


೨೦೨೫ ರ ಸಿದ್ಧಾಪುರ ವಾರ್ಷಿಕ ಅಯ್ಯಪ್ಪ ಸ್ವಾಮಿ ಜಾತ್ರೆ ದುರ್ಘಟನೆಯೊಂದಿಗೆ ಮುಕ್ತಾಯ ಕಂಡಿದೆ.

ಮಂಗಳವಾರ ಸಾಯಂಕಾಲ ೭.೩೦ ರ ಸುಮಾರಿಗೆ ವಾಹನನಿಷೇಧಿತ ಅಯ್ಯಪ್ಪ ಜಾತ್ರೆಯ ಚಂದ್ರಗುತ್ತಿ ರಸ್ತೆಗೆ ಪೊಲೀಸ್ ತಡೆಗೋಡೆಗಳನ್ನು ಉಜ್ಜಿಕೊಂಡು ಹೋದ ಪೋರ್ಡ್ ಇಕೋ ಸ್ಪೋರ್ಟ್ ವಾಹನ ಒಂದು ಸಾವು ಹಾಗೂ ೮ ಜನರಿಗೆ ಗಾಯಗೊಳಿಸಿದೆ.

ಸಿದ್ದಾಪುರ ಕಲಕೊಪ್ಪದ ಯುವತಿ ದೀಪಾ ಗೊಂಡ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಗಿಸುತ್ತಿರುವ ವೇಳೆ ಕೊನೆಯ ಉಸಿರೆಳೆದಿದ್ದಾಳೆ. ಈ ನತದೃಷ್ಟೆಯ ಶವ ಸಂಸ್ಕಾರ ಮಂಗಳವಾರ ಅಪರಾನ್ಹ ನಡೆದಿದೆ.


ತನ್ನ ಮನೆಗೆ ಹೋಗುವ ರಸ್ತೆಯಲ್ಲಿ ವಾರದಿಂದ ವಾಹನ ನಿರ್ಬಂಧ ಹೇರಿರುವುದು ಮತ್ತು ಒಂದು ವಾರದಿಂದ ಹಗಲುರಾತ್ರಿ ಯೆನ್ನದೆ ಇಡೀ ದಿನ ಧ್ವನಿವರ್ಧಕದ ಶಬ್ಧದಿಂದ ಬೇಸತ್ತಿದ್ದ ಎನ್ನಲಾಗಿರುವ ರೋಶನ್ ಫರ್ನಾಡೀಸ್ ಈ ದುರ್ಘಟನೆ ನಡೆಸಿರುವ ಆರೋಪಿ.
ಇನ್ನೇನು ಅಯ್ಯಪ್ಪ ಅಂಬಾರಿ ಪ್ರಾರಂಭವಾಗಬೇಕು ಎನ್ನುವ ಸಮಯದಲ್ಲಿ ಅಯ್ಯಪ್ಪ ದೇವಸ್ಥಾನದ ಕೊನೆಯ ದಿನದ ಸಭಾ ಕಾರ್ಯಕ್ರಮ ನಡೆಯುತಿತ್ತು. ಇದರ ನಂತರ ಪ್ರಾರಂಭವಾಬೇಕಿದ್ದ ಅಯ್ಯಪ್ಪ ಆನೆ ಅಂಬಾರಿ ವೀಕ್ಷಣೆಗೆ ಜನ ಜಂಗುಳಿ ಸೇರಿತ್ತು. ಜನತೆ ಜಾತ್ರೆಯ ಸಂಬ್ರಮದಲ್ಲಿ ತೊಡಗಿದ್ದರೆ ಈತ ಫಾರಿನ್ ರಿಟರ್ನ್ ರೋಶನ್ ಅಭ್ಯಾಸದಂತೆ ತನ್ನ ಮನೆಕಡೆ ಕಾರ್ ತಿರುಗಿಸಿದ್ದಾನೆ. ಪೊಲೀಸ್ ತಡೆಗೋಡೆ ಬಳಿ ಸೇವೆಯಲ್ಲಿದ್ದ ಪೊಲೀಸರು ಈತನ ವಾಹನ ತಡೆದಿದ್ದಾರೆ. ಆದರೆ ಈತ ಯಾರಿಗೂ ಕೇಳದೆ ಬ್ಯಾರಿಕೇಡ್ ಗೇ ಉಜ್ಜಿಕೊಂಡ ಒಳನುಗ್ಗಿದ್ದಾನೆ ಪೊಲೀಸರೊಂದಿಗೆ ಜನತೆ ಏನಾಯ್ತು ಎಂದು ನೋಡ ನೋಡುತ್ತಲೇ ಇಕೋ ಸ್ಪೋಟ್ಸ್ ವಾಹನ ಒಳನುಗ್ಗಿ ಜನರ ಮೇಲೆ ಹರಿದು ಮನೆಯೊಂದರ ಆವರಣ ಗೋಡೆಗೆ ಹೊಡೆದು ನಿಂತಿದೆ. ಇಷ್ಟರೊಳಗೆ ಜನತೆ ತಪ್ಪಿಕೊಳ್ಳುವ ಪ್ರಯತ್ನ ಮಾಡಿದರೂ ಕೂಡ ೯ ಜನರಿಗೆ ಗಾಯಗಳಾಗಿವೆ. ಅವರಲ್ಲಿ ಒಬ್ಬ ಯುವತಿ ಸಾವನ್ನಪ್ಪಿದರೆ ಉಳಿದ ಎಂಟು ಜನರಿಗೆ ಗಾಯಗಳಾಗಿವೆ.

ಗಾಯಗೊಂಡ ೮ ಜನರಲ್ಲಿ ಜಾನಕಿ ಗೋಪಾಲ ನಾಯ್ಕ ಅವರಗುಪ್ಪ, ಗಜಾನನ ನಾರಾಯಣ ಹೆಗಡೆ ಮದ್ದಿನಕೇರಿ, ಬೇಡ್ಕಣಿ, ಜ್ಯೋತಿ ಮಂಜುನಾಥ ಗೊಂಡ ಕಲಕೊಪ್ಪ, ರಾಮಪ್ಪ ಎನ್. ಬೆನ್ನೂರು, ಮಹಾದೇವಿ ಹುಚ್ಚಾ ನಾಯ್ಕ ಹೊಸೂರು, ಗೌರಿ ಉದಯ ಮಡಿವಾಳ ಜಾತಿಕಟ್ಟಾ, ಕಲ್ಪಿತಾ ನಾಯ್ಕ ಕಳೂರು, ಚೈತ್ರಾ ನಾಯ್ಕ ಕಳೂರು ಸೇರಿದ್ದಾರೆ.
ಇವರಲ್ಲಿ ಇಬ್ಬರು ಶಿವಮೊಗ್ಗದಲ್ಲಿ ಒಬ್ಬರು ಸಾಗರದಲ್ಲಿ, ಇನ್ನೊಬ್ಬರು ಸಿದ್ಧಾಪುರದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ನಾಲ್ಕು ಜನರು ಸಿದ್ಧಾಪುರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಎನ್ನುವ ಮಾಹಿತಿ ದೊರೆತಿದೆ.
