

ಸಿದ್ಧಾಪುರ,ಜು.23- ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಲಿಟ್ಲಪ್ಲವರ್ ಪ್ರೌಢಶಾಲೆ ಸಿದ್ದಾಪುರಗಳ ಸಹಯೋಗದೊಂದಿಗೆ, ಲಿಟ್ಲಪ್ಲವರ್ ಪ್ರೌಢಶಾಲೆ ಸಿದ್ದಾಪುರದಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ ಹೆಚ್,ಎಸ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಜಿ.ಹೆಗಡೆ ವಕೀಲರು, ಮುಖ್ಯ ಶಿಕ್ಷಕಿ ಸಿಸ್ಟರ ಪೌಲಿನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐ.ಜಿ.ನಾಯ್ಕ ವಕೀಲರು ಮೋಟಾರ ವಾಹನ ಕಾಯ್ದೆಯ ಬಗ್ಗೆ, ಕು.ಭಾರತಿ ವಕೀಲರು ಪೋಕ್ಸೊ ಕಾಯಿದೆಯ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಲಿಟ್ಲ ಪ್ಲವರ ಪ್ರೌಢಶಾಲೆಯ ಮ್ಯಾನೇಜರ ಸಿಸ್ಟರ ಡಯಾನಾ ವಹಿಸಿದ್ದರು. ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶಿಕ್ಷಕ ಥಾಮಸ್ ಮಾಡಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 210 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Àಗ್ಗದಮಳೆ, ಕುಗ್ಗದ ನೆರೆ
ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿವಸಗಳಿಂದ ನಿರಂತರವಾಗಿ ಸುರಿದ ಮಳೆ ಕರಾವಳಿ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಸಿದೆ.
ಹೊನ್ನಾವರ ಕುಮಟಾಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಹೊನ್ನಾವರದಲ್ಲಿ ಮಳೆ, ಪ್ರವಾಹ ಸಂತ್ರಸ್ತರಿಗೆ ಶಾಲೆಗಳಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದೆ. ಮಳೆ,ಗಾಳಿ, ಪ್ರವಾಹ, ಮರ ಬೀಳುವ ಪ್ರಕೃತಿ ಅವಗಡಗಳಿಂದಾಗಿ ಕರಾವಳಿ, ಮಲೆನಾಡಿನ ನಾಲ್ಕೈದು ಜಿಲ್ಲೆಗಳು ತತ್ತರಿಸುತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆ.ಎಸ್.ಆರ್.ಟಿ.ಸಿ.ನಾ.ನೌ.ಸಂಘದ ಪದಾಧಿಕಾರಿಗಳ ಆಯ್ಕೆ
ಸಿದ್ಧಾಪುರ ಕೆ.ಎಸ್.ಆರ್.ಟಿ.ಸಿ. ನಾಮಧಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆರ್.ಟಿ.ನಾಯ್ಕ ಅವರಗುಪ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್.ಸಿ.ನಾಯ್ಕ ತ್ಯಾರ್ಸಿ ಉಪಾಧ್ಯಕ್ಷರಾಗಿ,
ಸಂಚಾಲಕರಾಗಿ ಆರ್.ಟಿ ನಾಯ್ಕ ಬೇಡ್ಕಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಮ್.ಎನ್. ನಾಯ್ಕ ಮನ್ಮನೆ ಮಂಜುನಾಥ ನಾಯ್ಕ ಮುಂಡ್ಗೆತಗ್ಗು ಸಹಕಾರ್ಯದರ್ಶಿ, ಖಜಾಂಜಿಯಾಗಿ ಎಂ.ಎಂ.ನಾಯ್ಕ ಹಸ್ವಂತೆಆಯ್ಕೆಯಾಗಿದ್ದಾರೆ.
ಈ ಆಯ್ಕೆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಆರ್.ಟಿ.ನಾಯ್ಕ ಸಹೋದ್ಯೋಗಿಗಳೆಲ್ಲಾ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಆರ್.ಟಿ.ನಾಯ್ಕ ಬೇಡ್ಕಣಿ ಪ್ರಾರಂಭಿಕ ಮೂರು ವರ್ಷದ ಅನುಭವ ಹಂಚಿಕೊಂಡರು. ನೂತನ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಯ್ಕ ಮನ್ಮನೆ ಸಂಘದ ಶ್ರೇಯೋಭಿವೃದ್ಧಿಗೆ ಸಹಕಾರ ಕೋರಿದರು.
ಗಮನ ಸೆಳೆದ ಸಸ್ಯಮೇಳ
ಶಿರಸಿಯ ಟಿ.ಎಸ್.ಎಸ್. ಪ್ರತಿವರ್ಷ ಶಿರಸಿ ಮತ್ತು ಸಿದ್ದಾಪುರಗಳಲ್ಲಿ ಸಸ್ಯ ಮೇಳ ನಡೆಸುತ್ತದೆ. ಈ ಮೇಳಗಳಲ್ಲಿ ಹೂವು,ಹಣ್ಣಿನ ಗಿಡಗಳನ್ನು ಮಾರಾಟಮಾಡಲಾಗುತ್ತದೆ.
ಶಿರಸಿಯಲ್ಲಿ ಕಳೆದ ವಾರದಿಂದ ಪ್ರಾರಂಭವಾಗಿರುವ ಸಸ್ಯ ಮೇಳ ಜು.25 ರ ವರೆಗೆ ಇರಲಿದೆ ಎಂದು ಟಿ.ಎಸ್.ಎಸ್. ಮೂಲಗಳು ತಿಳಿಸಿವೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
