

ಸಿದ್ದಾಪುರ,ಏ೨೩- ಇಲ್ಲಿಯ ಎಸ್.ಪಿ.ಎಸ್. ಸಮೀತಿಯ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯಕ್ಕೆ ೨೬ ವರ್ಷಗಳ ಸಂಬ್ರಮ ಶುರುವಾಗಿದ್ದು ಏ.೨೪ ರ ಶುಕ್ರವಾರ ಈ ಕಾಲೇಜಿನ ರಜತಮಹೋತ್ಸವವನ್ನು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ.

ಧನ್ವಂತರಿ ಆಯುರ್ವೇದ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಸಿದ್ದಾಪುರ ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಗಳ ಉದ್ಘಾಟನೆ ನಡೆಯಲಿದೆ.
ಈ ಬಗ್ಗೆ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಸಿದ್ಧಾಪುರದ ಕೀರ್ತಿ ಹೆಚ್ಚಿಸುತ್ತಿರುವ ಧನ್ವಂತರಿ ಆಯುರ್ವೇ ದ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ ೨೫ ವಸಂತಗಳನ್ನು ಕಳೆದು ಸಮಾಜಮುಖಿಯಾಗಿ ಮುಂದುವರಿಯುತ್ತಿದೆ. ಈ ಸಂಸ್ಥೆಯ ರಜತ ಮಹೋತ್ಸವ ಮತ್ತು ಆಸ್ಫತ್ರೆ ಉದ್ಘಾಟನೆ ಕಾರ್ಯಕ್ರಮಗಳಿಗೆ ಈ ಮೂಲಕ ಆಹ್ವಾನಿಸುತಿದ್ದೇವೆ ಎಂದರು.

- ಸುವರ್ಣ ಸಂಬ್ರಮದ ಸ್ಮರಣೆಯ ಸಿದ್ಧಿವಿನಾಯಕ ಬಾಲಕಿಯರ ಪ್ರೌಢಶಾಲೆಯ ಕಟ್ಟಡದ ವರ್ಚುವಲ್ ಉದ್ಘಾಟನೆ
- # ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರು,ಸಹಕರಿಸಿದವರಿಗೆ ಸನ್ಮಾನ
- ರಾಜ್ಯ, ಹೊರರಾಜ್ಯಗಳ ಅನೇಕರು ಸೇರಿದಂತೆ ಮಹಿಳೆಯರೇ ಇಲ್ಲಿ ಕಲಿತ ಬಹುಸಂಖ್ಯಾತರು

