಾಗಿರುವ ಈತ ಪೊಲೀಸರ ದಾರಿ ತಪ್ಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ಎರಡು ದಿನ ಹಾಯಾಗಿ ತಿರುಗಿಕೊಂಡಿದ್ದ!.


ಡಿ.೨೩ ರ ರಾತ್ರಿ ಸಿದ್ಧಾಪುರ ನಗರದ ವೈನ್ ಶಾಪ್ ಒಂದರಲ್ಲಿ ಕಂಟಮಟ ಕುಡಿದವನು ತನ್ನ ಸಹಚರರ ಕಣ್ಣುತಪ್ಪಿಸಿ ನಗರದ ಸೊರಬಾ ರಸ್ತೆಯ ಗೀತಮ್ಮನ ಮನೆ ಸೇರುವ ಮೊದಲು ಈ ಅಭಿಜಿತ್ ನಗರದ ಕಾಳಿದಾಸ ಗಲ್ಲಿಯ ತನ್ನ ಮಾಮೂಲು ಅಡ್ಡೆಗೂ ಬಂದು ಹೋಗಿದ್ದ!

ಸೋಮುವಾರ ದಿನ ಮೊಬೈಲ್ ಬಳಸದ ಅಭಿಜಿತ್ ನಗರದಲ್ಲಿ ಮಾಮೂಲಿನಂತೆ ಓಡಾಡಿ ಯಾರಿಗೂ ಅನುಮಾನ ಬರದಂತೆ ಪ್ರಮುಖ ಸಿ.ಸಿ. ಕೆಮರಾಗಳ ಕಣ್ಣುತಪ್ಪಿಸಿ! ಒಳ ರಸ್ತೆಯಲ್ಲಿ ಗೀತಾಳ ಮನೆಯ ಹಿಂದಿನ ಮಾಡಿನ ಹೆಂಚು ತೆಗೆದು ಒಳನುಸುಳಿ ಹೊಂಚುಹಾಕಿ ಸ್ನಾನದ ಮನೆಯ ಬಳಿ ಅಡಗಿ ಕುಳಿತಿದ್ದ, ಈ ಕಳ್ಳನನ್ನು ನಿರೀಕ್ಷಿಸದ ಗೀತಾ ಮಾಮೂಲಿನಂತೆ ಹತ್ತು ಗಂಟೆಯ ಸಮಯಕ್ಕೆ ಮನೆಗೆ ಬಂದವಳು ಸ್ನಾನದ ಮನೆಗೆ ಬರಲು ಕದ ತೆಗಿದ್ದಾಳೆ. ಅಲ್ಲೇ ಹೊಂಚುಹಾಕಿಕಾದಿದ್ದ ಅಭಿಜಿತ್ ಗೀತಾಳ ಬಾಯಿ ಮುಚ್ಚಿಸಲು ಬಾಯಿ ಮತ್ತು ಗಂಟಲು ಹಿಡಿದು ಕೂಗಿಕೊಳ್ಳದಂತೆ ತಡೆದಿದ್ದಾನೆ. ಏಕಕಾಲದಲ್ಲಿ ಬಾಯಿ, ಗಂಟಲು ಅದುಮಿದ್ದಕ್ಕೆ ಉಸಿರು ನಿಂತು ಹೋಗಿದೆ. ಅದನ್ನೂ ಸರಿಯಾಗಿ ಲೆಕ್ಕಿಸದ ಅಭಿಜಿತ್ ವೃದ್ಧೆಯ ಪಿಗ್ಮಿ ಚೀಲದಲ್ಲಿದ್ದ ಹಣ ಪಡೆದು, ಕಿವಿಯಲ್ಲಿದ್ದ ಓಲೆಗಳನ್ನು ಕಳಚಿದ್ದಾನೆ, ಓಲೆ, ಕೈ ಬಳೆಗಳನ್ನು ಕಳಚಿ ಪರಾರಿಯಾಗುವಾಗ ಕಳ್ಳನ ಬಳಿ ಇದ್ದುದು ಒಂದು ಕಬ್ಬಣದ ರಾಡ್!
ಸ್ವಾಭಿಮಾನ, ಚಲದಿಂದ ಬದುಕುತಿದ್ದ ಸಭ್ಯ ವೃದ್ಧೆಯನ್ನು ಯಾಮಾರಿಸಿ ದಿನದ ಸಂಗ್ರಹದ ಪಿಗ್ಮಿಹಣದ ಜೊತೆಗೆ ಬಂಗಾರ ಕದಿಯಲು ಪ್ಲಾನ್ ಮಾಡಿದ್ದ ಅಭಿಜಿತ್ ಈ ವಿಚಾರವನ್ನು ತನ್ನ ಸಹಚರ ಪುಡುಂಗು ತಂಡಕ್ಕೂ ಹೇಳಿರಲಿಲ್ಲ.
ಪ್ರತಿದಿನ ಕುಡಿದು ಪೋಲಿಸುತ್ತುತ್ತಾ ಕರ್ಚಿನ ಕಾಸಿಗಾಗಿ ಕಳ್ಳತನ ಮಾಡುತಿದ್ದ ಅಭಿಜಿತ್ ತನ್ನ ಬೆಂಗಳೂರಿನ ಪುಂಡಾಟದ ನಂತರ ನಗರದ ಶಿಕ್ಷಕರ ಸಹಕಾರಿ ಬ್ಯಾಂಕ್ ನ ಕಳ್ಳತನ ಮಾಡಿದ್ದ, ಈ ಕಳ್ಳತನದಲ್ಲಿ ಒಂದೇ ಒಂದು ಫೂಟು ಅಳತೆಯ ಬಿಲ ಕೊರೆದು ಹೊರ ಬಂದಿದ್ದ ಅಭಿಜಿತ್ ನ ಕಳ್ಳತನದ ಚಾಲಾಕಿತನ ಈ ಪ್ರಕರಣದಲ್ಲಿ ಈತನ ಮೇಲೆ ಗುರಿ ಮಾಡಲು ಪ್ರಬಲ ಕಾರಣವಾಗಿತ್ತು.
ಕುಡಿತ, ಮೋಜು-ಮಜಾಕ್ಕಾಗಿ ಕಳ್ಳತನ, ರೌಡಿಜಂ ಮೊರೆಹೋಗಿದ್ದ ಅಭಿಜಿತ್ ಈಗ ಪೊಲೀಸರಿಗೆ ಸೆರೆಯಾಗಿದ್ದಾನೆ. ಈ ಪ್ರಕರಣದ ನಂತರ ಹೌಹಾರಿದಂತಾದ ಸಿದ್ಧಾಪುರದ ಪುಂಡರ ಬಳಗ ಈಗ ಮನೆ ಸೇರಿದೆ. ಯಾವ ತಪ್ಪು, ಪಾಪ ಮಾಡದ ಗೀತಮ್ಮ ಒಂದೇ ಉಸಿರಿಗೇ ಜೀವ ಬಿಟ್ಟಿದ್ದಾರೆ ಆದರೆ ಅವರ ಸಂಬಂಧಿಗಳ ವೇದನೆ ಮಾತ್ರ ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. (ಸಶೇಶ)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
