ನಕಲಿ fb ಖಾತೆ ತೆರೆದು ತೇಜೋವಧೆ….ಪ್ರದೀಪ್‌ ಹೆಗಡೆ ವಿರುದ್ಧ ದೂರು ದಾಖಲು

ಪ್ರತಿಷ್ಠಿತ ಕುಟುಂಬ, ಸಿದ್ಧಾಪುರ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಹಾಗೂ ಅವರ ಪತ್ನಿ ಮತ್ತು ಸಹೋದರನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ತೇಜೋವಧೆ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಸಿದ್ಧಾಪುರ ಪೊಲೀಸ್‌ ಠಾಣೆಯ ಮೂಲಕ ಸೈಬರ್‌ ಕ್ರೈಮ್‌ ಪ್ರಕರಣ ದಾಖಲಾದ ಪ್ರಸಂಗ ನಡೆದಿದೆ.

ಸಿದ್ಧಾಪುರ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ದೂರು ದಾಖಲಿಸಿದ್ದು ತಮ್ಮ ಕುಟುಂಬ ಸಾಮಾಜಿಕ,ರಾಜಕೀಯ,ಸಾರ್ವಜನಿಕ ವಲಯಗಳಲ್ಲಿ ಗೌರವಾನ್ವಿತವಾಗಿದ್ದು ಮಲವಳ್ಳಿಯ ಪ್ರದೀಪ್‌ ಸುರೇಶ್‌ ಹೆಗಡೆ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಾಗಿರುವ ತನ್ನ ಮೇಲೆ, ಜಿ.ಪಂ. ಮಾಜಿ ಸದಸ್ಯೆಯಾಗಿರುವ ತನ್ನ ಪತ್ನಿ ಸುಮಂಗಲಾ ನಾಯ್ಕ ಹಾಗೂ ಸಹೋದರ ಗಣೇಶ್‌ ನಾಯ್ಕ ಸೇರಿದಂತೆ ಇಡೀ ಕುಟುಂಬದ ಮೇಲೆ ವಿನಾ ಕಾರಣ ತೇಜೋವಧೆ ಪ್ರಯತ್ನ ಮಾಡಿರುವ ಪ್ರದೀಪ್‌ ಹೆಗಡೆ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಪ್ರದೀಪ ಹೆಗಡೆ ವಸಂತ ನಾಯ್ಕ ರ ಊರಿನಲ್ಲಿ ಜಮೀನು ಹೊಂದಿರುವ ವ್ಯಕ್ತಿ. ಈ ವ್ಯಕ್ತಿಯ ಜೊತೆ ವೈಯಕ್ತಿಕ, ಖಾಸಗಿ, ಕೌಟುಂಬಿಕ ವಿರಸಗಳಿರದಿದ್ದರೂ ಹಿಂದುತ್ವ, ಜೈಶ್ರೀರಾಮ ಎನ್ನುವ ಉಕ್ತಿಗಳ ಮೂಲಕ ವಸಂತ ನಾಯ್ಕ ಕುಟುಂಬಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಅನುಚಿತ ಕೆಲಸ ಮಾಡಿ ಅದರಿಂದ ರಾಜಕೀಯ ಕ್ಷೇತ್ರದಲ್ಲಿರುವ ವಸಂತನಾಯ್ಕ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿ ಈ ದುಷ್ಕೃತ್ಯ ಎಸಗಿದ್ದು ಈ ಅನಾಚಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಸಂತನಾಯ್ಕ ದೂರಿನಲ್ಲಿ ಕೋರಿದ್ದಾರೆ.

ಕುಲೀನ ಕುಟುಂಬದ ಪ್ರದೀಪ ಹೆಗಡೆ ಫೇಸ್‌ ಬುಕ್‌ ನಲ್ಲಿ ಮಧು ನಾಯ್ಕ ಎಸ್.‌ ಆರ್.‌ ಎನ್ನುವ ಖಾತೆ ತೆರೆದು ಅದರ ಮೂಲಕ ಇಂಥ ಕೀಳು ಕೆಲಸ ಮಾಡುತಿದ್ದ ಎನ್ನಲಾಗಿದೆ. ಬುದ್ಧಿವಂತರೆನ್ನುವ ಇಂಥ ಆಶಾಢಭೂತಿಗಳು ಈ ಭಾಗದಲ್ಲಿ ಪ್ರಭಾವಿಗಳಾಗಿರುವ ದೀವರನ್ನು ಕೇಂದ್ರೀಕರಿಸಿ ಹಿಂದುತ್ವದ ಸೋಗಿನಲ್ಲಿ ವೈದಿಕ ಅನಾಚಾರ ಮಾಡುತ್ತಿರುವ ಬಗ್ಗೆ ದೂರುಗಳಿದ್ದು ಇಂಥ ಮೂರನೇ ದರ್ಜೆಯ ಮತಾಂಧ ದುಷ್ಟ ಪರಿವಾರದ ಸೋಗಲಾಡಿಗಳನ್ನು ಒದ್ದು ಒಳಗೆ ಹಾhttps://www.youtube.com/watch?v=hzOu_a6p97Iಕುವ ಮೂಲಕ ಸಾಮಾಜಿಕ ಅಶಾಂತಿ ಬಯಸುವ ಇಂಥ ಕುತಂತ್ರಿಗಳನ್ನು ನಿಯಂತ್ರಿಸಬೇಕೆಂಬ ಬೇಡಿಕೆವ್ಯಕ್ತವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

2 Comments

  1. Желаете отправить букет без лишних хлопот?
    Тогда вам стоит обратить внимание на интересную статью о https://x-true.info/133843-buket-s-dostavkoy-v-moskve-za-2-chasa-ot-azalianow.html в Москве.
    Это просто находка для тех, кто ценит качество.
    Мы рекомендуем прочитать о том, как оформить заказ за пару минут.
    Курьеры приезжают точно в срок, а цветы всегда свежие и красиво оформлены.
    Выбирайте проверенное качество!

Leave a Reply

Your email address will not be published. Required fields are marked *